ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 30 ಕೋಟಿಗೂ ಹೆಚ್ಚು ಮೌಲ್ಯದ ಅರಣ್ಯ ಭೂಮಿ ವಶಕ್ಕೆ 

ಕಳೆದ 4 ವರ್ಷಗಳಿಂದ ಸತತ ನೋಟೀಸ್ ನೀಡಿದರೂ ಪ್ರಭಾವ ಬಳಸಿ ಉತ್ತರವನ್ನೂ ನೀಡದೆ, ಜಮೀನು ಖಾಲಿ ಮಾಡದೆ ಸತಾಯಿಸುತ್ತಿದ್ದರು. ಇದರಿಂದಾಗಿ ಕೋರ್ಟ್ ಆದೇಶ ಪಡೆದು ಸುಮಾರು 30 ಕೋಟಿಗೂ ಹೆಚ್ಚು ಬೆಲೆಬಾಳುವ ಮೀಸಲು ಅರಣ್ಯ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಅರಣ್ಯ ಭೂಮಿ

ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಅರಣ್ಯ ಭೂಮಿ

  • Share this:
ಹೊಸಕೋಟೆ (ಸೆ. 22): ಬೆಂಗಳೂರು ಸುತ್ತಮುತ್ತಲ ಪ್ರದೇಶವೆಂದರೆ ಭೂಗಳ್ಳರು ಕಣ್ಣು ಬಾಯಿ ಬಿಟ್ಟುಕೊಂಡು ಕಾಯುತ್ತಾ ಇರುತ್ತಾರೆ. ಅರಣ್ಯ ಹೋಗಲಿ, ಕೆರೆ, ಕುಂಟೆ, ಸರ್ಕಾರ ಜಾಗ ಹೋಗಲಿ ಸ್ಮಶಾನವನ್ನೂ ಬಿಡದೆ ಬೇಲಿ ಹಾಕಿ ನಮ್ಮದೇ ಅಂತ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡಿ ಎಸ್ಕೇಪ್ ಆಗುತ್ತಾರೆ. ಹೀಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗುಳ್ಳಹಳ್ಳಿ ಗ್ರಾಮದ ಸರ್ವೆ ನಂಬರ್ 1 ಮತ್ತು ದೊಡ್ಡಹರಳಗೆರೆ ಗ್ರಾಮದ ಸರ್ವೆ ನಂಬರ್ 45ರಲ್ಲಿ ಪ್ರಭಾವಿಗಳಿಂದ ಒತ್ತುವರಿಗೆ ಒಳಗಾಗಿದ್ದ ಸುಮಾರು 16 ಎಕರೆ ಜಮೀನನ್ನು ಅರಣ್ಯ ಇಲಾಖೆ ಹೊಸಕೋಟೆ ವಿಭಾಗದ ರೇಂಜ್ ಆಧಿಕಾರಿ ವರುಣ್ ನೇತೃತ್ವದಲ್ಲಿ ತೆರವು ಗೊಳಿಸಿ ವಶಕ್ಕೆ ಪಡೆಯಲಾಯಿತು.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಹೊಸಕೋಟೆ ರೇಂಜ್ ಅರಣ್ಯಾಧಿಕಾರಿ ವರುಣ್, ಈ ಭೂಮಿ ಮೌಲ್ಯ ಸುಮಾರು 30 ಕೋಟಿಗೂ ಹೆಚ್ಚಿದ್ದು, ಇಲ್ಲಿನ ಭೂಮಿಯಲ್ಲಿ ಐದಾರು ಎಕರೆಯಷ್ಟು ಮಾತ್ರ ವ್ಯವಸಾಯಕ್ಕೆ ಬಳಸಲಾಗಿತ್ತು. ಉಳಿದ ಜಮೀನಿನಲ್ಲಿ ಸುಮಾರು ಮನೆಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡಲಾಗಿತ್ತು. ಇನ್ನೂ ಕೆಲವರು ಶೆಡ್, ಗೋಡೌನ್​ಗಳನ್ನು ನಿರ್ಮಾಣ ಮಾಡಿಕೊಂಡಿದ್ದರು.

Chikkaballapur Forest Department Officers Recovers 30 Crore Value Forest Land.
ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಅರಣ್ಯ ಭೂಮಿ


ಕಳೆದ 4 ವರ್ಷಗಳಿಂದ ಸತತ ನೋಟೀಸ್ ನೀಡಿದರೂ ಪ್ರಭಾವ ಬಳಸಿ ಉತ್ತರವನ್ನೂ ನೀಡದೆ, ಜಮೀನು ಖಾಲಿ ಮಾಡದೆ ಸತಾಯಿಸುತ್ತಿದ್ದರು. ಇದರಿಂದಾಗಿ ಕೋರ್ಟ್ ಆದೇಶ ಪಡೆದು ಸುಮಾರು 30 ಕೋಟಿಗೂ ಹೆಚ್ಚು ಬೆಲೆಬಾಳುವ ಮೀಸಲು ಅರಣ್ಯ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆದು, ಸುಮಾರು ಈ ಭೂಮಿಯಲ್ಲಿ 6 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ.

ಇಲ್ಲಿ ಇದ್ದ ಗೋಡೌನ್, ಶೆಡ್, ಮನೆಗಳನ್ನು ತೆರವುಗೊಳಿಸಿ ಅರಣ್ಯ ಪ್ರದೇಶ ಮರು ಸ್ಥಾಪನೆಗೆ ಚಾಲನೆ ನೀಡಲಾಗಿದ್ದು ಮುಂದಿನ ಒಂದು ವಾರದಲ್ಲಿ ಕಾಡು ಜಾತಿಯ ಗಿಡ ನೆಡುವ ಕೆಲಸ ಮುಕ್ತಾಯವಾಗಿದೆ. ಅರಣ್ಯ ಭೂಮಿಗೆ ಬೇಲಿ ಅಳವಡಿಕೆ ಕಾರ್ಯ ಸಹ ಆಗಲಿದೆ. ಇನ್ನೂ ಕೆಲವು ಅರಣ್ಯ ಮತ್ತು ಮೀಸಲು ಅರಣ್ಯ ಭೂಮಿಗಳು ಭೂಗಳ್ಳರ, ಪ್ರಭಾವಿಗಳ ಹಿಡಿತದಲ್ಲಿದ್ದು ಯಾವುದೇ ಕಾರಣಕ್ಕೂ ಅರಣ್ಯ ಭೂಮಿ ಭೂಗಳ್ಳರ ಪಾಲಾಗಲು ಬಿಡುವುದಿಲ್ಲ, ಭೂಗಳ್ಳರು ಎಷ್ಟೇ ಪ್ರಭಾವಿಗಳಾದ್ರೂ ಕಾನೂನು ಕುಣಿಕೆ ಬಿಗಿ ಗೊಳಿಸಿ ಸಾರ್ವಜನಿಕ ಆಸ್ತಿ ರಕ್ಷಣೆ ಮಾಡೇ ಮಾಡುತ್ತೇವೆ ಎಂದು ವರುಣ್ ನ್ಯೂಸ್ 18 ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Published by:Sushma Chakre
First published: