ಕೈ ಅಭ್ಯರ್ಥಿ ಅನಿಲ್ ಕುಮಾರ್ ಸೋಲಿಗೆ ಕಾಂಗ್ರೆಸ್​ನವರಿಂದಲೇ ತಂತ್ರ: ಕೊತ್ತೂರು ಮಂಜುನಾಥ್

ಕೋಲಾರ-ಚಿಕ್ಕಬಳ್ಳಾಪುರ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಅನಿಲ್ ಕುಮಾರ್ ಅವರನ್ನ ಸೋಲಿಸಲು ಕಾಂಗ್ರೆಸ್ಸಿಗರೇ ಪ್ರಯತ್ನಿಸುತ್ತಿದ್ದಾರೆ ಎಂದು ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದ್ಧಾರೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಕೋಲಾರ: ವಿಧಾ‌ನ ಪರಿಷತ್ ಚುನಾವಣೆ ಹಿನ್ನಲೆ ಈಗಾಗಲೇ ಬಹಿರಂಗ ಪ್ರಚಾರ ಹಾಗು ರಾಜಕೀಯ ಸಮಾವೇಶಗಳು ಮುಗಿದಿದ್ದು, ಇನ್ನು ಮನೆ ಮನೆ ಪ್ರಚಾರ ಬಾಕಿ ಉಳಿದಿದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಮಧ್ಯೆ ಸಾಕಷ್ಟು ಪೈಪೋಟಿಯಿದ್ದು, ಗೆಲ್ಲುವ ಅಭ್ಯರ್ಥಿ ಯಾರೆಂಬ ಲೆಕ್ಕಾಚಾರ ಈಗಲೇ ಆರಂಭವಾಗಿದೆ. ‌ಆದರೆ ಚುನಾವಣಾ ಮತದಾನಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿಯಿರುವಾಗಲೇ,  ಕೋಲಾರ ಕಾಂಗ್ರೆಸ್  ಪಕ್ಷದ ಅಭ್ಯರ್ಥಿ ಅನಿಲ್‍ಕುಮಾರ್ ಮಾತನಾಡುವ ವೇಳೆ, ತಮ್ಮನ್ನ ಸೋಲಿಸುವ ಪ್ರಯತ್ನ  ನಡೆಯುತ್ತಿದೆ ಎಂದರು.

ಕೋಲಾರ ಹಾಗು ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಚುನಾವಣೆಯ ಶ್ರೀನಿವಾಸಪುರದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಕೈ ಅಭ್ಯರ್ಥಿ ಅನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗು ಅವರ ಪುತ್ರಿ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅವರು ಅನಿಲ್ ಕುಮಾರ್ ಅವರಿಂದ ಇಷ್ಟುದಿನ ಬಹಿರಂಗ ಪ್ರಚಾರದಲ್ಲಿ ಭಾಗಿಯಾಗದೆ ಅಂತರ ಕಾಯ್ದುಕೊಂಡಿದ್ದರು. ಚುನಾವಣೆ ಘೋಷಣೆಯಾದ ದಿನಾಂಕದಿಂದ ಡಿಸೆಂಬರ್ 06 ರೆವರೆಗು ಯಾವುದೇ ಪ್ರಚಾರದಲ್ಲಿ ಅಪ್ಪ, ಮಗಳು ಕಾಣಿಸಿಕೊಂಡಿಲ್ಲ. ಆದರೆ ಕೆಜಿಎಫ್​ನಲ್ಲಿ ಡಿಸೆಂಬರ್ 7 ರಂದು ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಾಶಶಿಧರ್ ಭಾಗಿಯಾಗಿದ್ದರು. ಈ ಮೂಲಕ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಅವರು ಅಭ್ಯರ್ಥಿ ಅನಿಲ್‍ಕುಮಾರ್ ಹಾಗು ರಮೇಶ್‍ಕುಮಾರ್ ವಿರುದ್ದ ತಮ್ಮ ಸಿಟ್ಟನ್ನ ಪರೋಕ್ಷವಾಗಿ ಹೊರಹಾಕಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್​​ನಲ್ಲಿ ಮೈಸೂರು ಗೂಳಿ-ಕನಕಪುರ ಗೂಳಿ ಮಧ್ಯೆ ಕಾಳಗ ನಡೆಯುತ್ತಿದೆ: ಶ್ರೀರಾಮುಲು ಮಾತಿನೇಟು!

ಕೊತ್ತೂರು ಮಂಜುನಾಥ್ ಆರೋಪ:

ಇನ್ನು ಕಾಂಗ್ರೆಸ್ ನವರೇ ಅನಿಲ್‍ಕುಮಾರ್ ಸೋಲಿಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ, ಶ್ರೀನಿವಾಸಪುರದಲ್ಲಿ ಅನಿಲ್ ಕುಮಾರ್ ಪರವಾಗಿ ಪ್ರಚಾರ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೊತ್ತೂರು ಮಂಜುನಾಥ್, ಕಾಂಗ್ರೆಸ್ ನವರೇ ಕೆಲವರು ಅನಿಲ್ ಕುಮಾರ್ ಅವರ ಸೋಲಿಗೆ ಇಂದಿಗೂ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೈ ಅಭ್ಯರ್ಥಿ ಅನಿಲ್‍ಕುಮಾರ್ ತಮ್ಮ ಪಕ್ಷದವರಿಂದ ತಮ್ಮನ್ನು ಸೋಲಿಸಲು ಪ್ರಯತ್ನ ನಡೆಸುತ್ತಿರುವ ವಿಚಾರವನ್ನು ತಳ್ಳಿಹಾಕಿದರು. ನಮ್ಮವರು ನನ್ನನ್ನ ಸೋಲಿಸಲು ಯಾಕೆ ಪ್ರಯತ್ನಿಸುತ್ತಾರೆ. ಚುನಾವಣೆ ಎಂದ ಮೇಲೆ ವಿಪಕ್ಷಗಳ ಮುಖಂಡರು ಪ್ರತಿಸ್ಪರ್ಧಿಗಳನ್ನು ಸೋಲಿಸುವ ಪ್ರಯತ್ನ ಸಹಜ. ಕೆಎಚ್ ಮುನಿಯಪ್ಪ ನಮ್ಮ ಪರವಾಗಿಯೇ ಇದ್ದಾರೆಂದು ಕೈ ಅಭ್ಯರ್ಥಿ ಸ್ಪಷ್ಟನೆ ನೀಡಿದರು.

ಕೋಲಾರದಲ್ಲಿ ಮುಂದುವರಿದ ಬಿಜೆಪಿಯ ಆಪರೇಷನ್ ಕಮಲ

ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆ ಕೋಲಾರ ಕ್ಷೇತ್ರವನ್ನ ಗೆಲ್ಲಲೇ ಬೇಕೆಂದು  ಆರೋಗ್ಯ ಸಚಿವ ಸುಧಾಕರ್ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಟೊಂಕ ಕಟ್ಟಿ ನಿಂತಿದ್ದಾರೆ.  ಜಿಲ್ಲೆಯಾದ್ಯಂತ ಪ್ರಯಾಣ ಮುಂದುವರಿಸಿರುವ ನಾಯಕರು ತಮ್ಮ ಆಪರೇಷನ್ ಕಮಲದ ಮೂಲಕ ನಾಯಕರನ್ನ ಬೆಜಿಪೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರೆಡ್ಡಿ ಕೈ ಬಿಟ್ಟು ಕಮಲ ಹಿಡಿದಿದ್ದರು, ಬಳಿಕ ಮಾಜಿ ಸಚಿವ ವರ್ತೂರು ಪ್ರಕಾಶ್, ಕೆಜಿಎಪ್ ನ ಎ.ಶ್ರೀನಿವಾಸ್, ವಡಗೂರು ಹರೀಶ್ ಬಿಜೆಪಿ ಸೇರದೆ ಇದ್ದರು ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ ರಿಗೆ ತಮ್ಮ ಬೆಂಬಲ ಸೂಚಿಸಿ ಪ್ರಚಾರ ಕಾರ್ಯದಲ್ಲು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಜಾತ್ಯಾತೀತ ಅಂತ ಹೇಳಿಕೊಂಡು ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ: BJP- JDS ಮೈತ್ರಿಗೆ ಸಿದ್ದರಾಮಯ್ಯ ವ್ಯಂಗ್ಯ

ಇದೀಗ ಮತದಾನಕ್ಕೆ ಇನ್ನು 2 ದಿನ ಬಾಕಿ ಇರುವಾಗ ಮತ್ತೊಮ್ಮೆ ಬಿಜೆಪಿ ಆಪರೇಷನ್ ಕಮಲ ಮುಂದುವರೆದಿದೆ,  ಬಂಗಾರಪೇಟೆಯ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಂ ನಾರಾಯಣಸ್ವಾಮಿ,  ಉಸ್ತುವಾರಿ ಸಚಿವ ಮುನಿರತ್ನ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಮುಳಬಾಗಿಲು ಜೆಡಿಎಸ್ ಮುಖಂಡ ಕಲ್ಲಿಪಲ್ಲಿ ಪ್ರಕಾಶ್ ನಿವಾಸ ಹಾಗು ಹಿರಿಯ ಜೆಡಿಎಸ್ ಆಲಂಗೂರು ಶಿವಣ್ಣ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಕಲ್ಲಿಪಲ್ಲಿ ಪ್ರಕಾಶ್ ನಿವಾಸಕ್ಕೆ ಭೇಟಿ ನೀಡುವಾಗ,   ಸಚಿವ ಮುನಿರತ್ನ ರಿಗೆ,  ಸಂಸದ ಪಿಸಿ ಮೋಹನ್, ಸಂಸದ ಮುನಿಸ್ವಾಮಿ,  ಶಾಸಕ ಎಚ್ ನಾಗೇಶ್, ಮಾಜಿ ಶಾಸಕ ಮಂಜುನಾಥ್ ಗೌಡ, ವರ್ತೂರು ಪ್ರಕಾಶ್ ಹಲವರು ಸಾಥ್ ನೀಡಿದರು‌

ಸಚಿವ ಡಾ ಕೆ ಸುಧಾಕರ್ ಗೆ ಕೋಲಾರ ಜೆಡಿಎಸ್ ಅಧ್ಯಕ್ಷ್ಯೆ ರಾಜೇಶ್ವರಿ ಟಾಂಗ್

ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿಗೆ ಜೆಡಿಎಸ್ ಪಕ್ಷವೇ ಸಹಕಾರ ನೀಡಲಿ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಕೋಲಾರ ಜೆಡಿಎಸ್ ಅಧ್ಯಕ್ಷ್ಯೆ ರಾಜೇಶ್ವರಿ ಟಾಂಗ್ ಕೊಟ್ಟಿದ್ದಾರೆ.

ಮೊನ್ನೆ ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ಜೆಡಿಎಸ್ ಪಕ್ಷಸ ಸಹಕಾರವನ್ನ ನಾವು ನಿರೀಕ್ಷೆ ಮಾಡಿದ್ದೇವೆ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ ಅಧ್ಯಕ್ಷ್ಯೆ ರಾಜೇಶ್ವರಿ,  ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಕ್ಕಲೇರಿ ರಾಮು ಮೊದಲ ಸ್ಥಾನದಲ್ಲಿದ್ದಾರೆ.

ಸರ್ಕಾರ ಹಾಗೂ ಹಣ ಬಲದಿಂದ ಚುನಾವಣೆ ಗೆಲ್ಲುವ ಆಸೆಯನ್ನ ಸಚಿವ ಸುಧಾಕರ್ ಬಿಡಲಿ ಎಂದು ಸಲಹೆ ನೀಡಿದ್ದು,  ಕೋಲಾರದಲ್ಲಿ ಜೆಡಿಎಸ್ ಗೆ ಬಿಜೆಪಿ ಎಂದೂ ಪೈಪೋಟಿ ನೀಡಿಲ್ಲ.  ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವ ಮಾತಿಲ್ಲ ಎಂದು,  ಸಚಿವ ಸುಧಾಕರ್ ಹೇಳಿಕೆಗೆ ಕೋಲಾರ ಜೆಡಿಎಸ್ ಅಧ್ಯಕ್ಷ್ಯೆ ರಾಜೇಶ್ವರಿ ತಿರುಗೇಟು ನೀಡಿದ್ದಾರೆ‌.
Published by:Mahmadrafik K
First published: