ಚಿಕ್ಕಬಳ್ಳಾಪುರ: ಬಿರು ಬೇಸಿಗೆಯ (Summer) ಬಿಸಿಲಿನ ಝಳ ಹೆಚ್ಚಾಗುವುದರೊಂದಿಗೆ ರಾಜ್ಯದಲ್ಲಿ ಚುನಾವಣೆಯ (Election) ಕಾವು ಕೂಡ ಜೋರಾಗಿದೆ. ಇದೇ ವೇಳೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಆಣೆ - ಪ್ರಮಾಣ ಪಾಲಿಟಿಕ್ಸ್ ಆರಂಭವಾಗಿದ್ದು, ದೇವರ ಪೋಟೋ (Photo) ಹಿಡಿದು ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಪ್ರಮಾಣ ಮಾಡಿದ್ದಾರೆ. ಅಲ್ಲಾ, ಗಣೇಶ, ಯೇಸು ಭಾವಚಿತ್ರ ಹಿಡಿದು ಪ್ರಮಾಣ ಮಾಡಿದ ಪ್ರದೀಪ್ ಈಶ್ವರ್ ಅವರು, ನಾನು ಸುಧಾಕರ್ ಸೇರಿದಂತೆ ಯಾರ ಬೇನಾಮಿಯೂ ಅಲ್ಲ ಅಂತ ಎಲ್ಲರ ಎದುರು ಪ್ರಮಾಣ ಮಾಡಿದ್ದಾರೆ. ಇದೇ ವೇಳೆ ಧರ್ಮಸ್ಥಳ (Dharmasthala) ಶ್ರೀ ಮಂಜುನಾಥಶ್ವೇರ, ಡಾ.ಬಿ.ಆರ್ ಅಂಬೇಡ್ಕರ್, ತಂದೆ ತಾಯಿ ಮೇಲೆ ಆಣೆ - ಪ್ರಮಾಣ ಮಾಡಿದ್ದಾರೆ.
ಆಣೆ - ಪ್ರಮಾಣ ಮಾಡಿ ಅಪಪ್ರಚಾರಕ್ಕೆ ತಿರುಗೇಟು!
ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರ ಭದ್ರಕೋಟೆ ಎಂದು ಕರೆಯಿಸಿಕೊಂಡಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಈ ಬಾರಿ ಪ್ರದೀಪ್ ಈಶ್ವರ್ ತೊಡೆ ತಟ್ಟಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸುಧಾಕರ್ ಬೇನಾಮಿ ಅಭ್ಯರ್ಥಿ ಅಂತ ಕ್ಷೇತ್ರದಲ್ಲಿ ಅಪಪ್ರಚಾರ ನಡೆಸಲಾಗುತಿದೆಯಂತೆ. ಈ ಹಿನ್ನೆಯಲ್ಲಿ ಅಪಪ್ರಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರದೀಪ್ ಈಶ್ವರ್ ಅವರು ಆಣೆ - ಪ್ರಮಾಣದ ಮೊರೆ ಹೋಗಿದ್ದಾರೆ.
ಇಂದು ನಾಮಪತ್ರ ಸಲ್ಲಿಕೆಗೆ ತೆರಳುವ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರದೀಪ್ ಈಶ್ವರ್, ಆಣೆ - ಪ್ರಮಾಣ ಮಾಡಿದರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಸಚಿವ ಸುಧಾಕರ್ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ನನ್ನ ಕೊನೆಯುಸಿರು ಇರುವವರೆಗೂ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ಇಂದು ಪಕ್ಷ ಗುರುತಿಸಿ ಟಿಕೆಟ್ ನೀಡಿದೆ. ಆದರೆ ಏಪ್ರಿಲ್ 20ರ ವರೆಗೂ ಸಮಯ ಇದ್ದು, ಹೈಕಮಾಂಡ್ ಬೇರೆ ಅವರಿಗೆ ಟಿಕೆಟ್ ನೀಡಿದರೂ ಅವರ ಪರ ನಾನು ಪ್ರಚಾರ ನಡೆಸುತ್ತೇನೆ.
ಇದನ್ನೂ ಓದಿ: MTB Nagaraj: ಸಚಿವ ಎಂಟಿಬಿ ಆಸ್ತಿ 1510 ಕೋಟಿ, ನಾಲ್ಕೇ ವರ್ಷಗಳಲ್ಲಿ ಬರೋಬ್ಬರಿ 495 ಕೋಟಿ ರೂಪಾಯಿ ಹೆಚ್ಚಳ!
ಸುಧಾಕರ್ ಸೋಲಿಸುವುದು ನಮ್ಮ ಏಕೈಕ ಗುರಿ
ನಮ್ಮ ಗುರಿ ಸುಧಾಕರ್ ಅವರನ್ನು ಸೋಲಿಸುವುದು ಮಾತ್ರ. ಎಷ್ಟೆಲ್ಲಾ ಭ್ರಷ್ಟಾಚಾರ ಆಗಿದೆ, ಕೋವಿಡ್ ಸಮಯದಲ್ಲಿ ಸಾವಿರಾರರು ಜನ ಆಸ್ಪತ್ರೆಯ ಬೆಡ್ ಮೇಲೆ ಕೊನೆಯುಸಿರೆಳೆದಿದ್ದಾರೆ ಎಂದು ಆರೋಪ ಮಾಡಿದರು. ಒಂದು ಅವಕಾಶವನ್ನು ನನಗೆ ಕೊಡಿ, ಪ್ರಮಾಣಿಕವಾಗಿ ಕೆಲಸ ಮಾಡಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ