ಶಿಕಾರಿಪುರದ ರೀತಿ ಶಿರಾ ಕ್ಷೇತ್ರದ ಅಭಿವೃದ್ಧಿ; ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಭರವಸೆ

Sira Bypoll: ಪ್ರಚಾರದ ವೇಳೆ ಸಿಕ್ಕ ಸ್ವಾಗತಕ್ಕೆ ಪ್ರತಿಕ್ರಿಯಿಸಿದ ಅವರು, ಈ ಅಭೂತಪೂರ್ವ ಮೆರವಣಿಗೆ ನೋಡಿ ನಾನು ಶಿಕಾರಿಪುರದಲ್ಲಿ ಇರುವಂತೆ ಭಾಸವಾಗುತ್ತಿದೆ ಎಂದರು

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ತುಮಕೂರು (ಅ.30): ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮಾಡಿದ ರೀತಿ ಶಿರಾದಲ್ಲಿಯೂ ಅಭಿವೃದ್ಧಿ ಮಾಡುತ್ತೇನೆ. ಶಿರಾವನ್ನು ಮಾದರಿ ತಾಲೂಕಾಗಿ  ಅಭಿವೃದ್ಧಿ ಮಾಡಲು ಏನು ಹಣಕಾಸು ಸಹಾಯ ಬೇಕೋ ಅದನ್ನು ನೀಡಲು ಸಿದ್ಧ. ಚುನಾವಣೆಯಲ್ಲಿ  ನೀವು ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಶಿರಾ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು. ಪ್ರಚಾರದ ವೇಳೆ ಸಿಕ್ಕ ಸ್ವಾಗತಕ್ಕೆ ಪ್ರತಿಕ್ರಿಯಿಸಿದ ಅವರು, ಈ ಅಭೂತಪೂರ್ವ ಮೆರವಣಿಗೆ ನೋಡಿ ನಾನು ಶಿಕಾರಿಪುರದಲ್ಲಿ ಇರುವಂತೆ ಭಾಸವಾಗುತ್ತಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ದೇಶದಲ್ಲೇ ಮೊದಲ ಬಾರಿಗೆ ಭಾಗ್ಯಲಕ್ಷ್ಮಿ ಯೋಜನೆಯನ್ನು ತಂದವನು ನಾನು. ಬೈಸಿಕಲ್ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆ ತಂದಿದ್ದೇನೆ. ಈಗಾಗಲೇ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಶಿರಾದಲ್ಲಿ ಅಭಿವೃದ್ಧಿಗೆ  ಆಗಬೇಕಿರುವ ಕೆಲಸವನ್ನು ಮಾಡಿಕೊಡುತ್ತೇವೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಲು ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.

ಕ್ಷೇತ್ರದ ಅಭಿವೃದ್ಧಿಗೆ ಬರುವ ಮೂರನೇ ತಾರೀಖಿನಂದು ಜನರು ಬಿಜೆಪಿ ಅಭ್ಯರ್ಥಿಗೆ ಮತಹಾಕಿ, 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲ್ಲಿಸಕೊಡಬೇಕು ಎಂದು ಮನವಿ ಮಾಡಿದರು. ಸಿಎಂ ಪ್ರಚಾರದಲ್ಲಿ ಸಚಿವ ಶ್ರೀರಾಮುಲು, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಗರು ಬಿಜೆಪಿ ಅಭ್ಯರ್ಥಿ ರಾಜೇಶ್​ ಗೌಡ ಪರ ಮತಯಾಚಿಸಿದರು.

ಇದನ್ನು ಓದಿ: ಮುನಿರತ್ನ ಪರ ಭರ್ಜರಿ ರೋಡ್ ಶೋ; ಡಿ ಬಾಸ್ ದರ್ಶನ್​ ಜೊತೆ ಬಿಜೆಪಿ ನಾಯಕರಿಂದ ಮತಬೇಟೆ

ಪ್ರಚಾರದ ಬಳಿಕ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಎರಡು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಇಲ್ಲಿ 25 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಆರ್ ಆರ್ ನಗರದಲ್ಲಿ 40 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಎಲ್ಲರ ಶ್ರಮದಿಂದ ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಇಲ್ಲಿ ಕೆಲಸ ಮಾಡುತ್ತಿದೆ. ಬಹುಶಃ ಈ ವಿಜಯೋತ್ಸವ ನೋಡಿದರೆ, ಕಾಂಗ್ರೆಸ್, ಜೆಡಿಎಸ್ ನವರು ಎರಡನೇ ಸ್ಥಾನಕ್ಕೆ ಬಡಿದಾಡಬೇಕೇ ಹೊರತು ಬಿಜೆಪಿಗೆ ಯಾರು ಸರಿಸಮಾನವಾಗಿ ಬರೋದಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಕುಟುಕಿದರು.

ಇಂದು ಶಿರಾ ಅಭ್ಯರ್ಥಿ ಪರ ಪ್ರಚಾರ ನಡೆಸಿರುವ ಮುಖ್ಯಮಂತ್ರಿಗಳು, ನಾಳೆ ರಾಜಾರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ  ಪ್ರಚಾರ ನಡೆಸಲಿದ್ದಾರೆ.
Published by:Seema R
First published: