ಉಪ ಚುನಾವಣೆ ಮತದಾನ ಮುಕ್ತಾಯ - ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೊರಟ ಯಡಿಯೂರಪ್ಪ

ಡಿಸೆಂಬರ್​ 9 ರಂದು ಫಲಿತಾಂಶ ಹೊರಬೀಳಲಿದೆ. ಉಪಚುನಾವಣೆಯ ಫಲಿತಾಂಶಕ್ಕೂ ಮೊದಲೇ ಸಿಎಂ ಯಡಿಯೂರಪ್ಪ ಧರ್ಮಸ್ಥಳದ ಮಂಜುನಾಥನ ಮೊರೆ ಹೋಗಲಿದ್ದಾರೆ.

news18-kannada
Updated:December 5, 2019, 7:09 PM IST
ಉಪ ಚುನಾವಣೆ ಮತದಾನ ಮುಕ್ತಾಯ - ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೊರಟ ಯಡಿಯೂರಪ್ಪ
ಸಿಎಂ ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು (ಡಿ.05) : ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿನ ಉಪಚುನಾವಣೆಯ ಮತದಾನ ಇಂದು ನಡೆದಿದ್ದು, ಬಿಜೆಪಿ ಸರ್ಕಾರವನ್ನ ಉಳಿಸಿಕೊಳ್ಳಲು ಪಣತೊಟ್ಟಿರುವ ಸಿಎಂ ಬಿಎಸ್ ಯಡಿಯೂರಪ್ಪ ಇದಕ್ಕಾಗಿ ದೇವರ ಮೊರೆ ಹೋಗಲಿದ್ದಾರೆ

ಡಿಸೆಂಬರ್​ 9 ರಂದು ಫಲಿತಾಂಶ ಹೊರಬೀಳಲಿದೆ. ಉಪಚುನಾವಣೆಯ ಫಲಿತಾಂಶಕ್ಕೂ ಮೊದಲೇ ಸಿಎಂ ಯಡಿಯೂರಪ್ಪ ಧರ್ಮಸ್ಥಳದ ಮಂಜುನಾಥನ ಮೊರೆ ಹೋಗಲಿದ್ದಾರೆ.  ಡಿಸೆಂಬರ್ 8 ಭಾನುವಾರದಂದು ಸಿಎಂ ಯಡಿಯೂರಪ್ಪ ಧರ್ಮಸ್ಥಳಕ್ಕೆ ತೆರಳಿ ಸರ್ಕಾರದ ಉಳುವಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆಂಬ  ಎಂಬ ಮಾಹಿತಿ ಲಭ್ಯವಾಗಿದೆ.

CM's-TP
ಸಿಎಂ ಯಡಿಯೂರಪ್ಪ ಪ್ರವಾಸ


ಧರ್ಮಸ್ಥಳದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸರ್ಕಾರ ಉಳಿಸಲು 15 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲೇಬೇಕಾಗಿದೆ.

ಇದನ್ನೂ ಓದಿ : Karnataka ByPolls: ಹಿಂಬಾಗಿಲಿನಿಂದ ಸರ್ಕಾರ ರಚಿಸಿರುವ ಯಡಿಯೂರಪ್ಪಗೆ ಯಾವಾಗಲೂ ಜನ ಆಶೀರ್ವಾದಿಸಿಲ್ಲ; ಸಿದ್ದರಾಮಯ್ಯ

ಧರ್ಮಸ್ಥಳ ಭೇಟಿ ಬಳಿಕ ಬೆಳ್ತಂಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗಿ‌ಯಾಗಲಿದ್ದಾರೆ.
 
First published: December 5, 2019, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading