ಸಚಿವ ಸಂಪುಟ ವಿಸ್ತರಣೆ ವಿಳಂಬ - ಗಂಡುಮೆಟ್ಟಿನ ನಾಡಿನ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ ; ಸಿಎಂ ಕಾಲೆಳೆದ ಪುಟ್ಟರಾಜು

ನಾವು ಅಧಿಕಾರ ಕೊಡದಿದ್ದಾಗ ನಮ್ಮನ್ನ ವಚನ ಭ್ರಷ್ಟರು ಎಂದು ಜರಿದಿದ್ದರು. ಈಗ ಅವರು ವಚನ ಕೊಟ್ಟವರಿಗೆ ಮಂತ್ರಿ ಮಾಡದೆ ಈ ಮಾತನ್ನು ಎಂದು ಆಡಿಸಿಕೊಳ್ಳಲ್ಲ ಎಂದು ಬಿಎಸ್​ ವೈ ಅವರನ್ನು ಪುಟ್ಟರಾಜು  ಹೊಗಳಿದ್ದಾರೆ.

news18-kannada
Updated:January 25, 2020, 2:15 PM IST
ಸಚಿವ ಸಂಪುಟ ವಿಸ್ತರಣೆ ವಿಳಂಬ - ಗಂಡುಮೆಟ್ಟಿನ ನಾಡಿನ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ ; ಸಿಎಂ ಕಾಲೆಳೆದ ಪುಟ್ಟರಾಜು
ಮಾಜಿ ಸಚಿವ ಪುಟ್ಟರಾಜು ಹಾಗೂ ಸಿಎಂ ಯಡಿಯೂರಪ್ಪ
  • Share this:
ಮಂಡ್ಯ (ಜ.25):  ರಾಜ್ಯ ಸರ್ಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗುತ್ತಿರುವ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ನವರನ್ನು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಮಂಡ್ಯದ ಗಂಡು ಕೊಟ್ಟಮಾತಿಗೆ ತಪ್ಪುವುದಿಲ್ಲ ಎಂದು ಹೊಗಳುತ್ತಲೇ ಸಿಎಂ ಬಿಎಸ್​ವೈ ಕಾಲೆಳೆದು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಗೆದ್ದು ಸೋತವರಿಗೆಲ್ಲ ಮಂತ್ರಿ ಮಾಡೇ ಮಾಡುತ್ತಾರೆ ಅವರು. ಕೊಟ್ಟ ಮಾತಿಗೆ ತಪ್ಪಿಲ್ಲ. ನಾವು ಅಧಿಕಾರ ಕೊಡದಿದ್ದಾಗ ನಮ್ಮನ್ನ ವಚನ ಭ್ರಷ್ಟರು ಎಂದು ಜರಿದಿದ್ದರು. ಈಗ ಅವರು ವಚನ ಕೊಟ್ಟವರಿಗೆ ಮಂತ್ರಿ ಮಾಡದೆ ಈ ಮಾತನ್ನು ಎಂದು ಆಡಿಸಿಕೊಳ್ಳಲ್ಲ ಎಂದು ಬಿಎಸ್​ ವೈ ಅವರನ್ನು ಪುಟ್ಟರಾಜು  ಹೊಗಳಿದ್ದಾರೆ.

ಮೂರು ದಿನದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ದಾವೋಸ್​​ನಿಂದ ಬೆಂಗಳೂರಿಗೆ ಬಂದ ಕೂಡಲೇ ಮುಖ್ಯಮಂತ್ರಿ ಬಿ.ಎಸ್​​​ ಯಡಿಯೂರಪ್ಪ ಹೇಳಿಕೆ ನೀಡಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಲೇ ಇದೆ. ಈಗಾಗಲೇ ಬಿಜೆಪಿ ನೂತನ ಶಾಸಕರು ಸಿಎಂ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಆದಷ್ಟೂ ಬೇಗ ಸಂಪುಟ ವಿಸ್ತರಣೆ ಆಗಬೇಕೆಂದು ಸಿಎಂ ಯಡಿಯೂರಪ್ಪಗೆ ಬಿಜೆಪಿ ನೂತನ ಶಾಸಕರು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್​​​ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ. ಈ ಮಧ್ಯೆ ನೂತನ ಶಾಸಕರಿಂದ ಒತ್ತಡ ಹೆಚ್ಚುತ್ತಿರುವ ಕಾರಣ ಇನ್ನು ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂಬ ಭರವಸೆ ಸಿಎಂ ನೀಡಿದ್ದಾರೆ.

ಇದನ್ನೂ ಓದಿ :  ಸಿಎಂ ಕೊಟ್ಟ ಮಾತು ತಪ್ಪಲ್ಲ; ಯಾವ ವಿಚಾರಕ್ಕೆ ಸಚಿವ ಶ್ರೀರಾಮುಲು ಈ ಹೇಳಿಕೆ ನೀಡಿದ್ರು ಗೊತ್ತಾ?

ಇನ್ನು ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೀಗ ಸಿಎಂ ಬಿ.ಎಸ್​​ ಯಡಿಯೂರಪ್ಪ ನೀಡಿರುವ ಹೇಳಿಯೂ ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಹಾಗೂ ಎಚ್‌. ವಿಶ್ವನಾಥ್ ಮಂತ್ರಿಯಾಗಬೇಕೆಂಬ ಆಸೆಗೆ ತಣ್ಣೀರು ಎರಚಿದಂತಾಗಿದೆ.

 
First published: January 25, 2020, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading