ಹಕ್ಕಿಜ್ವರ ಭೀತಿ; ದಾವಣಗೆರೆ, ಹರಿಹರದ ಹೋಟೆಲ್​ಗಳಲ್ಲಿ, ಮಾರುಕಟ್ಟೆಯಲ್ಲಿ ಕೋಳಿ ಮಾಂಸ, ಮೊಟ್ಟೆ ಮಾರಾಟಕ್ಕೆ ನಿಷೇಧ

ರೋಗ ಪೀಡಿತ ಪ್ರದೇಶದ ಒಂದು ಕಿಲೊಮೀಟರ್ ವ್ಯಾಪ್ತಿಯಲ್ಲಿ ಅವಶ್ಯಕ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಹಾಗೂ ಇತರೆ ವಾಹನಗಳಿಗೆ ನಿರ್ಬಂಧ ಹಾಕಲಾಗಿದೆ.  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ದಾವಣಗೆರೆ: ಹಕ್ಕಿ ಜ್ವರ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಡಳಿತದಿಂದ ಪರಿಷ್ಕೃತ ಆದೇಶ ಹೊರಡಿಸಿದೆ. ಆದೇಶದನ್ವಯ ದಾವಣಗೆರೆ ಹಾಗೂ ಹರಿಹರ ನಗರ ವ್ಯಾಪ್ತಿಯ ಹೋಟೆಲ್ ಗಳಲ್ಲಿ ಕೋಳಿ, ಮೊಟ್ಟೆ, ಕೋಳಿ ಮಾಂಸ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

  ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಿಆರ್​ಪಿಸಿ ಸೆಕ್ಷನ್ 133 ಅಡಿ ಆದೇಶ ಹೊರಡಿಸಿದ್ದಾರೆ. ಜಾಗೃತಿ ವಲಯ ವ್ಯಾಪ್ತಿಯ ಹೋಟೆಲ್​ಗಳಲ್ಲಿ ಕೋಳಿ ಮಾಂಸ, ಮೊಟ್ಟೆ, ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ.

  ರೋಗ ಪೀಡಿತ ಪ್ರದೇಶದ ಒಂದು ಕಿಲೊಮೀಟರ್ ವ್ಯಾಪ್ತಿಯಲ್ಲಿ ಅವಶ್ಯಕ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಹಾಗೂ ಇತರೆ ವಾಹನಗಳಿಗೆ ನಿರ್ಬಂಧ ಹಾಕಲಾಗಿದೆ.  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

  ಇದನ್ನು ಓದಿ: ಕೊರೋನಾ ಆತಂಕ; ಗಾಳಿಸುದ್ದಿಗಳಿಗೆ ಕಿವಿಗೊಡದಂತೆ ರಾಜ್ಯದ ಜನತೆಗೆ ಸಿಎಂ ಬಿಎಸ್​ವೈ ವಿಡಿಯೋ ಸಂದೇಶ

  ಹರಿಹರದ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು.  ಸೋಂಕು ಇದ್ದ ಕೋಳಿ ಫಾರಂನಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೋಂಕು ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಒಂದು ಕಿಲೋಮೀಟರ್ ನಿಂದ ಹತ್ತು ಕಿಲೋಮೀಟರ್ ವರೆಗೂ ಸರ್ವೇಕ್ಷಣ ವಲಯ ಎಂದು ಘೋಷಣೆ ಮಾಡಲಾಗಿದೆ. ಸೋಂಕು ಪೀಡಿತ ಪ್ರದೇಶದಲ್ಲಿರುವ ಕೋಳಿ ಹಾಗೂ ಮೊಟ್ಟೆ, ಕೋಳಿ ಅಹಾರ ನಾಶ ಪಡಿಸಲಾಗುತ್ತಿದೆ.  ಸರ್ವೇಕ್ಷಣೆ ವಲಯದಲ್ಲಿ ಕೋಳಿ, ಮೊಟ್ಟೆ ಮಾರಾಟ, ಹಾಗೂ ಕೋಳಿ ಸಾಗಣಿಕೆ ನಿಷೇಧ ಹೇರಲಾಗಿದೆ. ಇಂದು 12 ಜನರ ತಂಡದಿಂದ ಬನ್ನಿಕೊಡು ಗ್ರಾಮದಲ್ಲಿ ವೈಜ್ಞಾನಿಕವಾಗಿ ಕೋಳಿಗಳ ಹರಣ ಕಾರ್ಯಾಚರಣೆಯನ್ನು ಪಶುಸಂಗೋಪನೆ ಇಲಾಖೆ ನಡೆಸಿತು.
  First published: