News18 India World Cup 2019

Lok Sabha Election Result 2019: ಲೋಕಸಭೆ ಅಖಾಡದಲ್ಲಿ ಮಕಾಡೆ ಮಲಗಿದ ಘಟಾನುಘಟಿ ಸಿಎಂಗಳ ಮಕ್ಕಳಿವರು...

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಕ್ಕಳ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿದ್ದ ಹಲವು ರಾಜ್ಯಗಳ ಸಿಎಂಗಳ ಮಕ್ಕಳಿಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ.

Seema.R | news18
Updated:May 23, 2019, 6:41 PM IST
Lok Sabha Election Result 2019: ಲೋಕಸಭೆ ಅಖಾಡದಲ್ಲಿ ಮಕಾಡೆ ಮಲಗಿದ ಘಟಾನುಘಟಿ ಸಿಎಂಗಳ ಮಕ್ಕಳಿವರು...
ವಿವಿಧ ರಾಜ್ಯಗಳ ಸಿಎಂ ಗಳು ಮತ್ತವರ ಮಕ್ಕಳು
Seema.R | news18
Updated: May 23, 2019, 6:41 PM IST
ರಾಜ್ಯದ ಅಧಿಕಾರಿ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳಿಗೆ ರಾಜಕೀಯ ಭವಿಷ್ಯ ಸುಲಭದ ಹಾದಿ ಎಂಬ ಮಾತಿದೆ. ಆದರೆ, ಇದು ಹಲವು ಬಾರಿ ಸುಳ್ಳಾಗಿರುವ ಉದಾಹರಣೆಗಳು ಇದೆ. ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ತಮ್ಮ ಮಕ್ಕಳ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿದ್ದ ಹಲವು ರಾಜ್ಯಗಳ ಸಿಎಂ ಸೋತಿದ್ದಾರೆ.

ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದ್ದರು ಮಕ್ಕಳ ಸೋಲು ಅನೇಕ ತಂದೆಯರಿಗೆ ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ತಮ್ಮ ಮಕ್ಕಳನ್ನು ಸಂಸತ್ತಿಗೆ ಕಳುಹಿಸಲು ಕರ್ನಾಟಕ, ರಾಜಸ್ಥಾನ, ತೆಲಂಗಾಣ ಮುಖ್ಯಮಂತ್ರಿಗಳು ಮುಂದಾಗಿದ್ದರು. ರಾಜ್ಯದ ಮುಖ್ಯಮಂತ್ರಿಗಳೇ ಆಗಿದ್ದರು ಜನರು ಮಾತ್ರ ಇವರನ್ನು ಗೆಲ್ಲಿಸುವ ಮನಸ್ಸು ಮಾಡಿಲ್ಲ. ಆ ರೀತಿ ಸೋಲು ಕಂಡ  ರಾಜ್ಯದ ಮುಖ್ಯಮಂತ್ರಿಗಳ ಮಕ್ಕಳ ಪಟ್ಟಿ ಇಂತಿದೆ.

ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್​


ಹಠಕ್ಕೆ ಬಿದ್ದು ಮಂಡ್ಯದಲ್ಲಿ ಮಗನ ನಿಲ್ಲಿಸಿದ ಸಿಎಂ ಕುಮಾರಸ್ವಾಮಿಗೆ ಮಗನ ಸೋಲು ತೀವ್ರ ನಿರಾಶೆ ಮೂಡಿದೆ. ಮಗನ ಗೆಲುವಿಗಾಗಿ ಕ್ಷೇತ್ರದಲ್ಲಿಯೇ ಬಿಡು ಬಿಟ್ಟು ಪ್ರಚಾರ ನಡೆಸಿದರು ಅವರ ಶ್ರಮ ಕೈ ಹಿಡಿದಿಲ್ಲ. ಸ್ವತಂತ್ರ ಅಭ್ಯರ್ಥಿ ಸುಮಲತಾ ವಿರುದ್ಧ ನಡೆಸಿದ ಸಿಎಂ ಕುಮಾರಸ್ವಾಮಿ ಪ್ರತಿಫಲಿಸದೇ 1,20,281 ಮತಗಳಿಂದ ಗೆಲುವು ಸಾಧಿಸಿದರು

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ವೈಭವ್​ ಗೆಹ್ಲೋಟ್​​


ರಾಜಸ್ಥಾನ ಮುಖ್ಯಮಂತ್ರಿ ಸಿಎಂ ಅಶೋಕ್​ ಗೆಹ್ಲೋಟ್​ ಮಗ ವೈಭವ್​ ಗೆಹ್ಲೋಟ್​ ಕೂಡ ಸೋಲನ್ನು ಅನುಭವಿಸಿದ್ದಾರೆ. ಜೋದ್​ಪುರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ವೈಭವ್​ ಬಿಜೆಪಿ ಹಾಲಿ ಸಂಸದ ಗಜೇಂದ್ರ ಸಿಂಗ್​ ಶೆಖವಾತ್​ ವಿರುದ್ಧ 1,20,759 ಮತಗಳಿಂದ ಸೋಲನ್ನು ಅನುಭವಿಸಿದ್ದಾರೆ.
Loading...

ತೆಲಂಗಾಣ ಸಿಎಂ ಕೆಸಿ ರಾವ್​​ ಮಗಳು ಕವಿತಾ


ಟಿಆರ್​ಎಸ್​ ನಾಯಕ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಮಗಳು, ಕಲ್ವಕುಂತಲು ಕವಿತಾ ಕೂಡ ಸೋಲು ಕಂಡಿದ್ದಾರೆ. ನಿಜಾಮಾಬಾದ್​ನಲ್ಲಿ ಬಿಜೆಪಿ ಅಭ್ಯರ್ಥಿ ಧರ್ಮಾಪುರಿ ಅರವಿಂದ್​ ವಿರುದ್ಧ 50000 ಮತಗಳಿಂದ ಸೋತಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲನಾಥ್​ ಅವರ ಮಗ ನಕುಲ್​ ನಾಥ್​​


ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್​ನಾಥ್​ ಮಗ ನಕುಲ್​ ನಾಥ್​ ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಚಿಂದ್ವಾರ್​ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಿಜೆಪಿ ಅಭ್ಯರ್ಥಿ ನತಾಶ ಕವ್ರೆತಿ ವಿರುದ್ಧ  28,7692 ಮತಗಳಿಂದ ಜಯಭೇರಿ ಭಾರಿಸಿದ್ದಾರೆ.
First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...