ಶಿವಮೊಗ್ಗ ಡಿಸಿಸಿ ಬ್ಯಾಂಕ್​​ ಹಂಗಾಮಿ ಅಧ್ಯಕ್ಷರಾಗಿ ಚೆನ್ನವೀರಪ್ಪ ಅಧಿಕಾರ ಸ್ವೀಕಾರ

ಆರ್.ಎಂ ಮಂಜುನಾಥ ಗೌಡ ಹತ್ತು ಬಾರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್​​ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇಂದು ಈ ಸ್ಥಾನಕ್ಕೆ ಚೆನ್ನವೀರಪ್ಪ ಬಂದಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್​​ ಹಂಗಾಮಿ ಅಧ್ಯಕ್ಷರಾಗಿ ಚೆನ್ನವೀರಪ್ಪ ಅಧಿಕಾರ ಸ್ವೀಕಾರ

ಶಿವಮೊಗ್ಗ ಡಿಸಿಸಿ ಬ್ಯಾಂಕ್​​ ಹಂಗಾಮಿ ಅಧ್ಯಕ್ಷರಾಗಿ ಚೆನ್ನವೀರಪ್ಪ ಅಧಿಕಾರ ಸ್ವೀಕಾರ

  • Share this:
ಶಿವಮೊಗ್ಗ(ಜು.20): ಶಿವಮೊಗ್ಗ ಡಿಸಿಸಿ ಬ್ಯಾಂಕ್​​ ಹಂಗಾಮಿ ಅಧ್ಯಕ್ಷರಾಗಿ ಎಂ.ಬಿ ಚೆನ್ನವೀರಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಬ್ಯಾಂಕ್​​ನ ಉಪಾಧ್ಯಕ್ಷರಾಗಿ ಚೆನ್ನವೀರಪ್ಪ ಕಾರ್ಯ ನಿರ್ವಹಿಸುತ್ತಿದ್ದರು. ಮಾಜಿ ಅಧ್ಯಕ್ಷ ಮಂಜುನಾಥ ಗೌಡರನ್ನು ಸಹಕಾರ ಇಲಾಖೆ ಹಾಗೂ ರಾಜ್ಯ ಸರ್ಕಾರ ಬ್ಯಾಂಕ್​ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಡಿಸಿಸಿ ಬ್ಯಾಂಕ್​​ನಲ್ಲಿ ಬಂಗಾರದ ಅಡಮಾನ ಸಾಲ ಮತ್ತು ಇತರೆ ಸಾಲ ನೀಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್.ಎಂ ಮಂಜುನಾಥ ಗೌಡರನ್ನು ನಿರ್ದೇಶಕರ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇವರು ಈ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಇನ್ನು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೆ ಚೆನ್ನವೀರಪ್ಪ ಹಂಗಾಮಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್​​ನಲ್ಲಿ 18 ನಿರ್ದೇಶಕರ ಸ್ಥಾನಗಳಿವೆ. ಈಗ ಮಂಜುನಾಥ ಗೌಡರ ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ 17 ನಿರ್ದೇಶಕರು ಮಾತ್ರ ಇದ್ದಾರೆ. ಅಧ್ಯಕ್ಷ ಸ್ಥಾನ ತೆರವಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಾಜ್ಯ ಸರ್ಕಾರ ಈಗಾಗಲೇ ಚುನಾವಣಾ ಅಧಿಕಾರಿಯನ್ನು ಸಹ ನೇಮಕ ಮಾಡಿದೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್​ನ ನಗರ ಶಾಖೆಯಲ್ಲಿ  ಬಂಗಾರದ ಅಡಮಾನ ಸಾಲ, ನಕಲಿ ಬಂಗಾರ ಸೇರಿದಂತೆ ಸಾಲ ನೀಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸಹಕಾರ ಇಲಾಖೆಯ ಅಧಿಕಾರಿಗಳ ತಂಡ ಆಗಮಿಸಿ, ಅಡಿಟ್ ಮತ್ತು ಇಲಾಖೆ ತನಿಕೆ ನಡೆಸಿ ವರದಿ ಸಂಗ್ರಹಿಸಿತ್ತು. ಕಡತಗಳ ಪರಿಶೀಲನೆ ನಡೆಸಿತ್ತು. ಇದಾದ ನಂತರ ರಾಜ್ಯ ಸರ್ಕಾರ, ಸಹಕಾರ ಇಲಾಖೆ ಆರ್.ಎಂ ಮಂಜುನಾಥ ಗೌಡರನ್ನು ಬ್ಯಾಂಕ್​​​ನ ನಿರ್ದೇಶಕ ಸ್ಥಾನದಿಂದ ಅಮಾನತು ಮಾಡಿತ್ತು.

ಇದನ್ನೂ ಓದಿ: Drone Prathap: ಮೈಸೂರಿನಲ್ಲಿ ಡ್ರೋನ್​​ ಪ್ರತಾಪ್​​​ ಬಂಧನ; ಬೆಂಗಳೂರಿಗೆ ಕರೆ ತಂದ ಪೊಲೀಸರು

ಆರ್.ಎಂ ಮಂಜುನಾಥ ಗೌಡ ಹತ್ತು ಬಾರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್​​ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇಂದು ಈ ಸ್ಥಾನಕ್ಕೆ ಚೆನ್ನವೀರಪ್ಪ ಬಂದಿದ್ದಾರೆ.
Published by:Ganesh Nachikethu
First published: