ಹಾವೇರಿ (ಡಿ.17): ತವರು ಕ್ಷೇತ್ರ ಹಾವೇರಿಯಲ್ಲಿ (Haveri) ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನನ್ನ ಕ್ಷೇತ್ರದ ಬೇಡಿಕೆ ಬಹಳ ಇದೆ. ಉತ್ತರ ಕರ್ನಾಟಕದ (North Karnataka) ಜನರ ಬಹಳ ಪ್ರೀತಿ ಪ್ರೇಮ ತೋರಿಸುವ ಜನ. ಹೀಗಾಗಿ ನಮ್ಮ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಪ್ಪಾ ಎಂದು ಆರ್ ಅಶೋಕ್ಗೆ (R. Ashok) ಹೇಳಿದೆ. ಎಲ್ಲಾ ಕಡೆ ಮಾಡೋದನ್ನ ನೋಡ್ತಾನೆ ಇದ್ದೆ. ನಮ್ಮ ಕಡೆ ಯಾವಾಗ ಬರ್ತಿಯಾ ಎಂದಿದ್ದೆ. ಇವಾಗ ಬಂದು ಗ್ರಾಮ ವಾಸ್ತವ್ಯ ಮಾಡ್ತಾ ಇದ್ದಾರೆ ಎನ್ನುವ ಮೂಲಕ ವೇದಿಕೆ ಮೇಲೆ ಸಿಎಂ ಬೊಮ್ಮಾಯಿ ತಮಾಷೆ ಮಾಡಿದ್ರು.
ಇದೊಂದು ಪುಣ್ಯ, ಪರಿವರ್ತನೆಯ ಭೂಮಿ
ಕನಕದಾಸರ ಮಹಿಮೆ ಇಲ್ಲಿಂದಲೇ ಆರಂಭವಾಗಿದ್ದು, ಇದೊಂದು ಪುಣ್ಯ ಹಾಗೂ ಪರಿವರ್ತನೆಯ ಭೂಮಿಯಾಗಿದೆ. ಈ ಕಾರ್ಯಕ್ರಮ ಮಾಡೋದ್ರಿಂದ ಶಿಗ್ಗಾವಿ ಸವಣೂರಿನ ಕ್ಷೇತ್ರ ಇನ್ನಷ್ಟು ಉಜ್ವಲ ಆಗುತ್ತದೆ. ನಿಮ್ಮೆಲ್ಲರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯಿಂದ ಈ ನಾಡಿನ ಸೇವೆ ಮಾಡೋಕೆ ಅವಕಾಶ ಸಿಗ್ತಾ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ನಿಮ್ಮ ಋಣದಲ್ಲಿ ಇದ್ದೇನೆ- ಸಿಎಂ
ಬೇರೆಯ ಜನರ ಕೊಡುವ ಪ್ರೀತಿ ಸ್ವಾಗತ ನೋಡಿದಾಗ ನೀವು ನೆನಪಾಗ್ತೀರಾ, ನಿಮ್ಮ ಪ್ರೀತಿ, ರೊಟ್ಟಿ ಬುತ್ತಿ, ಹೋಳಿಗೆ, ಮಾವಿನ ಹಣ್ಣಿನ ಸಿಕರಣಿ ಕೊಟ್ಟಿದ್ದಾರೆ. ನಿಮ್ಮ ಋಣದಲ್ಲಿ ಇದ್ದೇನೆ. ನಿಮ್ಮ ಸಲುವಾಗಿ ನಿರಂತರ ಕೆಲಸ ಮಾಡುತ್ತೇನೆ. ಇದನ್ನು ನಾನು ನನ್ನ ಜೀವ ಇರೋ ತನಕ ಮರಿಯೊದಿಲ್ಲಾ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.
ಬಸವರಾಜ ಬೊಮ್ಮಾಯಿ ಭಾವುಕ
ರಾಜ್ಯದ ಬದಲಾವಣೆ ತರೋಕೆ ಅವಕಾಶ ಸಿಕ್ಕಿದ್ದು, ಈ ಹಿಂದಿನ ಯಾವ ಸರ್ಕಾರ ಇಂತಹ ಒಳ್ಳೆಯ ಬದಲಾವಣೆ ತರೋಕೆ ಆಗಿಲ್ಲ. ಆದರೆ ನಾವು ಮಾಡಿದ್ದೇವೆ. ಏನಪ್ಪಾ ನಮ್ ಸಾಹೇಬ ದೂರ ಹೋದ ಎಂದು ಅಂದುಕೊಳ್ಳಬೇಡಿ. ನನ್ನ ಹೃದಯ ನಿಮ್ಮ ಬಳಿಯೇ ಇರುತ್ತದೆ ಎಂದು ಶಿಗ್ಗಾವಿ ಕ್ಷೇತ್ರದ ಜನರನ್ನು ನೋಡಿ ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿದ್ದಾರೆ.
ನಾನು ಸತ್ತ ಮೇಲೆ ಇಲ್ಲೇ ಹೂಳಬೇಕು
ನಾನು ಸತ್ತ ಮೇಲೆ ನನ್ನ ಹೆಣವನ್ನ ಇದೆ ಮಣ್ಣಲ್ಲಿ ಹೂಳಬೇಕು ಎಂದು ಕಣ್ಣೀರು ಹಾಕಿದ ಸಿಎಂ. ಒಂದು ಕ್ಷಣ ವೇದಿಕೆಯಲ್ಲಿ ನೆರೆದಿದ್ದವರು ಹಾಗೂ ಸಾವಿರಾರು ಜನರು ಸ್ತಬ್ಧಗೊಂಡತೆ ಕೂತಿದ್ದರು. ಮಾತು ಆರಂಭಿಸಿದ ಸಿಎಂ, ನಾನು ಈ ಹಿಂದೆಯೂ ಇದೆ ಮಾತನ್ನು ಹೇಳಿದ್ದೇನೆ. ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ. ಇದೆ ಕ್ಷೇತ್ರದಲ್ಲೇ ನಾನು ಮಣ್ಣಾಗಬೇಕು ಎಂದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದುಡಿಮೆಯೇ ದೊಡ್ಡಪ್ಪ
ಈ ಹಿಂದೆ ದುಡ್ಡೆ ದೊಡ್ಡಪ್ಪ ಅಂತ ಇತ್ತು. ಆದ್ರೆ ಈಗ ಇದೆಲ್ಲಾ ಬದಲಾಗಿದ್ದು, ದುಡಿಮೆಯೇ ದೊಡ್ಡಪ್ಪ ಆಗಿದೆ. ಇದೆಲ್ಲಾ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗಿದ್ದಕ್ಕೆ ಆಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ರು.
ನಗೆ ಚಟಾಕಿ ಹಾರಿಸಿದ ಸಿಎಂ ಬೊಮ್ಮಾಯಿ
ಜೋಶಿಯವರೇ ಇಲ್ಲಿ ಕೇಳ್ರಿ ನಿಮ್ಮ ಇಲಾಖೆಯದ್ದೇ ಮಾತಾಡ್ತಾ ಇದ್ದೀನಿ ಎಂದು ಬೊಮ್ಮಾಯಿ, ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸಿಎಂ ಬೊಮ್ಮಾಯಿ ನಗೆ ಚಟಾಕಿ ಹಾರಿಸಿದ್ರು.
ಇದನ್ನೂ ಓದಿ: Nikhil Kumaraswamy: ನನ್ನ ಮಗ ನಿಖಿಲ್ ಕುಮಾರಸ್ವಾಮಿಯೇ ರಾಮನಗರ JDS ಅಭ್ಯರ್ಥಿ! ಅನಿತಾ ಕುಮಾರಸ್ವಾಮಿ ಘೋಷಣೆ
ಯಾವ್ಯಾವ ಗ್ರಾಮದಲ್ಲಿ ಆರ್ ಅಶೋಕ್ ಅವರು ಗ್ರಾಮ ವಾಸ್ತವ್ಯ ಮಾಡ್ತಾ ಇದ್ದಾರೋ ಅವರಿಗೆ ಒಂದು ಕಾಣಿಕೆಯನ್ನು ಕೊಡ್ತಾ ಇದ್ದೀನಿ, ಗ್ರಾಮ ವಾಸ್ತವ್ಯ ಮಾಡುವ ಗ್ರಾಮಕ್ಕೆ ಒಂದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡ್ತಾ ಇದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ