ಯಡಿಯೂರಪ್ಪ ಅಪರೇಷನ್ ಕಮಲದ ಪಿತಾಮಹ - ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ; ಸಿದ್ಧರಾಮಯ್ಯ ಲೇವಡಿ

ಸಂಸದ ಅನಂತಕುಮಾರ ಹೆಗಡೆ ಗ್ರಾ.ಪಂ ಅಧ್ಯಕ್ಷ ಆಗಲು ಯೋಗ್ಯತೆ ಇಲ್ಲ. ಸಂವಿಧಾನ ಬದಲಾವಣೆ ಮಾಡ್ತಿನಿ ಅಂದವರು ಅಮಾನತು ಆಗಬೇಕು ಎಂದರು

G Hareeshkumar | news18-kannada
Updated:November 25, 2019, 3:06 PM IST
ಯಡಿಯೂರಪ್ಪ ಅಪರೇಷನ್ ಕಮಲದ ಪಿತಾಮಹ - ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ; ಸಿದ್ಧರಾಮಯ್ಯ ಲೇವಡಿ
ಸಿದ್ದರಾಮಯ್ಯ
  • Share this:
ಕಾರವಾರ(ನ.25): ಸಿಎಂ ಯಡಿಯೂರಪ್ಪನವರು ಹದಿನೈದು ಕ್ಷೇತ್ರದಲ್ಲಿ ಈಗಾಗಲೇ ಗೆಲುವನ್ನ ಸಾಧಿಸಿದ್ದೇವೆ ಎನ್ನುತ್ತಾರೆ ಗೆಲುವನ್ನ ಸಾಧಿಸಿದರೆ ಮತ್ಯಾಕೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಓಡಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತ ಪ್ರಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅನರ್ಹ ಪಟ್ಟ ಹೊತ್ತುಕೊಂಡ ಶಿವರಾಮ್​​​ ಹೆಬ್ಬಾರ್ ಅವರಿಗೆ ಮಾನಮರ್ಯಾದೆ ಇಲ್ಲಾ. ಅನರ್ಹ ಶಾಸಕರ ಸುಖ ದುಃಖ ವಿಚಾರಿಸಿಕೊಂಡಿದ್ದು ಕೇಂದ್ರ ಸಚಿವ ಅಮಿತ್​ ಶಾ ಅವರು, ಅಪರೇಷನ್ ಕಮಲದ ಪಿತಾಮಹ ಸಿಎಂ ಯಡಿಯೂರಪ್ಪನವರು. ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದ ಮಾಜಿ ಸಚಿವ ದೇಶಪಾಂಡೆ ಅವರಿಗೆ  ಶಿವರಾಮ್​​​ ಹೆಬ್ಬಾರ್​ ಚೂರಿ ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಸಿದ್ದರಾಮಯ್ಯ ಸಹ ಬಿಜೆಪಿ ಸೇರಲು ಕ್ಯೂ ನಲ್ಲಿ ನಿಂತಿದ್ದಾರೆ ಎನ್ನುವ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಂಸದ ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ಅವರ ಪ್ರಶ್ನೆಗೆ ಉತ್ತರ ಕೊಡೋಕೆ ಆಗುತ್ತಾ ಅವನು‌‌ ನಾರ್ಮಲ್ ಆಗಿ ಇರ್ತಾನೋ‌ ಇಲ್ಲೋ ಗೊತ್ತಿಲ್ಲ. ಸಂಸದ ಅನಂತಕುಮಾರ ಹೆಗಡೆ ಗ್ರಾ.ಪಂ ಅಧ್ಯಕ್ಷ ಆಗಲು ಯೋಗ್ಯತೆ ಇಲ್ಲ. ಸಂವಿಧಾನ ಬದಲಾವಣೆ ಮಾಡ್ತಿನಿ ಅಂದವರು ಅಮಾನತು ಆಗಬೇಕು ಎಂದರು.

 ಮಧ್ಯಂತರ ಚುನಾವಣೆ ನಡೆದರೇ ನಾವೇ ಗೆಲ್ಲುವುದು 

ಬಿಜೆಪಿಯವರು ಎಂಟು ಸ್ಥಾನ ಗೆಲ್ಲದಿದ್ದರೆ ರಾಜಿನಾಮೆ ಕೊಡಬೇಕಾಗುತ್ತೆ. ಕುದುರೆ ವ್ಯಾಪಾರ ಮಾಡಿ, ಹದಿನೇಳು ಶಾಸಕರನ್ನು ಕೊಂಡುಕೊಂಡು ಸರ್ಕಾರ ಮಾಡಿದ್ದಾರೆ. ಬಿಜೆಪಿಗೆ ಬಹುಮತ ಸಿಗದಿದ್ದರೆ ಜೆಡಿಎಸ್ ಸಪೋರ್ಟ್ ಮಾಡಲ್ಲ. ನಾನು ಜೆಡಿಎಸ್‌ನಲ್ಲಿ ಇದ್ದವನು, ಹಾಗಾಗಿ ಗೊತ್ತಿದೆ ಎಂದು ಹೇಳಿದರು.

ಇದನ್ನೂ ಓದಿ :  ಬಿಜೆಪಿಯಲ್ಲಿ ಸದಾನಂದ ಗೌಡರು ತಿರಸ್ಕೃತಗೊಂಡ ಗೊಬ್ಬರ ಇದ್ದಂತೆ; ಸಿದ್ದರಾಮಯ್ಯ ತಿರುಗೇಟು

ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ನಾನು ಇತಿಹಾಸದಲ್ಲಿ ಎಲ್ಲಿಯೂ ಇಂತದ್ದನ್ನು ನೋಡಿರಲಿಲ್ಲ‌. ರಾತ್ರೋರಾತ್ರಿ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡಿದ್ದು, ಬೆಳಗಾಗುವಷ್ಟರಲ್ಲಿ ಬಹುಮತ ಇಲ್ಲದ ಸರ್ಕಾರ ರಚನೆ ಮಾಡಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಆಗಬಹುದು ಅಂದುಕೊಂಡಿದ್ದೇನೆ. ಚುನಾವಣೆ ಆದ್ರೆ ನೂರಕ್ಕೆ ನೂರು ನಾವು ಗೆಲ್ತೀವಿ. ಆಗ ಸಿಎಂ ಯಾರಾಗಬೇಕೆಂದು ಶಾಸಕಾಂಗ ಸಭೆ, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸುತ್ತೆ ಎಂದರು.

 
First published: November 25, 2019, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading