ಮಂಡ್ಯ (ನ.18): ಮಧ್ಯ ಪ್ರದೇಶದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚಿನ ಗೆಲುವು ಸಾಧಿಸಿದ ಹಿನ್ನಲೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಜಿಲ್ಲೆಯ ಪಾಂಡವಪುರದ ಮೇಲುಕೋಟೆಯ ಚೆಲುವ ನಾರಾಯಣನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿನ ಚೆಲುವ ನಾರಾಯಣನ ಪರಮ ಭಕ್ತರಾಗಿರುವ ಚೌಹಣ್, ತಮ್ಮ ಮನಸ್ಸಿನ ಇಚ್ಚೆ ನೆರವೇರಿದ ಹಿನ್ನಲೆ ದೇವರ ಹರಕೆ ತೀರಿಸಿದ್ದಾರೆ. ಈ ಹಿಂದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಈ ಚೆಲುವ ನಾರಾಯಣನ ಆಶೀರ್ವಾದವೇ ಕಾರಣ ಎಂಬ ನಂಬಿಕೆ ಅವರಲ್ಲಿದೆ. ಇದೇ ಹಿನ್ನಲೆ ಅವರು ಮೂರನೇ ಬಾರಿ ಈ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ವಿರೋಧ ಪಕ್ಷ ನಾಯಕರಾಗಿದ್ದ ಶಿವರಾಜ್ ಸಿಂಗ್ ಗೆ ಜೀಯರ್ ಶ್ರೀ ಸ್ವಾಮಿಜಿ ನೀಡಿದ ಸಲಹೆ ಮೇರೆಗೆ ಚಲುವರಾಯಸ್ವಾಮಿಯ ಮೊರೆ ಹೋಗುವಂತೆ ತಿಳಿಸಿದ್ದರಂತೆ. ಅವರ ಸೂಚನೆ ಮೇರೆಗೆ ಈ ದೇವಸ್ಥಾನಕ್ಕೆ ಕಳೆದ ವರ್ಷ ಜುಲೈನಲ್ಲಿ ಈ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಸಿಎಂ ಪಟ್ಟಕ್ಕಾಗಿ ಹರಕೆ ಕಟ್ಟಿಕೊಂಡು ಹೋಗಿದ್ದರಂತೆ ಅದರಂತೆ ಅವರು ಬಂದು ಹರಕೆ ತೀರಿಸಿದ್ದಾರೆ.
ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೇಲುಕೋಟೆಯ ದೇವರಿಗೆ ಹರಕೆ ತೀರಿಸುವುದನ್ನು ಮರೆತಿದ್ದರಂತೆ. ಇದೇ ಹಿನ್ನಲೆ ಸೂಸೂತ್ರವಾಗಿ ನಡೆಯುತ್ತಿದ್ದ ಸರ್ಕಾರಕ್ಕೆ ಗಂಡಾಂತರ ಬಂದಿತ್ತು. ಕಡೆಗೆ ಜೀಯರ್ ಶ್ರೀ ಸ್ವಾಮೀಜಿ ಇವರ ಹರಿಕೆಯನ್ನು ನೆಪಸಿದರ ಪರಿಣಾಮ ಈ ವರ್ಷದ ಜೂನ್ ನಲ್ಲಿ ಈ ಮೇಲುಕೋಟೆಗೆ ಆಗಮಿಸಿ ಸರ್ಕಾರಕ್ಕೆ ಬಂದ ಗಂಡಾಂತರ ತಪ್ಪಿಸು ವಂತೆ ಮತ್ತೆ ಹರಕೆ ಹೊತ್ತು ತೆರಳಿದ್ದರಂತೆ.
ಅದರ ಪರಿಣಾಮ ಮಧ್ಯಪ್ರದೇಶದಲ್ಲಿ ಉಪ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ 19 ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅಭ್ಯ ರ್ಥಿಗಳು ಗೆದ್ದು ಮತ್ತೆ ಸರ್ಕಾರಕ್ಕೆ ಭದ್ರವಾಯಿತು. ಆ ಕಾರಣ ದಿಂದ ಇದೀಗ ಮತ್ತೆ ಮೇಲುಕೋಟೆಗೆ ಕುಟುಂಬ ಸಮೇತರಾಗಿ ಬಂದು ಚಲುವ ನಾರಾಯಣಸ್ವಾಮಿ ಹಾಗೂ ಯೋಗನರಸಿಂಹ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ದೇವರ ಹರಕೆ ತೀರಿಸಿದರು.
ಮಂಡ್ಯ ಜಿಲ್ಲೆಯ ಈ ಪ್ರಸಿದ್ದ ದೇವರ ಆಶೀರ್ವಾದದಿಂದ ಮದ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾ ರ ರಚನೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣ ದಿಂದಲೇ ಆ ರಾಜ್ಯದ ಶಿವರಾಜ್ ಸಿಂಗ್ ಚೌವ್ಹಾಣ್ ತಾವು ಕಟ್ಟಿಕೊಂಡ ಹರಿಕೆ ತೀರಿಸಿ ಇದೀಗ ಮೇಲುಕೋಟೆ ಚಲುವನಾರಾಯಣಸ್ವಾಮಿ ಪರಮಭಕ್ತರಾಗಿದ್ದಾರೆ.
ಈ ಭೇಟಿ ಕುರಿತು ಮಾತನಾಡಿದ ಅವರು, ಚೆಲುವನಾರಾಯಣಸ್ವಾಮಿಯಿಂದ ನನಗೆ ಅಧಿಕಾರ ಸಿಕ್ಕಿದೆ. ಆ ದೇವರು ನನಗೆ ಬಡವರು, ನೊಂದವರಿಗೆ ಸಹಾಯ ಮಾಡಲು ಶಕ್ತಿ ನೀಡಿದ್ದಾನೆ, ಈ ಹಿನ್ನಲೆ ದೇವರಿಗೆ ಶೀಘ್ರದಲ್ಲಿಯೇ ಬೆಳ್ಳಿ ರಥ ಸಮರ್ಪಣೆ ಮಾಡುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ