Dharwada: ಕೆಮಿಕಲ್ ಟ್ಯಾಂಕರ್‌ ಪಲ್ಟಿಯಾಗಿ ಸಾವಿರಾರು ಮೀನುಗಳ ಮಾರಣಹೋಮ!

ಕೆರೆಗಳೆಲ್ಲ ತುಂಬಿ ಭರ್ತಿಯಾಗಿವೆ. ಇದರಿಂದ ರೈತರಿಗಷ್ಟೆ ಅಲ್ಲ ಮೀನುಗಾರರಿಗೂ ಸಂತಸ ತಂದಿದೆ. ಆದ್ರೆ ಇಲ್ಲೊಂದು ಗ್ರಾಮದದಲ್ಲಿ ಏಕಾಏಕಿಯಾಗಿ ಆ ಕೆರೆಯಲ್ಲಿನ ಮೀನುಗಳ ಮಾರಣಹೋಮ ಶುರುವಾಗಿದ್ದು, ರಾಶಿ ರಾಶಿ ಮೀನುಗಳು (Fish) ಸತ್ತು ದಂಡೆಗೆ ಬಂದು ಬೀಳುತ್ತಿವೆ.

ಸತ್ತು ಬಿದ್ದಿರುವ ಮೀನುಗಳು

ಸತ್ತು ಬಿದ್ದಿರುವ ಮೀನುಗಳು

  • Share this:
ಧಾರವಾಡ(ಜು.20): ರಾಜ್ಯಾದ್ಯಂತ ಒಳ್ಳೆ ಮಳೆಯಾಗಿರೊ ಕಾರಣ ಹಳ್ಳಕೊಳ್ಳ ಕೆರೆಗಳೆಲ್ಲ ತುಂಬಿ ಭರ್ತಿಯಾಗಿವೆ. ಇದರಿಂದ ರೈತರಿಗಷ್ಟೆ ಅಲ್ಲ ಮೀನುಗಾರರಿಗೂ ಸಂತಸ ತಂದಿದೆ. ಆದ್ರೆ ಇಲ್ಲೊಂದು ಗ್ರಾಮದದಲ್ಲಿ ಏಕಾಏಕಿಯಾಗಿ ಆ ಕೆರೆಯಲ್ಲಿನ ಮೀನುಗಳ ಮಾರಣಹೋಮ ಶುರುವಾಗಿದ್ದು, ರಾಶಿ ರಾಶಿ ಮೀನುಗಳು (Fish) ಸತ್ತು ದಂಡೆಗೆ ಬಂದು ಬೀಳುತ್ತಿವೆ. ಗ್ರಾಮಸ್ಥರು ಕೆರೆಯ ಸಮೀಪ ಹೋಗೋದಕ್ಕೂ ಭಯಪಡುತ್ತಿದ್ದಾರೆ. ಹೌದು ಧಾರವಾಡ (Dharawad) ಜಿಲ್ಲೆಯ ನರೇಂದ್ರ ಗ್ರಾಮದಲ್ಲಿರೋ ಸುಮಾರು 82 ಎಕರೆ ವಿಸ್ತೀರ್ಣದ ಹಿರೇಕೆರೆಯ ದುಸ್ಥಿತಿ. ಅಷ್ಟಕ್ಕೂ ಈ ಕೆರೆಗೆ ಯಾರೂ ಏನು ಮಾಡಿಲ್ಲ. ಆದ್ರೆ ಕೆರೆಯ ಮೇಲ್ಬಾಗದ ಕೂಗಳತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಂ. 4 ಹಾಯ್ದು ಹೋಗಿದ್ದು, ವಾರದ ಹಿಂದೆ ಕೆಮಿಕಲ್ ಟ್ಯಾಂಕರ್ (Chemical Tanker) ವೊಂದು ಪಲ್ಟಿಯಾಗಿತ್ತು. ಆಗ ಸೋರಿಕೆಯಾಗಿದ್ದ ಕೆಮಿಕಲ್ ಹಳ್ಳದ ಮೂಲಕ ಕೆರೆಗೆ ಬಂದು ಸೇರಿ ಈ ಅವಾಂತರ ಸೃಷ್ಟಿಯಾಗಿದೆ.

ಇನ್ನು ಈ ಕೆರೆಯಲ್ಲಿ ಮೀನುಗಾರರ ಸಂಘದವರು ನಾಲ್ಕುವರೆ ಲಕ್ಷದಷ್ಟು ಮೀನು ಮರಿಗಳನ್ನು ಬಿಟ್ಟಿದ್ದರು. ಎರಡು ವರ್ಷಗಳಿಂದ ಮೀನು ಹಿಡಿಯದೇ ಬಿಟ್ಟಿದ್ದರು. ಹೀಗಾಗಿ ಮೀನುಗಳ ಚೆನ್ನಾಗಿಯೇ ಬೆಳೆದಿದ್ದವು. ಮೊನ್ನೆ ಕೆರೆಗೆ ಬಾಗಿನ ಅರ್ಪಿಸಿದ ಹಿನ್ನೆಲೆಯಲ್ಲಿ ಈ ವಾರದಲ್ಲಿ ಮೀನುಗಳನ್ನು ಸೆರೆ ಹಿಡಿದು ಮಾರುಕಟ್ಟೆಗರ ಸಾಗಿಸೋ ಪ್ಲ್ಯಾನ್ ಸಹ ಮಾಡಿದ್ದರು.

ಕೆರೆ ಸಮೀಪಕ್ಕೆ ಹೋಗಲು ಭಯಪಡುತ್ತಿದ್ದಾರೆ ಜನ

ಆದ್ರೆ ಏಕಾಏಕಿಯಾಗಿ ಮಳೆ ಸುರಿಯುತ್ತಿರೋವಾಗಲೇ ಟ್ಯಾಂಕರ್ ಪಲ್ಟಿಯಾಗಿತ್ತು. ಆಗ ಯಾವುದೇ ಅನಾಹುತ ಆಗಿರಲೇ ಇಲ್ಲ. ಹೀಗಾಗಿ ಯಾರೂ ಅಪಘಾತ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ಮಳೆ ನೀರಿನಿಂದ ಹೀಗೆ ಕೆಮಿಕಲ್ ಸೇರಿ ಸಾವಿರಾರು ಮೀನುಗಳು ಸತ್ತು ಬಿದ್ದ ಬಳಿಕ ಗ್ರಾಮಸ್ಥರು ಕೆರೆ ಸಮೀಪ ಹೋಗೋದಕ್ಕೂ ಹೆದರುತ್ತಿದ್ದಾರೆ.ದನ ಕರುಗಳಿಗೂ ನೀರಿಲ್ಲ

ಇನ್ನು ದನಕರುಗಳಿಗೆ ನೀರು ಕುಡಿಸದಂತೆಯೂ ಗ್ರಾಪಂನವರು ಜಾಗೃತಿ ಮೂಡಿಸ್ತಾ ಇದ್ದು, ಯಾರೂ ಸಹ ಕೆರೆಗೆ ಇಳಿಯದಂತೆ ನಿಗಾ ಇಟ್ಟಿದ್ದಾರೆ. ಸದ್ಯ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: Srinivas Gowda: ಕಂಬಳದ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ವಿರುದ್ಧ ಮೂಡಬಿದಿರೆಯಲ್ಲಿ ದೂರು ದಾಖಲು

ಮೀನುಮರಿಗಳನ್ನು  ಬಿಟ್ಟು ಲಾಭದ ನಿರೀಕ್ಷೆಯಲ್ಲಿದ್ದ ಜನ

ಕೆರೆಯಲ್ಲಿ‌ ಮೀನು ಸಾಕಾಣಿಕೆಗೆ ಗ್ರಾಮಸ್ಥರು ಸಂಘ ಸ್ಥಾಪನೆ ಮಾಡಿ. ಎಲ್ಲರು ಸೇರಿ‌ ಮೀನಿನ‌ಮರಿಗಳನ್ನು ಬಿಟ್ಟಿದ್ದೆವು. ಎರಡು ವರ್ಷಗಳಮದ ಮೀನು ಮಾರಿರಲಿಲ್ಲ‌. ಈ ವರ್ಷ ಮಾರಿದ್ರೆ‌ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಸಹ ಇತ್ತು.‌ ಆದ್ರೆ ಈಗ ಕೆಮಿಕಲ್ ಟ್ಯಾಂಕ್ ಪಲ್ಟಿಯಾಗಿ ಕೆಮಿಕಲ್ ಸೋರಿಕೆಯಾದ ಪರಿಣಾಮ‌ ಮಳೆ‌ನೀರಿನೊಂದಿಗೆ ಕೆರೆ ಸೇರಿದೆ. ಇದರಿಂದ ಕೆರೆಯಲ್ಲಿನ‌‌ ಮೀನುಗಳು ಸತ್ತಿವೆ.

ಇದನ್ನೂ ಓದಿ: CM Ibrahim: ಕುಮಾರಸ್ವಾಮಿ ಆಯಸ್ಸು ಗಟ್ಟಿ; ಡಿಸೆಂಬರ್​ನಲ್ಲಿ ಚುನಾವಣೆ, 2023ಕ್ಕೆ HDK ಮುಖ್ಯಮಂತ್ರಿ; ಸಿಎಂ ಇಬ್ರಾಹಿಂ

ಬಳಿಕ ಗ್ರಾಮದಲ್ಲಿ ಡಂಗೂರ ಸಹ ಹೋಡಿಸಲಾಗುದೆ ಯಾರು ಜಾನುವಾರುಗಳಿಗೆ ಕೆರೆಯ ನೀರು ಕುಡಿಸದಂತೆ. ನಮ್ಮ ಸಂಘದಿಂದ ಖರ್ಚು ಮಾಡಿದ‌ಬೆಳೆಸಿದ‌ ಮೀನುಗಳು ಸತ್ತಿವೆ. ಇದಕ್ಕೆ ಸೂಕ್ತ‌ ಪರಿಹಾರ‌ ನೀಡಬೇಕೆಂದು ಮೀನುಗಾರಾ ನಿಂಗಪ್ಪ ಮನವಿ ಮಾಡುತ್ತಿದ್ದಾರೆ.82 ಎಕರೆಯಲ್ಲಿ ತುಂಬಿರೋ ನೀರನ್ನೆಲ್ಲ ಖಾಲಿ ಮಾಡಬೇಕಾದ ದೊಡ್ಡ ಗಂಡಾಂತರ

ಸದ್ಯ ಕೆರೆ ಸುಮಾರು 82 ಎಕರೆಯಷ್ಟು ವಿಸ್ತೀರ್ಣ ಹೊಂದಿರೋ ಕಾರಣಕ್ಕೆ ಇಡೀ ಕೆರೆಗೆ ಕೆಮಿಕಲ್ ಸೇರಿದೆಯೋ ಇಲ್ಲವೋ ಅನ್ನೋ ಗೊಂದಲವೂ ಇದೆ. ಸದ್ಯ ನೀರಿನ ಮಾದರಿಯ ವರದಿ ಬರೋವರೆಗೂ ಜನರಲ್ಲಿ ಆತಂಕ ಹಾಗೆ ಇರಲಿದ್ದು, ಒಂದು ವೇಳೆ ನೀರು ಬಳಕೆಗೆ ಯೋಗ್ಯವಲ್ಲ ಅನ್ನೋ ಫಲಿತಾಂಶ ಬಂದದ್ದೆ ಆದಲ್ಲಿ ಅನಾಮತ್ತು 82 ಎಕರೆಯಲ್ಲಿ ತುಂಬಿರೋ ನೀರನ್ನೆಲ್ಲ ಖಾಲಿ ಮಾಡಬೇಕಾದ ದೊಡ್ಡ ಗಂಡಾಂತರವೇ ಎದುರಾಗೋದಂತು ಖಚಿತ.
Published by:Divya D
First published: