ಚಿಕ್ಕಬಳ್ಳಾಪುರ: ನೂತನ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಅವರ ಸಾಕು ತಾಯಿ ರತ್ನಮ್ಮ ಇಂದು ನಿಧನರಾಗಿದ್ದಾರೆ. ಪೇರೇಸಂದ್ರ ಗ್ರಾಮದಲ್ಲಿ ಸಾಕು ತಾಯಿ ರತ್ನಮ್ಮ ನಿಧನರಾಗಿದ್ದು, ಅವರಿಗೆ 72 ವರ್ಷ ವಯಸ್ಸು ಆಗಿತ್ತು. ರತ್ನಮ್ಮ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಸಿಎಂ ಮತ್ತು ಡಿಸಿಎಂ ಸೇರಿದಂತೆ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆ ಪ್ರದೀಪ್ ಈಶ್ವರ್ ಬೆಂಗಳೂರಿನಲ್ಲಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ಪ್ರದೀಪ್ ಈಶ್ವರ್ ಪೇರೇಸಂದ್ರದತ್ತ ತೆರಳುತ್ತಿದ್ದಾರೆ. ಪೇರೇಸಂದ್ರ ಗ್ರಾಮಕ್ಕೆ ತೆರಳಿ ತಾಯಿ ರತ್ನಮ್ಮ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.
ಪ್ರದೀಪ್ ಈಶ್ವರ್ ಯಾರು?
ಪ್ರದೀಪ್ ಈಶ್ವರ್ ಅವರು ಜೀವಶಾಸ್ತ್ರ ಉಪನ್ಯಾಸಕರಾಗಿದ್ದಾರೆ. ಜೊತೆಗೆ ಪ್ರದೀಪ್ ಅತ್ಯುತ್ತಮ ಮೋಟಿವೇಷನಲ್ ಸ್ಪೀಕರ್ ಆಗಿದ್ದಾರೆ. ಪ್ರದೀಪ್ ಈಶ್ವರ್ ಅವರು, ಪರಿಶ್ರಮ ಅಕಾಡೆಮಿಯನ್ನು ಪ್ರಾರಂಭಿಸುವ ಮೊದಲು, ಭಾರತದ ಉದ್ದಗಲಕ್ಕೂ ಸಂಚರಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ರಾಜ್ಯದಲ್ಲೂ MBBS ಸೀಟುಗಳನ್ನು ಪಡೆಯಲು ನೂರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಅವರ ವಿದ್ಯಾರ್ಥಿಗಳು ಭಾರತದ ಬಹುತೇಕ ಉನ್ನತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಪಡೆದು ಓದುತ್ತಿದ್ದಾರೆ.
ಇದನ್ನೂ ಓದಿ: Congress Cabinet: ಮೊದಲ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ
ಪರಿಶ್ರಮ ಸಂಸ್ಥೆಯ ಸ್ಥಾಪಕ
ಪ್ರದೀಪ್ NEET ನಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯವಿರುವ ಜ್ಞಾನ ಹೊಂದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಲು ಪರಿಶ್ರಮ ಎಂಬ ಸಂಸ್ಥೆಯನ್ನು ಕಟ್ಟಿದ್ದಾರೆ. ಇವರ ಅಕಾಡೆಮಿಯ ನೀಟ್ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಶ್ರೇಯಾಂಕಗಳನ್ನು ಪಡೆದುಕೊಳ್ಳುತ್ತಿದ್ದಾರೆ.
2018ರಲ್ಲಿ ನವೀನ್ ಕಿರಣ್ ಪರ ಪ್ರಚಾರ
ಇನ್ನು2018ರ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ನವೀನ್ ಕಿರಣ್ ಪರ ಪ್ರಚಾರ ಮಾಡಿದ್ದರು. ಈ ವೇಳೆ ಅವರ ವಿರುದ್ಧ 23 ಪ್ರಕರಣಗಳು ದಾಖಲಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ