• Home
 • »
 • News
 • »
 • state
 • »
 • Actress Ramya: ಸಚಿವ ಸುಧಾಕರ್​​ರನ್ನ ಹಾಡಿ ಹೊಗಳಿದ ರಮ್ಯಾ; ಬಿಜೆಪಿ ಸೇರ್ಪಡೆಯಾಗ್ತಾರಾ 'ಮೋಹಕ ತಾರೆ'?

Actress Ramya: ಸಚಿವ ಸುಧಾಕರ್​​ರನ್ನ ಹಾಡಿ ಹೊಗಳಿದ ರಮ್ಯಾ; ಬಿಜೆಪಿ ಸೇರ್ಪಡೆಯಾಗ್ತಾರಾ 'ಮೋಹಕ ತಾರೆ'?

ಸಚಿವ ಸುಧಾಕರ್/ ನಟಿ ರಮ್ಯಾ

ಸಚಿವ ಸುಧಾಕರ್/ ನಟಿ ರಮ್ಯಾ

ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಪಕ್ಷದ ಮಾಜಿ ಸಂಸದೆ, ಸ್ಯಾಂಡಲ್​ವುಡ್ ಮೋಹಕ ತಾರೆ ರಮ್ಯಾ ಭಾಗಿಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

 • News18 Kannada
 • 5-MIN READ
 • Last Updated :
 • Chikkaballapura (Chik Ballapur), India
 • Share this:

ಚಿಕ್ಕಬಳ್ಳಾಪುರ: ಜನವರಿ 7ರಿಂದ ಆರಂಭವಾಗಿ ಜನವರಿ 14ರ ವರೆಗೂ ಅದ್ಧೂರಿಯಾಗಿ ನಡೆದ ಚಿಕ್ಕಬಳ್ಳಾಪುರ ಉತ್ಸವ (Chikkaballapur Utsav) ಸಂಕ್ರಾಂತಿ ಹಬ್ಬದಂದು (Sankranti Festival) ಅದ್ದೂರಿಯಾಗಿ ತೆರೆಕಂಡಿದೆ. ವಿಶೇಷ ಎಂದರೆ, ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr K Sudhakar) ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಪಕ್ಷದ ಮಾಜಿ ಸಂಸದೆ, ಸ್ಯಾಂಡಲ್​ವುಡ್ ಮೋಹಕ ತಾರೆ ರಮ್ಯಾ (Actress Ramya) ಭಾಗಿಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.  ಕಾರ್ಯಕ್ರಮದ ವೇದಿಕೆಗೆ ರಮ್ಯಾ ಅವರು ಆಗಮಿಸುತ್ತಿದ್ದಂತೆ ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಸ್ವಾಗತಿಸಿದ್ದರು. ವಿಶೇಷ ಎಂದರೆ, ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಮ್ಯಾ, ಬಿಜೆಪಿ ಸಚಿವ ಸುಧಾಕರ್ ಅವರನ್ನು ಹಾಡಿ ಹೊಗಳಿದ್ದಾರೆ. ಆದರೆ ರಮ್ಯಾ ಅವರ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆಯಂತೆ. ಈ ನಡುವೆ ರಮ್ಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎಂಬ ಚರ್ಚೆ ಕೂಡ ರಾಜಕೀಯ ವಲಯದಲ್ಲಿ ಜೋರಾಗಿದೆ.


ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮೋಹಕ ತಾರೆ ರಮ್ಯಾ


ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಮ್ಯಾ ಅವರು, ಇಡೀ ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ ಉತ್ಸವ ಸದ್ದು ಮಾಡುತ್ತಿದೆ. ಟಿವಿ ನೋಡಿದರು, ಪೇಪರ್​ ಓದಿದರು ಎಲ್ಲಾ ಕಡೆ ನಿಮ್ಮದೆ ಸುದ್ದಿ. ನಾನು ಬಹಳ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದೆ, ಅವತ್ತಿಗೂ ಇವತ್ತಿಗೂ ತುಂಬಾ ವ್ಯತ್ಯಾಸವಿದೆ, ತುಂಬಾ ಬದಲಾಗಿದೆ.


ಇವತ್ತು ನಾನು ಕಾರ್ಯಕ್ರಮಕ್ಕೆ ಬರೋದಕ್ಕೆ ತಡ ಆಯ್ತು. ಇದಕ್ಕೆ ಕಾರಣ ಚಿಕ್ಕಬಳ್ಳಾಪುರದಲ್ಲಿ ಟ್ರಾಫಿಕ್​ ಆಗಿತ್ತು. ಬೆಂಗಳೂರಿನಲ್ಲಿ ಟ್ರಾಫಿಕ್ ಕೇಳಿರುತ್ತೀರಿ, ಈಗ ಚಿಕ್ಕಬಳ್ಳಾಪುರದಲ್ಲಿ ಟ್ರಾಫಿಕ್​ ಆಯ್ತು ಎಂದರೆ, ಎಲ್ಲರೂ ಇಲ್ಲಿಗೆ ಬರ್ತಿದ್ದಾರೆ ಅಂತ ಅಲ್ವಾ? ಎಂದು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: Actress Ramya: ನಾವು ಭಾರತೀಯರು ಹಾಗೇ ಕನ್ನಡಿಗರು ಕೂಡ; ಗಾಯಕ ಅದ್ನಾನ್ ಸಮಿಗೆ ರಮ್ಯಾ ಟಾಂಗ್​!


ರಮ್ಯಾ ಅವರ ಮಾತಿಗೆ ಹುಚ್ಚೆದ್ದು ಕುಣಿದ ಜನರು, ಇದು ಸಚಿವ ಸುಧಾಕರ್ ಹವಾ ಎಂದು ಘೋಷಣೆ ಕೂಗುತ್ತಿದ್ದರು. ಪ್ರೇಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡಿದ ರಮ್ಯಾ ಅವರು, ಹೀರೋಗಿಂತ ಸಚಿವ ಸುಧಾಕರ್ ಅವರ ಹವಾ ಇಲ್ಲಿ ಜೋರಾಗಿದೆ. ಸುಧಾಕರ್ ಅವರು ಮೊದಲು ನಮ್ಮ ತಂದೆಯವರಿಗೆ ಪರಿಚಯ, ಆ ಬಳಿಕ ನನಗೆ ಫ್ರೆಂಡ್ ಆದ್ರು. ಇವತ್ತು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ.
ನಾವು ಎಷ್ಟೇ ಕ್ಲೋಸ್​ ಆದರೂ ನಾನು ಯಾವತ್ತೂ ಈ ಮಾತನ್ನು ಹೇಳಿರಲಿಲ್ಲ. ನಿಮ್ಮ ಎಲ್ಲರ ಎದುರು ನಾನು ಇವತ್ತು ಹೇಳ್ತಿದ್ದೀನಿ, ನನಗೆ ತುಂಬಾ ಖುಷಿ ಆಗುತ್ತಿದೆ. ಫ್ರೆಂಡ್ ಆಗಿ ಹೆಮ್ಮೆ ಎನಿಸುತ್ತಿದೆ. ಏಕೆಂದರೆ ಸುಧಾಕರ್ ಅವರು ರಾಜಕೀಯ ಕುಟುಂಬದಿಂದ ಬಂದಿಲ್ಲ. ಆದರೂ ರಾಜಕೀಯಕ್ಕೆ ಬಂದು, ಎಷ್ಟೇ ಕಷ್ಟವಿದ್ದರೂ ಕೂಡ ಎಲ್ಲವನ್ನು ಎದುರಿಸಿ ಇವತ್ತು ಚಿಕ್ಕಬಳ್ಳಾಪುರವನ್ನು ಇಷ್ಟು ಅಭಿವೃದ್ಧಿ ಮಾಡಿ ಹೆಸರು ಪಡೆದಿದ್ದೀರಿ. ಇಲ್ಲಿನ ಜನರ ಮುಖದಲ್ಲಿ ಖುಷಿ ನೋಡಿದರೆ ಇದು ಗೊತ್ತಾಗುತ್ತೆ, ಅವರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆ ಅಂತ ಎಂದು ಹಾಡಿ ಹೊಗಳಿದ್ದರು.
ಇದನ್ನೂ ಓದಿ: Actress Ramya: ಪ್ರೇರಣಾ, ಅನಿಕೇತ್ ಪ್ರೇಮಕಥೆ ನೋಡಿ ಮತ್ತೆ ಪ್ರೀತಿಯಲ್ಲಿ ಬೀಳೋದು ಗ್ಯಾರೆಂಟಿ- ನಟಿ, ನಿರ್ಮಾಪಕಿ ರಮ್ಯಾ ಮಾತು


ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ದೂರಿ ತೆರೆ


ಚಿಕ್ಕಬಳ್ಳಾಪುರ ಜಿಲ್ಲೆಯ ಬಳಿಕ ಮೊದಲ ಬಾರಿಗೆ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಉತ್ಸವ ಸತತ 8 ದಿನಗಳ ಅದ್ದೂರಿಯಾಗಿ ನಡೆದಿತ್ತು. ಸ್ಯಾಂಡಲ್​​ವುಡ್​ ಮಾತ್ರವಲ್ಲದೆ ಪಕ್ಕದ ಟಾಲಿವುಡ್​​ನಿಂದಲೂ ಹಲವು ನಟ-ನಟಿಯರು, ಕಲಾವಿದರು, ಗಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುಧಾಕರ್ ಫೌಂಡೇಷನ್ ನಿಂದ ಅದ್ದೂರಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರ್ ​ಎಂ.ವಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿತ್ತು. ಅಲ್ಲದೇ ನಗರದ ಪ್ರಮುಖ ಬೀದಿಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು.


'ಚಿಕ್ಕಬಳ್ಳಾಪುರ ಉತ್ಸವ-2023'ರ ಅಂತಿಮ ದಿನವಾದ ಇಂದಿನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಮುಖ್ಯಮಂತ್ರಿ ಶ್ರೀ @BSYBJP, ಸಚಿವ ಶ್ರೀ @GovindKarjol, ಸಂಸದ ಶ್ರೀ @PCMohanMP ಹಾಗೂ ಖ್ಯಾತ ನಟಿ @divyaspandana ಅವರು ಭಾಗವಹಿಸಿದ್ದರು.@ckb_utsava#ChikkaballapuraUtsavaಇನ್ನು, ಕಾರ್ಯಕ್ರಮದಲ್ಲಿ ಡಾ. ಸುಧಾಕರ್ ಅವರು ಖ್ಯಾತ ಗಾಯಕ ರಾಜೇಶ್​ ಕೃಷ್ಣನ್ ಅವರೊಂದಿಗೆ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಧ್ವನಿ ನೀಡಿ ಪ್ರೇಕ್ಷಕರನ್ನು ರಂಜಿಸಿದ್ದರು. ಪ್ರತಿ ದಿನ ಬೆಳಗ್ಗೆ ಸ್ಪರ್ಧೆಗಳು, ರಾತ್ರಿ ಮನರಂಜನೆ ಕಾರ್ಯಕ್ರಮ ಹಾಗೂ ಗಣ್ಯರ ಭಾಷಣಗಳನ್ನು ಏರ್ಪಡಿಸಲಾಗಿತ್ತು.

Published by:Sumanth SN
First published: