• Home
  • »
  • News
  • »
  • state
  • »
  • Uday Garudachar: ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳು ಜೈಲು! ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕೆ ಕೋರ್ಟ್‌ ಶಿಕ್ಷೆ

Uday Garudachar: ಶಾಸಕ ಉದಯ್ ಗರುಡಾಚಾರ್‌ಗೆ 2 ತಿಂಗಳು ಜೈಲು! ಚುನಾವಣೆಯಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕೆ ಕೋರ್ಟ್‌ ಶಿಕ್ಷೆ

ಶಾಸಕ ಉದಯ್ ಗರುಡಾಚಾರ್

ಶಾಸಕ ಉದಯ್ ಗರುಡಾಚಾರ್

ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಚುನಾವಣಾ ಪ್ರಮಾಣ ಪತ್ರದಲ್ಲಿ (Election Certificate) ಸುಳ್ಳು ಮಾಹಿತಿ (False Information) ನೀಡಿದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ (42nd ACMM Court Bengaluru), ಇಂದು ಶಿಕ್ಷೆ ಪ್ರಕಟಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಚಿಕ್ಕಪೇಟೆ (Chickpet) ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್‌ಗೆ (MLA Uday Garudachar) ಭಾರೀ ಸಂಕಷ್ಟ ಎದುರಾಗಿದೆ. ಉದಯ್ ಗರುಡಾಚಾರ್ ಚುನಾವಣಾ ಪ್ರಮಾಣ ಪತ್ರದಲ್ಲಿ (Election Certificate) ಸುಳ್ಳು ಮಾಹಿತಿ (False Information) ನೀಡಿದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ (42nd ACMM Court Bengaluru), ಇಂದು ಶಿಕ್ಷೆ ಪ್ರಕಟಿಸಿದೆ. ಉದಯ್ ಗರುಡಾಚಾರ್​ಗೆ 2 ತಿಂಗಳು ಜೈಲು (Jail) ಹಾಗೂ 10 ಸಾವಿರ ದಂಡ (Fine) ವಿಧಿಸಿ ನ್ಯಾಯಪೀಠ ಆದೇಶ ಹೊರಡಿಸಿದೆ.


ಉದಯ್ ಗರುಡಾಚಾರ್‌ಗೆ 2 ತಿಂಗಳ ಜೈಲು, 10 ಸಾವಿರ ದಂಡ


ತಮ್ಮ ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿರುವ ಆರೋಪದ ಮೇಲೆ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ, ಶಾಸಕ ಗರುಡಾಚಾರ್​ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಇಂದು ಆದೇಶ ಹೊರಡಿಸಿದೆ.
ಕ್ರಿಮಿನಲ್ ಕೇಸ್‌ಗಳ ಬಗ್ಗೆ ಮಾಹಿತಿ ನೀಡದ ಶಾಸಕ


ಶಾಸಕ ಉದಯ್ ಗರುಡಾಚಾರ್ 2018 ರಲ್ಲಿ ಚಿಕ್ಕಪೇಟೆ ಚುನಾವಣೆಯ್ಲಿ ಸ್ಪರ್ಧಿಸಿದ್ದಾಗ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಕೇಸ್ ಗಳ ಮಾಹಿತಿ ಮುಚ್ಚಿಟ್ಟಿದ್ದರು. ಈ ಬಗ್ಗೆ ಪ್ರಕಾಶ್ ಎಂ ಶೆಟ್ಟಿ ಎಂಬುವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಇದನ್ನೂ ಓದಿ: Karnataka Assembly Elections: ಚಿಕ್ಕಪೇಟೆಯಲ್ಲಿ ಮತ್ತೆ 'ಗರುಡ'ಗಮನ, 'ಕಮಲ' ವಾಹನ ಸವಾರಿಯೇ? ಬಿಜೆಪಿ 'ಉದಯ'ಕ್ಕೆ ಬ್ರೇಕ್ ಹಾಕ್ತಾರಾ 'ದೇವರಾಜ'?


ಹಲವು ಮಾಹಿತಿ ಮುಚ್ಚಿಟ್ಟಿದ್ದ ಶಾಸಕ


ಇನ್ನು ಆರ್‌ಒಸಿಯಿಂದ ಉದಯ್ ಗರುಡಾಚಾರ್ ಹಾಗೂ ಅವರ ಪತ್ನಿ ಅನರ್ಹಗೊಂಡಿದ್ದರು. ಈ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ  ಮುಚ್ಚಿಟ್ಟಿದ್ದರು. ಮೆವರಿಕ್ ಹೋಲ್ಡಿಂಗ್ಸ್ ನಲ್ಲಿ ಎಂಡಿ ಯಾಗಿದ್ದರೂ ಹೂಡಿಕೆದಾರ ಎಂದು ನಮೂದು ಮಾಡಿದ್ದರು. ಅಲ್ಲದೇ ಅವರ ಪತ್ನಿ ನಿರ್ದೇಶಕರಾಗಿರುವುದನ್ನೂ ಸಹ ನಮೂದಿಸಿರಲಿಲ್ಲ. ಇದರ ಜೊತೆಗೆ ತಮ್ಮ ಪತ್ನಿಯ ಬ್ಯಾಂಕ್ ವಿವರ ನೀಡದೇ ಮುಚ್ಚಿಟ್ಟ ಆರೋಪ ಇವರ ಮೇಲಿತ್ತು. ಈ ಎಲ್ಲದರ ಬಗ್ಗೆ ಹೆಚ್.ಜಿ.ಪ್ರಶಾಂತ್ ಅವರು ದೂರು ದಾಖಲಿಸಿದ್ದರು.


ಇಂದು ತೀರ್ಪು ಪ್ರಕಟಿಸಿದ್ದ ಕೋರ್ಟ್‌


ಈ ಬಗ್ಗೆ ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಇನ್ನು ಈ ಎಲ್ಲಾ ಆರೋಪಗಳು ಸಾಬೀತಾಗಿರುವುದರಿಂದ ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್ ಉದಯ್ ಗರುಡಾಚಾರ್ ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.


ಉದಯ್ ಗರುಡಾಚಾರ್‌ಗೆ ಜಾಮೀನು ನೀಡಿದ ನ್ಯಾಯಪೀಠ


ಇನ್ನು ಶಿಕ್ಷೆ ಪ್ರಕಟಿಸಿದ ಬಳಿಕ ಜಾಮೀನುಗಾಗಿ ಶಾಸಕ ಉದಯ್ ಗರುಡಾಚಾರ್ ಮನವಿ ಮಾಡಿದ್ರು. ಇದನ್ನು ಪರಿಶೀಲಿಸಿದ ಕೋರ್ಟ್, 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಿದೆ. 25,000 ರೂಪಾಯಿ ಬಾಂಡ್, ಶ್ಯೂರಿಟಿ ಒದಗಿಸಲು ನ್ಯಾಯಾಧೀಶ ಜೆ. ಪ್ರೀತ್​ ಷರತ್ತು ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: Karnataka Assembly Elections: ಗಾಂಧಿನಗರದ ಗಲ್ಲಿಯೊಳಗೆ ಹೇಗಿದೆ ಚುನಾವಣಾ ಕಾವು? ಈ ಬಾರಿ ಗೆಲ್ಲೋದು ಕೈ-ಕಮಲ-ದಳವೋ?


ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ


ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಅಲ್ಲಿನ ಮಾರುಕಟ್ಟೆಯಂತೆ ರಾಜಕೀಯವಾಗಿಯೂ ವೈವಿಧ್ಯತೆಯ ತಾಣ. ಇಲ್ಲಿ ಬಿಜೆಪಿ, ಕಾಂಗ್ರೆಸ್, ಪಕ್ಷೇತರ, ಎನ್‌ಸಿಓ, ಜೆಎನ್‌ಪಿ, ಐಎನ್‌ಸಿ(ಐ) ಸೇರಿದಂತೆ ಹಲವು ಪಕ್ಷದವರು ಗೆದ್ದಿದ್ದಾರೆ, ಸೋತಿದ್ದಾರೆ ಕೂಡ. ಕಳೆದ 3 ಚುನಾವಣೆಗಳಲ್ಲಿ 2 ಬಾರಿ ಬಿಜೆಪಿ ಗೆದ್ದಿದ್ದರೆ, 1 ಬಾರಿ ಕಾಂಗ್ರೆಸ್ ಗೆದ್ದಿದೆ. ಸದ್ಯ ಬಿಜೆಪಿಯ ಉದಯ್ ಗರುಡಾಚಾರ್ ಶಾಸಕರಾಗಿದ್ದು, ಆರ್‌ವಿ ದೇವರಾಜ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

Published by:Annappa Achari
First published: