ಮೈತ್ರಿ ಸರ್ಕಾರವನ್ನು ಕಿತ್ತೊಗೆದಿದ್ದು ನಾನೇ, ಏನೀಗ?; ಎಚ್​.ಡಿ. ಕುಮಾರಸ್ವಾಮಿಗೆ ಡಾ. ಸುಧಾಕರ್ ತಿರುಗೇಟು

ನೀವು ನಿಮ್ಮ ಸ್ವಂತ ಪರಿಶ್ರಮದಿಂದ ರಾಜಕೀಯಕ್ಕೆ ಬಂದವರಲ್ಲ. ನಿಮ್ಮ ತಂದೆಯಿಂದ ನೀವು ರಾಜಕಾರಣಿ ಆದಿರಿ. ನೀವು ಬಜೆಟ್ ಮಂಡನೆಯಲ್ಲಿ ಎಷ್ಟು ಕಮಿಷನ್ ತಗೊಂಡಿದ್ದಿರಿ ಎಂಬುದು ನನಗೂ ಗೊತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

news18-kannada
Updated:November 26, 2019, 4:41 PM IST
ಮೈತ್ರಿ ಸರ್ಕಾರವನ್ನು ಕಿತ್ತೊಗೆದಿದ್ದು ನಾನೇ, ಏನೀಗ?; ಎಚ್​.ಡಿ. ಕುಮಾರಸ್ವಾಮಿಗೆ ಡಾ. ಸುಧಾಕರ್ ತಿರುಗೇಟು
ಡಾ. ಕೆ. ಸುಧಾಕರ್- ಎಚ್​.ಡಿ. ಕುಮಾರಸ್ವಾಮಿ
  • Share this:
ಚಿಕ್ಕಬಳ್ಳಾಪುರ (ನ. 26): ನಿಮ್ಮಷ್ಟು ನೀಚ ರಾಜಕಾರಣಿ ನಾನಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ. ನಿಮ್ಮ ಸರ್ಕಾರವನ್ನು ಕಿತ್ತೊಗೆದಿದ್ದು ನಾನೇ ಎಂದು ಧೈರ್ಯವಾಗಿ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಗೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್- ಜೆಡಿಎಸ್ ವಿರುದ್ಧ ಡಾ. ಸುಧಾಕರ್ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಎಚ್​ಡಿಕೆ ವಿರುದ್ಧ ಹರಿಹಾಯ್ದ ಡಾ. ಸುಧಾಕರ್, ನಿಮ್ಮಂತ ನೀಚ ರಾಜಕಾರಣಿ ನಾನಲ್ಲ. ನಾನೇ ಧೈರ್ಯವಾಗಿ ಹೇಳುತ್ತೇನೆ ನಿಮ್ಮ ಸರ್ಕಾರವನ್ನು ಕಿತ್ತೊಗೆದಿದ್ದು ನಾನೇ ಎಂದು. ಯಾರಿಗೂ ಹೆದರುವವನು ನಾನಲ್ಲ. ನೀವು ನಿಮ್ಮ ಸ್ವಂತ ಪರಿಶ್ರಮದಿಂದ ರಾಜಕೀಯಕ್ಕೆ ಬಂದವರಲ್ಲ. ನಿಮ್ಮ ತಂದೆಯಿಂದ ನೀವು ರಾಜಕಾರಣಿ ಆದಿರಿ. ನೀವು ಬಜೆಟ್ ಮಂಡನೆಯಲ್ಲಿ ಎಷ್ಟು ಕಮಿಷನ್ ತಗೊಂಡಿದ್ದಿರಿ ಎಂಬುದು ನನಗೂ ಗೊತ್ತಿದೆ ಎಂದು ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್​ಗೆ ಬಿಜೆಪಿ ಸೇರಲು ಭಾರೀ ಆಫರ್ ನೀಡಿದ್ದರಂತೆ ಜನಾರ್ದನ ರೆಡ್ಡಿ!

ಮಂಚೇನಹಳ್ಳಿಯನ್ನು ತಾಲೂಕಾಗಿಸಬೇಕೆಂಬ 20 ವರ್ಷಗಳ ಹೋರಾಟವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎರಡೇ ತಿಂಗಳಲ್ಲಿ ನನಸು ಮಾಡಿದ್ದಾರೆ. ಮಂಚೇನಹಳ್ಳಿ ತಾಲೂಕನ್ನಾಗಿ ಮಾಡಿದ್ದು ರಾಜಕೀಯ ಉದ್ದೇಶದಿಂದ ಎಂದು ಕೆಲವರು ಹೇಳುತ್ತಾರೆ. ಆಡಳಿತ ವಿಕೇಂದ್ರೀಕರಣಕ್ಕಾಗಿ ತಾಲ್ಲೂಕು ವಿಭಜನೆ ಮಾಡಲಾಗಿದೆ. ಈ ವಿಷಯದಲ್ಲಿ ಆರಂಭದಿಂದಲೂ ಕಾಂಗ್ರೆಸ್, ಜೆಡಿಎಸ್​ ಸುಳ್ಳು ಹೇಳಿಕೊಂಡೇ ಬಂದಿತು. ಆದರೆ, ಮಂಚೇನಹಳ್ಳಿಗೆ ನಾನು ಮುಂದಿನ ಮೂರೂವರೆ ವರ್ಷಗಳಲ್ಲಿ ಶಾಶ್ವತ ನೀರಾವರಿ ಕಲ್ಪಿಸುತ್ತೇನೆ. ರಾಜಕೀಯ ಲಾಭಕ್ಕಾಗಿ ಉತ್ತರ ಪಿನಾಕಿನಿ ನದಿಯಿಂದ ಅಕ್ರಮ ಮರಳು ಗಣಿಗಾರಿಗೆ ಮಾಡಿದ ಶಿವಶಂಕರ್ ರೆಡ್ಡಿಗೆಮಂಚೇನಹಳ್ಳಿಯಲ್ಲಿ ಮತ ಕೇಳಲು ಯಾವುದೇ ನೈತಿಕ ಹಕ್ಕಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಮಂಚೇನಹಳ್ಳಿಯನ್ನು ಪರಿಪೂರ್ಣ ತಾಲೂಕನ್ನಾಗಿ ಮಾಡುತ್ತೇನೆ ಎಂದು ಡಾ. ಸುಧಾಕರ್ ಭರವಸೆ ನೀಡಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಎಂಟಿಬಿ ನಾಗರಾಜ್, ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್ ದೂರು

ಕಮಿಷನ್​ ಆಸೆಗೆ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಯಿತು ಎಂಬ ಆರೋಪಗಳು ವಿಪಕ್ಷದವರಿಂದ ಕೇಳಿಬರುತ್ತಿವೆ. ನಾವು ಕಮಿಷನ್​ಗಾಗಿ ಮೆಡಿಕಲ್ ಕಾಲೇಜು ತಂದಿಲ್ಲ. ಅದರ ಹಿಂದಿನ ಉದ್ದೇಶ ಏನೆಂದು ಜನರಿಗೆ ಗೊತ್ತಿದೆ ಎಂದು ಅನರ್ಹ ಶಾಸಕ ಡಾ. ಕೆ. ಸುಧಾಕರ್ ಬಿಜೆಪಿ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸ ತಾಲ್ಲೂಕು ಮಂಚೇನಹಳ್ಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿಗೆ ಆಗಮಿಸಿ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರವಾಗಿ ಪ್ರಚಾರ ನಡೆಸಿದರು. ಈ ವೇಳೆಮಂಚೇನಹಳ್ಳಿಯಲ್ಲಿ ಬೃಹತ್ ಮೆರವಣಿಗೆ ನಡೆಸಿ, ಡೊಳ್ಳು ಕುಣಿತ, ವೀರಗಾಸೆ, ವಾಧ್ಯಘೋಷ್ಠಿ ಮೂಲಕ ಕಾರ್ಯಕರ್ತರು ಸ್ವಾಗತಿಸಿದರು. ಬಿಜೆಪಿ ನಾಯಕರಾದ ಪಿ.ಸಿ ಮೋಹನ್, ಸಿ.ಟಿ ರವಿ, ಎಂಎಲ್ ಸಿ ನಾರಾಯಣ ಸ್ವಾಮಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಭಾಗಿಯಾಗಿದ್ದರು.
First published:November 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading