Drugs Case: ಡ್ರಗ್ಸ್​ ಕೇವಲ ಸಿನಿರಂಗಕ್ಕೆ ಸೀಮಿತವಾಗಿಲ್ಲ: ನಟ ಚೇತನ್ 

ಡ್ರಗ್ಸ್ ಬಗ್ಗೆ ಸರ್ಕಾರ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಇದು ಬರೀ ಸಿನಿಮಾ ರಂಗಕ್ಕೆ ಮಾತ್ರ ಸೀಮಿತ ಮಾಡಬಾರದು. ಸಿನಿಮಾರಂಗದ ಕೆಲ ಮಹಿಳೆಯರಿಗೆ ಸೀಮಿತ ಮಾಡಿದ್ರೆ ಸರಿಯಲ್ಲ. ಅದು ಟಿಆರ್​ಪಿ ವಿಷಯವಲ್ಲ ಎಂದಿದ್ದಾರೆ ನಟಚೇತನ್​

ಸ್ಯಾಂಡಲ್​ವುಡ್​ ನಟ ಚೇತನ್

ಸ್ಯಾಂಡಲ್​ವುಡ್​ ನಟ ಚೇತನ್

  • Share this:
ಡ್ರಗ್ಸ್​ ವಿಚಾರದಲ್ಲಿ ಕೇವಲ ಒಬ್ಬರು ಅಥವಾ ಇಬ್ಬರನ್ನು ಹುಡುಕಿ ಹಿಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ತನಿಖೆಯಾಗಬೇಕು ಅನ್ನೋ ಮಾತುಗಳನ್ನು ಸಾಕಷ್ಟು ಮಂದಿ ಹೇಳುತ್ತಲೇ ಇದ್ದಾರೆ. ಈಗ ಇದೇ ಮಾತನ್ನು ನಟ ಚೇತನ್ ಅವರೂ ಹೇಳಿದ್ದಾರೆ. ಡ್ರಗ್​ ಅನ್ನೋದು ಕೇಲವ ಸಿನಿರಂಗಕ್ಕೆ ಸೀಮಿತವಾಗಿಲ್ಲ.ಡ್ರಗ್ಸ್​ನ ವಿಶಾಲವಾದ ಬಾಹುಗಳು ಶೈಕ್ಷಣಿಕ ಮತ್ತು ಸಾಮಾಜಿಕವಾಗಿಯೂ ಹರಡಿದೆ ಎಂದಿದ್ದಾರೆ ಚೇತನ್​. ಶುಕ್ರವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಬಂದಿದ್ದ ಅವರು, ದಯಾಭಾರತಿ ಅಮ್ಮನವರ ಆದಿಜಾಂಬವ ಆಶ್ರಮಕ್ಕೆ ಭೇಟಿ ನೀಡಿದರು. ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಆಶ್ರಮ ಇರುವ ಜಾಗೆ ತೆರವುಗೊಳಿಸಲು ಮುಂದಾಗಿರುವ ಸ್ಥಳೀಯ ಆಡಳಿತದ ವಿರುದ್ಧ ನಟ ಆಕ್ರೋಶ ವ್ಯಕ್ತಪಡಿಸಿದರು.

ಜೆಸಿಬಿಯಿಂದ ತೆರವು ಕಾರ್ಯಾಚರಣೆ ನಡೆಸಿ ದೌಜ೯ನ್ಯ ನಡೆಸಲಾಗುತ್ತಿದೆ. ಹೀಗಾಗಿ ಇದನ್ನು ನಿಲ್ಲಿಸಬೇಕು. ಜಿಲ್ಲಾಡಳಿತ ಆಶ್ರಮಕ್ಕೆ 3 ಗುಂಟೆ ಜಾಗೆ ನೀಡಬೇಕು. ವೃದ್ಧ ಅನಾಥ ಮಹಿಳೆಯರ ಸೇವೆ ಮಾಡುತ್ತಿರುವ ದಲಿತ ಮಹಿಳೆಗೆ ಜಿಲ್ಲಾಡಳಿತ ಅನುಕೂಲತೆ ಕಲ್ಪಿಸಬೇಕು. ಈ ಬಗ್ಗೆ ನಾಳೆ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಆ ದಿನಗಳು ಖ್ಯಾತಿಯ ಚೇತನ್​.


ಇನ್ನು ಇದೇವೇಳೆ ಡ್ರಗ್ಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಟ ಚೇತನ್​, 'ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಡ್ರಗ್ಸ್ ತನ್ನ ಬಾಹು ವ್ಯಾಪಿಸಿದೆ. ಡ್ರಗ್ಸ್ ಬಗ್ಗೆ ಸರ್ಕಾರ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಇದು ಬರೀ ಸಿನಿಮಾ ರಂಗಕ್ಕೆ ಮಾತ್ರ ಸೀಮಿತ ಮಾಡಬಾರದು. ಸಿನಿಮಾರಂಗದ ಕೆಲ ಮಹಿಳೆಯರಿಗೆ ಸೀಮಿತ ಮಾಡಿದ್ರೆ ಸರಿಯಲ್ಲ. ಅದು ಟಿಆರ್​ಪಿ ವಿಷಯವಲ್ಲ. ಈ ಸಮಸ್ಯೆ ಬಗೆ ಹರಿಸುವ ಯಾವುದೇ ಲಕ್ಷಣ ಕಾಣಸ್ತಿಲ್ಲ. ಅದಾನಿ ಪೋರ್ಟ್​ನಲ್ಲಿ ಮೂರು ಸಾವಿರ  ಕೆಜಿ ಡ್ರಗ್ಸ್​ ಸಿಕ್ಕಿದ್ದು, ಅದರ ಮೌಲ್ಯ ಕೋಟ್ಯಂತರ ರೂಪಾಯಿಯಂತೆ. ಹನ್ನೆರಡು  ಸಾವಿರ ಕೋಟಿ ಡ್ರಗ್ಸ್ ಹೊರಗೆ ಬಂದಿದೆ. ಅದಾನಿ ಪೋರ್ಟನಲ್ಲಿ ಇದು ಸಿಕ್ಕಿದೆ ಅಂದ್ರೆ ಅದರ ಬಗ್ಗೆ ನಾವು ಚರ್ಚೆ ಮಾಡಬೇಕು. ಸಿನಿಮಾ ರಂಗದವರನ್ನ ಟಿಆರ್​ಪಿಗೋಸ್ಕರ ಬಲಿ ಪಶು ಮಾಡೋದು ಸರಿಯಲ್ಲ, ಇದನ್ನ ನಾನು ಒಪ್ಪಲ್ಲ. ಡ್ರಗ್ಸ್ ಸಮಾಜದ ಸಮಸ್ಯೆ, ಆರೋಗ್ಯಕರ ಚರ್ಚೆ ಮತ್ತು ತನಿಖೆ ಆಗಬೇಕು. ಸರ್ಕಾರದಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು' ಎಂದು ಆಗ್ರಹಿಸಿದ್ದಾರೆ.

ಅಮೆರಿಕದವರನ್ನ ಹಾಡಿ ಹೊಗಳಿ ಅಟ್ಟಕ್ಕೆರಿಸಿ ನಮ್ಮನ್ನ ಗುಲಾಮರನ್ನಾಗಿ ಬಿಂಬಿಸುತ್ತಿದ್ದಾರೆ

'ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿ ಇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಟ ಚೇತನ್, ನರೇಂದ್ರ ಮೋದಿ ಅವರು ಅಮೆರಿಕದ ಸರ್ಕಾರದ ಜೊತೆ ಚೆರ್ಚಿಸಿರುವ ಪೋಟೋ ತಗೆದುಕೊಂಡಿದ್ದಾರೆ. ಅಮೆರಿಕದವರನ್ನ ಹಾಡಿ ಹೊಗಳಿ ಅಟ್ಟಕ್ಕೆರಿಸಿ ನಮ್ಮನ್ನ ಗುಲಾಮರನ್ನಾಗಿ ಬಿಂಬಿಸುತ್ತಿದ್ದಾರೆ.  ಪ್ರಪಂಚದಲ್ಲಿ ಅಮೆರಿಕ ಏನೆಲ್ಲ ಅನ್ಯಾಯಗಳನ್ನ ಮಾಡಿಕೊಂಡು ಬಂದಿದೆ ಅಂತಾ ನಾವು ನೋಡಿದ್ದೆವೆ. ಅಮೆರಿಕದವರು ಅನಾವಶ್ಯಕ ಯುದ್ಧ ಮಾಡಿ ಜನರನ್ನ ಸಾಯಿಸಿದ್ದಾರೆ. ಇದನ್ನೆಲ್ಲ ಪ್ರಶ್ನೇ ಮಾಡಬೇಕಿರುವ ನರೇಂದ್ರ ಮೋದಿ, ಅವರಿಗೆ ಬಹುಪಾರಾಕ್ ಹೇಳುತ್ತಾ  ಸ್ನೇಹ ಮಾಡುತ್ತಿದ್ದಾರೆ. ಮೋದಿ ಅವರು ಅನ್ಯಾಯವನ್ನ ಪ್ರಶ್ನೇ ಮಾಡಬೇಕು. ಭಾರತಕ್ಕೆ ಅದ್ಬುತ ಇತಿಹಾಸವಿದೆ. ಅಮೆರಿಕಾಗಿಂತ ನಾವೇನು ಕಡಿಮೆ ಇಲ್ಲ. ನಾವು ತಪ್ಪು ಮುಚ್ಚಾಕಿದ್ರೆ ಪ್ರಶ್ನೆ ಮಾಡಲಿಕ್ಕೆ ಆಗಲ್ಲ, ಹಾಗೆ ಮಾಡಿದ್ದಾರೆ ಮೋದಿ' ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Upendra: ಜಾತಿ ವಿಚಾರವಾಗಿ ಮಾತನಾಡಿದ ಉಪೇಂದ್ರ: ನಿಜವಾದ ಬುದ್ಧಿವಂತರಾಗಿ ಎಂದು ಪರೋಕ್ಷವಾಗಿ ಟೀಕಿಸಿದ ನಟ ಚೇತನ್​

'ಇನ್ನು ದೇಶದಲ್ಲಿ ಖಾಸಗಿಕರಣ ಮಾಡಲಾಗುತ್ತಿದೆ. ಇದನ್ನೆ ಮುಂದುವರೆಸುವ ಮನಸ್ಥಿತಿ ಮೋದಿಯವರಲ್ಲಿ ಹೆಚ್ಚಿದೆ. ದೇಶದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದಾರೆ, ಕೊಡಲಿ. ಈಗಾಗಲೇ ಏಳು ವರ್ಷದಲ್ಲಿ 14 ಕೋಟಿ ಉದ್ಯೋಗ ಸೃಷ್ಠಿ ಮಾಡಬೇಕಿತ್ತು. ಆದರೆ ಉದ್ಯೋಗ ಮಾಡುವ 14 ಕೋಟಿ ಜನ ಕೆಲಸ ಕಳೆದುಕೊಂಡಿದ್ದಾರೆ ಅಂತ ಜನ ಹೇಳುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಟ ಚೇತನ್​.

ವರದಿ: ಮಂಜುನಾಥ್ ತಳವಾರ 
Published by:Anitha E
First published: