Byramangala Lake: ಬಿಡದಿಯ ಭೈರಮಂಗಲ ಕೆರೆಯೇ ಇಲ್ಲಿಗೆ ವರ, ಶಾಪ; ಜನರಲ್ಲಿ ಆತಂಕ

ಬೈರಮಂಗಲ ಕೆರೆ

ಬೈರಮಂಗಲ ಕೆರೆ

ಬೈರಮಂಗಲದಿಂದ ಪೂರ್ವಕ್ಕೆ 8 ಕಿ.ಮೀ ದೂರದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಪಶ್ಚಿಮಕ್ಕೆ ಇರುವ ಬಿಡದಿ ಕೈಗಾರಿಕಾ ಪ್ರದೇಶವಿದ್ದು, ಇಲ್ಲಿನ ಯುವಕರು ಉದ್ಯೋಗ ಅರಸಿ ಹೋಗುತ್ತಿದ್ದಾರೆ.

  • Share this:

ರಾಮನಗರ(ಬಿಡದಿ): ಬೈರಮಂಗಲ (Byramangala) ಎಂದರೆ ಮೊದಲಿಗೆ ನೆನಪಾಗುವುದು ವೃಷಭಾವತಿ ನದಿಗೆ (Vrushabhavathi River) ಅಡ್ಡಲಾಗಿ ಕಟ್ಟಿರುವ ಕೆರೆ (Lake). ಒಂದು ಕಾಲದಲ್ಲಿ ಬೈರಮಂಗಲವು ಹೆಚ್ಚು ಕಬ್ಬನ್ನು (Sugarcane) ಬೆಳೆಯುವ ಪ್ರದೇಶವಾಗಿತ್ತು. ಇಲ್ಲಿನ ಬೆಲ್ಲಕ್ಕೆ (Jaggery) ಉತ್ತಮ ಹೆಸರಿತ್ತು. ಇಂದಿಗೂ ಈ ಪ್ರದೇಶದಲ್ಲಿಯ ಜನರು ಹೆಚ್ಚಾಗಿ ಕೃಷಿಯನ್ನೇ (Agriculture) ಅವಲಂಬಿಸಿದ್ದಾರೆ.ಇಡೀ ವರ್ಷ ಪೂರ್ತಿಯಾಗಿ ವೃಷಭಾವತಿ ಹರಿಯುತ್ತಿದ್ದು, ಕೃಷಿಗೆ ಆಧಾರವಾಗಿದೆ. ಆದರೆ, ಅದೇ ಅನೇಕ ತೊಡಕುಗಳಿಗೂ ಕಾರಣವಾಗಿದೆ. ಈ ಗ್ರಾಮದಲ್ಲಿ ಸುಮಾರು 550 ಕುಟುಂಬಗಳಿದ್ದು, 1,750 ಜನಸಂಖ್ಯೆಯನ್ನು ಹೊಂದಿದೆ.


ಕಾಲ ಬದಲಾವಣೆ ಆದಂತೆಲ್ಲ ನದಿಗೆ ರಾಸಾಯನಿಕ ಮಿಶ್ರಿತ ನೀರಿನಿಂದ (Chemical Mixed Water) ವೃಷಭಾವತಿ ವಿಷದ ಒಡಲಾಗಿದ್ದು, ಕೃಷಿ ಚಟುವಟಿಕೆಗಳು ರೈತನ (Farmers) ಕೈ ಹಿಡಿಯುತ್ತಿಲ್ಲ. ಇಲ್ಲಿ ಹೆಚ್ಚು ಜನರು ರೇಷ್ಮೆ (Silk) ಮತ್ತು ಹೈನುಗಾರಿಕೆಯನ್ನು (Dairying) ಅವಲಂಬಿತರಾಗಿದ್ದಾರೆ.


ಕೈಗಾರಿಕೆಗಳಲ್ಲಿ ಉದ್ಯೋಗನ ಅರಸಿ ಹೊರಟ  ಯುವ ಸಮುದಾಯ


ಬೈರಮಂಗಲದಿಂದ ಪೂರ್ವಕ್ಕೆ 8 ಕಿ.ಮೀ ದೂರದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಪಶ್ಚಿಮಕ್ಕೆ ಇರುವ ಬಿಡದಿ ಕೈಗಾರಿಕಾ ಪ್ರದೇಶವಿದ್ದು, ಇಲ್ಲಿನ ಯುವಕರು ಉದ್ಯೋಗ ಅರಸಿ ಹೋಗುತ್ತಿದ್ದಾರೆ.


ಹೈನುಗಾರಿಕೆ ಮೇಲೆ ಅವಲಂಬಿತ ಕುಟುಂಬಗಳು


ಹೈನುಗಾರಿಕೆ ಅವಲಂಬಿಸಿರುವ ಕುಟುಂಬಗಳು ಹೆಚ್ಚಿದ್ದು, ನಿತ್ಯ ಒಂದು ಸಾವಿರ ಲೀಟರ್‌ ಗೂ ಹೆಚ್ಚು ಹಾಲು ಸಂಗ್ರಹ ಆಗುತ್ತಿದೆ. ಜೊತೆಗೆ ರೇಷ್ಮೆ ಕೃಷಿ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಕಾಲ ಕಳೆದಂತೆಲ್ಲ ಈ ಊರು ಕೈಗಾರಿಕೀಕರಣಕ್ಕೆ ತನ್ನನ್ನು ಹೆಚ್ಚು ತೆರೆದುಕೊಳ್ಳುತ್ತಿದೆ.


ಇದನ್ನೂ ಓದಿ:  Election: ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ, ಮರಳಿ ಫೀಲ್ಡ್ ಗಿಳಿದ ಹಾಲಿ, ಮಾಜಿ ಶಾಸಕರು


ಬೈರಮಂಗಲ ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಯಾವುದೇ ರೀತಿಯ ಬಸ್ ನಿಲ್ದಾಣ ಇಲ್ಲ. ಪುರಾತನ ಒಂದು ಸರ್ಕಾರಿ ಶಾಲೆಯಿದ್ದು, ಅದು ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ, ಪ್ರೌಢಶಾಲೆಯಲ್ಲಿಯೇ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೂ ಪಾಠ ಹೇಳಿಕೊಡಲಾಗುತ್ತಿದೆ.


ಪ್ರಗತಿ ಕ್ಷೀಣ


ಈ ಗ್ರಾಮದಲ್ಲಿ ಎರಡು ಕೈಗಾರಿಕಾ ಪ್ರದೇಶಗಳನ್ನು ಸೇರಿಸುವ ರಸ್ತೆ ಸಂಪರ್ಕ ಉತ್ತಮವಾಗಿ ಇರುವುದು ಬಿಟ್ಟರೆ ಬೇರೆ ಏನು ಗುರುತಿಸುವಂತಹ ಪ್ರಗತಿ ಆಗಿಲ್ಲ. ಇತ್ತೀಚೆಗಷ್ಟೇ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭ ಆಗಿದೆ. ವಾಣಿಜ್ಯ ಬ್ಯಾಂಕ್, ಅಂಚೆ ಕಚೇರಿ ಮೊದಲಾದ ಸೌಲಭ್ಯಗಳು ಇವೆ. ಖಾಸಗಿ ಕಂಪನಿಗಳ ನೆರವಿನೊಂದಿಗೆ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಆಗಿದ್ದು, ಇದರಿಂದ ಜನರಿಗೆ ಅನುಕೂಲ ಆಗಿದೆ.


ವೃಷಭಾವತಿಗೆ ರಾಸಾಯನಿಕ ಮಿಶ್ರಿತ ನೀರು


ಇದು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಸಂಪೂರ್ಣವಾಗಿ ಬಯಲು ಮುಕ್ತ ಶೌಚಾಲಯವನ್ನು ಯಶಸ್ವಿಯತ್ತ ಮುನ್ನಡಿಸುತ್ತಿದೆ. ವೃಷಭಾವತಿ ವಿಚಾರದಲ್ಲಿ ಈ ಗ್ರಾಮವನ್ನು ಶಾಪಗ್ರಸ್ಥ ಗ್ರಾಮವೆಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆ ಬಿದ್ದರೆ, ಅಲ್ಲಿರುವ ರಾಸಯನಿಕ ಮಿಶ್ರಿತ ನೀರು ಹಾಗೂ ಕಾರ್ಖಾನೆಗಳ ಕಲುಷಿತ ನೀರು ಈ ಕೆರೆಗೆ ಸೇರಿ ತನ್ನ ನೈಜ ಸ್ಥಿತಿಯನ್ನೇ ಕಳೆದುಕೊಂಡಿದೆ.


ಕೆರೆಯ ರಕ್ಷಣೆಗೆ ಗ್ರಾಮಸ್ಥರ ಒತ್ತಾಯ


ಸದ್ಯ ಕೆರೆಯ ನವೀಕರಣ ಕಾಮಗಾರಿ ನಡೆದಿದ್ದು, ಈ ಮೂಲಕವಾದರೂ ಗ್ರಾಮದ ಶಾಪ ವಿಮೋಚನೆ ಆಗಲಿ ಎಂಬುದು ಜನರ ಆಶಯವಾಗಿದೆ. ಈಗಲಾದರೂ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳು ಈ ಕೆರೆಗೆ ಸೇರುವುದನ್ನ ತಪ್ಪಿಸಬೇಕಿದೆ. ಇಲ್ಲವಾದರೆ ಭೈರಮಂಗಲ ಗ್ರಾಮದ ಇಮೇಜ್ ಗೆ ಧಕ್ಕೆಯಾಗಲಿದೆ ಎಂದು ಸ್ಥಳೀಯ ಜನರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:  Dirty Toilet: ಸ್ವಚ್ಛವಾಗಿರಬೇಕಿದ್ದ ಶೌಚಾಲಯದಲ್ಲೇ ಕೊಳಕು; ಇದು Toilet ಏಕ್ ಡರ್ಟಿ ಕಥಾ!

top videos


    ಕಳೆದ ಹಲವು ವರ್ಷಗಳಿಂದ ಹಂತ ಹಂತವಾಗಿ ವೃಷಭಾವತಿ ನದಿಗೆ ಕಲುಷಿತ ನೀರು ಸೇರುತ್ತಿದೆ. ಇದರಿಂದ ಜಲಚರ ಪ್ರಾಣಿಗಳ ಜೀವಕ್ಕೆ ಅಪಾಯ ಆಗಲಿದೆ. ಅದ್ದರಿಂದ ಸಂಬಂಧಿಸಿದ ಅಧಿಕಾರಿಗಳು ನದಿಯ ರಕ್ಷಣೆಗೆ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    First published: