ಸಂಪುಟ ವಿಸ್ತರಣೆ: ಬಿಎಸ್​ವೈ-ಜೆಪಿ ನಡ್ಡಾ ಭೇಟಿ ಅಂತ್ಯ: ನಾಳೆ ಬನ್ನಿ ಎಂದ ಅಮಿತ್ ಶಾ​​

ನಾಳೆ ಬೆಳಿಗ್ಗೆ 10 ಗಂಟೆಗೆ ಬನ್ನಿ ಆವಾಗ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಮಾಡೋಣ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್​ ಶಾ ಸೂಚಿಸಿದ್ದಾರೆ.

news18-kannada
Updated:January 31, 2020, 7:58 AM IST
ಸಂಪುಟ ವಿಸ್ತರಣೆ: ಬಿಎಸ್​ವೈ-ಜೆಪಿ ನಡ್ಡಾ ಭೇಟಿ ಅಂತ್ಯ: ನಾಳೆ ಬನ್ನಿ ಎಂದ ಅಮಿತ್ ಶಾ​​
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ನವದೆಹಲಿ(ಜ.30) : ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿರುವ ಸಿಎಂ ಬಿಎಸ್​ವೈ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾರನ್ನುಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ, ಬಿ.ಎಸ್​​ ಯಡಿಯೂರಪ್ಪಗೆ ಇವರಿಬ್ಬರ ಭೇಟಿ ವೇಳೆ ಕೇವಲ ಐದು ನಿಮಿಷ ಮಾತ್ರ ಸಮಯ ಸಿಕ್ಕಿತ್ತು. ಹಾಗಾಗಿ ಮತ್ತೆ ನಾಳೆ ಸಿಎಂ ಬಿಎಸ್​ ಯಡಿಯೂರಪ್ಪ ಅಮಿತ್​​ ಶಾರನ್ನು ಭೇಟಿಯಾಗಲಿದ್ದಾರೆ. 

ಇನ್ನು ಭೇಟಿ ವೇಳೆ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ಪಿ. ನಡ್ಡಾ ಅವರಿಗೆ ಯಡಿಯೂರಪ್ಪ ಶುಭಾಶಯ ಕೋರಿದರು. ಆ ಬಳಿಕ ಐದು ನಿಮಿಷದಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಕೇಂದ್ರ ಸಚಿವ ಅಮಿತ್ ಶಾ ಜೊತೆ  ಮಾತುಕತೆಗೆ ತೆರಳಿದ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಭೇಟಿ ಸಮಯ ಸಿಕ್ಕಿಲ್ಲ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಯಾದ ಸಿಎಂ ಯಡಿಯೂರಪ್ಪ


ಬದಲಿಗೆ ನಾಳೆ ಬನ್ನಿ ಬೆಳಿಗ್ಗೆ 10 ಗಂಟೆಗೆ ಬನ್ನಿ ಆವಾಗ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಮಾಡೋಣ ಎಂದು ಕೇಂದ್ರ ಸಚಿವ ಅಮಿತ್​ ಶಾ ಹೇಳಿದ್ದಾರೆ. ಈ ಬಗ್ಗೆ ಸಿಎಂ ನಾಳೆ ಅಮಿತ್​ ಶಾ ಅವರನ್ನು ಭೇಟಿ ಮಾಡಿದ ನಂತರ ಸಂಪುಟ ಕಸರತ್ತಿನ ಬಗ್ಗೆ ಅಂತಿಮ ತೀರ್ಮಾನ ಗೊತ್ತಾಗಲಿದೆ.

ಇದನ್ನೂ ಓದಿ  : Cabinet Expansion: ಸಂಪುಟ ವಿಸ್ತರಣೆಗೆ ನಾಳೆ ಮುಹೂರ್ತ ಫಿಕ್ಸ್​; ಇಂದೇ ಸಚಿವರ ಪಟ್ಟಿ ಅಂತಿಮ; ಬಿಎಸ್​ವೈ ಸ್ಪಷ್ಟನೆ
First published: January 30, 2020, 10:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading