• Home
  • »
  • News
  • »
  • state
  • »
  • Adiyogi Statue: ಕರುನಾಡಲ್ಲಿ ತಲೆಯೆತ್ತಿನಿಂತ ಆದಿಯೋಗಿ, ಚಿಕ್ಕಬಳ್ಳಾಪುರದಲ್ಲಿ ಸಂಕ್ರಾಂತಿಯಂದೇ ಲೋಕಾರ್ಪಣೆಗೊಂಡ ಬೃಹತ್ ಪ್ರತಿಮೆ

Adiyogi Statue: ಕರುನಾಡಲ್ಲಿ ತಲೆಯೆತ್ತಿನಿಂತ ಆದಿಯೋಗಿ, ಚಿಕ್ಕಬಳ್ಳಾಪುರದಲ್ಲಿ ಸಂಕ್ರಾಂತಿಯಂದೇ ಲೋಕಾರ್ಪಣೆಗೊಂಡ ಬೃಹತ್ ಪ್ರತಿಮೆ

ಆದಿಯೋಗಿ ಪ್ರತಿಮೆ

ಆದಿಯೋಗಿ ಪ್ರತಿಮೆ

ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲೇ ಈ ಆದಿಯೋಗಿ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂದು ಹೆಸರಿಡಲಾಗಿದೆ.

  • News18 Kannada
  • Last Updated :
  • New Delhi, India
  • Share this:

ಚಿಕ್ಕಬಳ್ಳಾಪುರ: ಜಗತ್ತಿನ ಅತೀ ದೊಡ್ಡ ಮುಖ ಎಂದು ಪ್ರಖ್ಯಾತಿ ಹೊಂದಿರುವ ಕೊಯಮತ್ತೂರಿನಲ್ಲಿರುವ (Coimbatore) ಆದಿಯೋಗಿ  ಪ್ರತಿಮೆಯನ್ನು (Adiyogi statue) ಕರ್ನಾಟಕದಲ್ಲಿಯೂ (Karnataka) ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಪ್ರತಿಮೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಶ್ರೀ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಅನಾವರಣಗೊಳಿಸಿದ್ದಾರೆ. ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಆವಲಹಳ್ಳಿ ಬಳಿ ಇಂದು ಸಂಜೆ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಶಾ ಫೌಂಡೇಶನ್ ವತಿಯಿಂದ ಆದಿಯೋಗಿ ಪ್ರತಿಮೆ ಅನಾವರಣಗೊಳಿಸಲಾಯಿತು. ವಿಶೇಷವೆಂದರೆ ಮಕರ ಸಂಕ್ರಾಂತಿ (Makara Sankranti) ಹಬ್ಬದಂದೇ ಈ ಪ್ರತಿಮೆಯ ದರ್ಶನ ಪಡೆದು ಭಕ್ತರು ಪುನೀತರಾದರು.




ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂಬ ಹೆಸರು


ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರಬೆಟ್ಟದ ತಪ್ಪಲಿನಲ್ಲೇ ಈ ಆದಿಯೋಗಿ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂದು ಹೆಸರಿಡಲಾಗಿದೆ.




112 ಅಡಿ ಎತ್ತರವಿರುವ ಆದಿಯೋಗಿ ಮೂರ್ತಿ


ಈ ಆದಿಯೋಗಿ ಮೂರ್ತಿ ಕೊಯಂಬತ್ತೂರಿನಲ್ಲಿರುವ ಆದಿಯೋಗಿ ಮೂರ್ತಿಯಷ್ಟೇ, ಅಂದರೆ ಬರೋಬ್ಬರಿ 112 ಅಡಿ ಎತ್ತರವಿದೆ. ಕೊಯಮತ್ತೂರಿನ ಆದಿಯೋಗಿ ಮೂರ್ತಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆದರೆ ಚಿಕ್ಕಬಳ್ಳಾಪುರದಲ್ಲಿ ಸಂಕ್ರಾಂತಿ ವೈಭವ ಕಳೆಗಟ್ಟಲಿದೆ. ಚಿಕ್ಕಬಳ್ಳಾಪುರದ ಆದಿಯೋಗಿ ಮೂರ್ತಿ ಆವರಣದಲ್ಲೇ ನವಗ್ರಹ ದೇಗುಲವಿದೆ. ಇಲ್ಲೇ ವಿಶೇಷ ಲಿಂಗ ಭೈರವಿ ದೇವಿಯ ದರ್ಶನ ಮಾಡಬಹುದಾಗಿದೆ. ಅಲ್ಲದೇ ಒಂದು ಪುಟ್ಟ ಜಲಪಾತವೂ ಸಹ ನಿಮ್ಮ ದಾರಿಯಲ್ಲಿ ಸಿಗಲಿದೆ.


ಬೆಂಗಳೂರಿನಿಂದ 65ಕಿ.ಮೀ ದೂರದಲ್ಲಿರುವ ಆದಿಯೋಗಿ ಪ್ರತಿಮೆ


112 ಅಡಿ ಎತ್ತರದ ಆದಿಯೋಗಿಯ ಪ್ರತಿಮೆಯು ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಸ್ಟ್ 45 ಕಿಲೋ ಮೀಟರ್, ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ 63 ಕಿಲೋ ಮೀಟರ್ ಪ್ರಯಾಣಿಸಿದರೆ ನೀವು ಆದಿಯೋಗಿ ದರ್ಶನ ಮಾಡಬಹುದು. ಸದ್ಯ ಈ ಆದಿಯೋಗಿ ಮೂರ್ತಿಯ ಹತ್ತಿರ ಇಶಾ ಫೌಂಡೇಶನ್​ನ ಚಿಕ್ಕ ಕ್ಯಾಂಟೀನ್ ಇದೆ ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಇಲ್ಲ.




ಶುಕ್ರವಾರ ಪ್ರತಿಮೆ ಅನಾವರಣಕ್ಕೆ ಗ್ರೀನ್ ಸಿಗ್ನಲ್​ ಕೊಟ್ಟ ನ್ಯಾಯಾಲಯ


ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ ನಿರ್ಮಿಸುತ್ತಿರುವ ಈ ಪ್ರತಿಮೆಯು ಪರಿಸರ ಸೂಕ್ಷ್ಮ ಪ್ರದೇಶದಲ್ಲಿದೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು. ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯ ಅನಾವರಣ ಸಮಾರಂಭವನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಲು ಶುಕ್ರವಾರ ಅನುಮತಿ ನೀಡಿತ್ತು.


ಕಾರ್ಯಕ್ರಮಕ್ಕಾಗಿ ಯಾವುದೇ ಮರ ಕಡಿಯದಂತೆ ನ್ಯಾಯಾಲಯ ಆದೇಶ


ಶುಕ್ರವಾರ ಉದ್ಘಾಟನಾ ಸಮಾರಂಭವನ್ನು ನಡೆಸಲು ಹೈಕೋರ್ಟ್‌ನ ವಿಭಾಗೀಯ ಪೀಠ ಇಶಾ ಫೌಂಡೇಶನ್‌ಗೆ ಅನುಮತಿ ನೀಡಿತು ಆದರೆ ಸ್ಥಳದಲ್ಲಿ ನಿರ್ಮಾಣ ಚಟುವಟಿಕೆಗಳ ಬಗ್ಗೆ ಯಥಾಸ್ಥಿತಿಗೆ ಆದೇಶಿಸಿದೆ. ನಿರ್ಮಾಣ ಚಟುವಟಿಕೆಗಳನ್ನು ಮುಂದುವರಿಸಲು ಅನುಮತಿಸದ ಕಾರಣ ಕಾರ್ಯಕ್ರಮಕ್ಕಾಗಿ ಯಾವುದೇ ಮರಗಳನ್ನು ಕಡಿಯಬಾರದು ಎಂದು ನ್ಯಾಯಾಲಯವು ಒತ್ತಿಹೇಳಿದೆ.




ಇದನ್ನೂ ಓದಿ: Urfi Javed: ಸದ್ಗುರು ಬೆಂಬಲಿಸುವವರು ನನ್ನನ್ನು ಫಾಲೋ ಮಾಡ್ಬೇಡಿ! ಜಗ್ಗಿ ವಾಸುದೇವ್ ವಿರುದ್ಧ ಉರ್ಫಿ ಗರಂ


ಬಸ್​ ಮೂಲಕ ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆಗೆ ತಲುಪೋದೇಗೆ?


ಬಸ್​ ಮೂಲಕ ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆ ದರ್ಶನ ಪಡೆಯಲು ಬರುವುದಾದರೆ, ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಸ್ ಹತ್ತಿದರೆ ದೇವನಹಳ್ಳಿ ರಾಣಿ ಸರ್ಕಲ್​ ಬಳಿ ನಿಮಗೆ ಆದಿಯೋಗಿ ಬಳಿ ತಲುಪಲು ಬಸ್ ಸಿಗುವ ಸಾಧ್ಯತೆಯಿದೆ. ಅದಕ್ಕಿಂತ ಬೆಂಗಳೂರಿನಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿಂದ ದೊಡ್ಡಬಳ್ಳಾಪುರ ಬಸ್ ಹತ್ತಿದರೆ ಮಧ್ಯೆ ನಂದಿ ಬಸ್ ಸ್ಟಾಪ್ ಸಿಗುತ್ತೆ. ಹೀಗೂ ನೀವು ಆದಿಯೋಗಿ ಶಿವನ ಮೂರ್ತಿ ತಲುಪಬಹುದು. ಚಿಕ್ಕಬಳ್ಳಾಪುರದಿಂದಲೂ ಕೇವಲ 9 ಕಿಲೋ ಮೀಟರ್ ದೂರಕ್ಕೆ ಈ ಕ್ಷೇತ್ರ ದೊರೆಯುತ್ತದೆ.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು