ನೀರಿನ ರಕ್ಷಣೆ ಮಾಡದಿದ್ದರೆ ಚೆನ್ನೈ, ಬೆಂಗಳೂರು ಆಫ್ರಿಕಾದ ಕೇಪ್​ ಟೌನ್​ ಆಗುವುದರಲ್ಲಿ ಅನುಮಾನವಿಲ್ಲ; ಸಚಿವ ಗಜೇಂದ್ರ ಸಿಂಗ್​​

2017-18ರಲ್ಲಿ ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್​ ಟೌನ್​ ನೀರಿಲ್ಲದೇ ಸಂಕಷ್ಟಕ್ಕೆ ಒಳಗಾಗಿತ್ತು. ನೀರಿನ ಅಗತ್ತಯತೆ ಅರಿತ ಬಳಿಕ ಅದು ಡೇ ಜೀರೋ ಎಂಬ ಯೋಜನೆ ಜಾರಿಗೆ ತಂದಿತು. ಇದರಿಂದ ನಗರದ ಎಲ್ಲಾ ಜನರು ನೀರಿನ ಉಳಿಕೆ ಬಗ್ಗೆ ಗಮನಕೊಟ್ಟು, ನೀರಿನ ಸಂರಕ್ಷಣೆಗೆ ಮುಂದಾದರು.

Seema.R | news18-kannada
Updated:October 30, 2019, 4:37 PM IST
ನೀರಿನ ರಕ್ಷಣೆ ಮಾಡದಿದ್ದರೆ ಚೆನ್ನೈ, ಬೆಂಗಳೂರು ಆಫ್ರಿಕಾದ ಕೇಪ್​ ಟೌನ್​ ಆಗುವುದರಲ್ಲಿ ಅನುಮಾನವಿಲ್ಲ; ಸಚಿವ ಗಜೇಂದ್ರ ಸಿಂಗ್​​
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಅ.30): ನೀರಿನ ಅಗತ್ಯತೆ ಹಾಗೂ ಸಮಸ್ಯೆಯನ್ನು ಅರಿತು, ರಕ್ಷಣೆಗೆ ಮುಂದಾಗದಿದ್ದರೆ, ಬೆಂಗಳೂರು, ಚೆನ್ನೈ ಸೇರಿದಂತೆ ಭಾರತದ ಹಲವು ನಗರಗಳು ಮುಂದೊಂದು ದಿನ ಕೇಪ್​ ಟೌನ್​ ಆಗುವುದರಲ್ಲಿ ಅನುಮಾನವಿಲ್ಲ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್​​ ಶೇಖವಾತ್​ ಎಚ್ಚರಿಕೆ ನೀಡಿದ್ದಾರೆ.

2017-18ರಲ್ಲಿ ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್​ ಟೌನ್​ ನೀರಿಲ್ಲದೇ ಸಂಕಷ್ಟಕ್ಕೆ ಒಳಗಾಗಿತ್ತು. ನೀರಿನ ಅಗತ್ತಯತೆ ಅರಿತ ಬಳಿಕ ಅದು ಡೇ ಜೀರೋ ಎಂಬ ಯೋಜನೆ ಜಾರಿಗೆ ತಂದಿತು. ಇದರಿಂದ ನಗರದ ಎಲ್ಲಾ ಜನರು ನೀರಿನ ಉಳಿಕೆ ಬಗ್ಗೆ ಗಮನಕೊಟ್ಟು, ನೀರಿನ ಸಂರಕ್ಷಣೆಗೆ ಮುಂದಾದರು.

ಬೆಂಗಳೂರಿನಲ್ಲಿ ಅತಿ ಹೆಚ್ಚು ನಗರೀಕರಣ, ಜನಸಂಖ್ಯಾ ಹೆಚ್ಚಳ ಮತ್ತು ನೀರಿನ ಸಂಕರಕ್ಷಣೆ ಬಗ್ಗೆ ನಿರ್ಲಕ್ಷ್ಯದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೆರೆಗಳು ವಿಷವಾಗುತ್ತಿದೆ. ಬಹಳಷ್ಟು ಜನರು ನೀರಿನ ಪೈಪ್​ ವ್ಯವಸ್ಥೆಗಿಂತ ನೀರಿನ ಟ್ಯಾಂಕರ್​ ಮೇಲೆ ಅವಲಂಬಿತರಾಗಿದ್ದಾರೆ

ಇನ್ನು ಚೆನ್ನೈನಲ್ಲಿ ಇದಕ್ಕೆ ಹೊರತಾದ ಬೇರೆ ವಾತಾವರಣವಿಲ್ಲ. ಇದೇ ರೀತಿಯ ನೀರಿನ ಪ್ರಮಾಣ ಕುಂಠಿತಗೊಂಡು, ಜನಸಂಖ್ಯಾ ಏರುತ್ತಾ ಹೋದರೆ ಬೆಂಗಳೂರು, ಚೆನ್ನೈ ಮಾತ್ರವಲ್ಲ ಇತರೆ ಪ್ರದೇಶಗಳು ಕೂಡ ಕೇಪ್​ ಟೌನ್​ ಆಗುತ್ತವೆ ಎಂದಿದ್ದಾರೆ.

ರಾಷ್ಟ್ರೀಯ ಹಸಿರು ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸ್ವತಂತ್ರ ಕುಮಾರ್​ ಮಾತನಾಡಿ, ಭಾರತದಲ್ಲಿ ಜನರು ನದಿಗಳನ್ನು ಪೂಜಿಸುತ್ತಿದ್ದರು. ಆದರೆ ಈಗ ನದಿಗಳು ಕಲುಷಿತಗೊಳ್ಳುತ್ತಿವೆ.

ಇದನ್ನು ಓದಿ: ಇನ್ನು 30 ವರ್ಷದಲ್ಲಿ ಮುಂಬೈ ಸೇರಿ ಹಲವು ನಗರಗಳು ಮಾಯ; ಜಗತ್ತಿನಲ್ಲಿ ಹೆಚ್ಚಲಿದೆ ಕಲಹ: ಹೊಸ ವೈಜ್ಞಾನಿಕ ಸಂಶೋಧನೆ ಮಾಹಿತಿ

ಇಸ್ರೇಲ್​ ವಾರ್ಷಿಕವಾಗಿ 100 ಎಂಎಂ ಮಳೆ ಪಡೆಯುತ್ತಿದ್ದರು, ಅಲ್ಲಿನ ಜನರ ಕಾಳಜಿಯಿಂದಾಗಿ ನೀರು ಹೇರಳವಾಗಿ ಶೇಖರಣೆಗೊಂಡಿದೆ. ಆದರೆ ಭಾರತದಲ್ಲಿ ನೀರಿನ ಸಂರಕ್ಷಣೆಯ ಜವಾಬ್ದಾರಿ ಜನರಲ್ಲಿ ಕಡಿಮೆ ಇದೆ. ಭಾರತದಲ್ಲಿ ಜನರು ಹಕ್ಕಿನ ಬಗ್ಗೆ ಹೆಚ್ಚು ಮಾತನಾಡುತ್ತಾರೆ, ಆದರೆ ಜವಾಬ್ದಾರಿ ಮೆರೆಯುವುದಿಲ್ಲ. ನೀರಿನ ರಕ್ಷಣೆ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಅದರಂತೆ ಜನರು ಕೂಡ ಬದ್ಧತೆ ತೋರಬೇಕು ಎಂದರು.
First published: October 30, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading