Chemical Leak: ಕೊಡಗಿನ ಸಿದ್ದಾಪುರದಲ್ಲಿ ರಾಸಾಯನಿಕ ಸೋರಿಕೆ: ಆರು ವಿದ್ಯಾರ್ಥಿಗಳು ಅಸ್ವಸ್ದ

ಕೆಮ್ಮು, ಮೂಗು ಮತ್ತು ಕಣ್ಣುಗಳು ಉರಿಯಲಾರಂಭಿಸಿವೆ. ಮತ್ತೆ ಕೆಲವರಿಗೆ ತಲೆ ಸುತ್ತುವ ಅನುಭವಾಗಿದ್ದು, ವಾಂತಿಯೂ ಆಗಿದೆ. ಇದರಿಂದ ಆತಂಕಗೊಂಡ ನಂಜರಾಯಪಟ್ಟಣ, ನೆಲ್ಯಹುದಿಕೇರಿ, ಸಿದ್ದಾಪುರ, ಅಮ್ಮತ್ತಿ ಮತ್ತು ವಿರಾಜಪೇಟೆಯ ಜನರು ಮನೆಯಿಂದ ಹೊರಗೆ ಬರುವುದಕ್ಕೂ ಹಿಂದೇಟು ಹಾಕಿದರು.

ಕೆಮಿಕಲ್ ಸೋರಿಕೆಯಾದ ಸ್ಥಳ

ಕೆಮಿಕಲ್ ಸೋರಿಕೆಯಾದ ಸ್ಥಳ

  • Share this:
ಕೊಡಗು: ಬೆಂಗಳೂರಿನಿಂದ (Bengaluru) ಕೊಡಗಿನ (Kodagu) ಮೂಲಕ ಕೇರಳಕ್ಕೆ (Kerala) ಲಾರಿಯೊಂದರಲ್ಲಿ (Lorry) ಸಾಗಿಸಲಾಗುತ್ತಿದ್ದ ಯಾವುದೋ ರಾಸಾಯನಿಕ ಸೋರಿಕೆಯಾದ (Chemical Leak) ಹಿನ್ನೆಲೆ ಸಿದ್ದಾಪುರ (Siddapur) ಖಾಸಗಿ ಶಾಲೆಯೊಂದರ (Private School) 6 ವಿದ್ಯಾರ್ಥಿಗಳು (Students) ಅಸ್ವಸ್ಥಗೊಂಡು ತೀವ್ರ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ. ಕೊಡಗು ಗಡಿಭಾಗ ಕುಶಾಲನಗರದ (Kushalanagara) ಮೂಲಕ ಕೊಡಗಿಗೆ ಆಗಮಿಸಿರುವ ಲಾರಿಯಲ್ಲಿ ದ್ರವ ರೂಪದ ಯಾವುದೋ ಕೆಮಿಕಲ್ ಸಾಗಿಸುತಿತ್ತು. ಲಾರಿಯಲ್ಲಿ ಬಾಕ್ಸ್ ಗಳಲ್ಲಿ ತುಂಬಿದ್ದ ದ್ರವ ರೂಪದ ಕೆಮಿಕಲ್ ಗುಡ್ಡೆ ಹೊಸೂರಿನಿಂದಲೇ ಸೋರಿಕೆಯಾಗಲು ಆಂಭಿಸಿದೆ. ಬಳಿಕ ಅದು ನಂಜರಾಯಪಟ್ಟಣ ಬರುವಷ್ಟರಲ್ಲಿ ಜಾಸ್ತಿ ಸೋರಿಕೆಯಾಗಿದೆ. ನೆಲ್ಯಹುದಿಕೇರಿ ಮತ್ತು ಸಿದ್ದಾಪುರ ತಲುಪವಷ್ಟರಲ್ಲಿ ಮತ್ತಷ್ಟು ಜಾಸ್ತಿ ಸೋರಿಕೆಯಾಗಿದೆ. ಬೆಳಿಗ್ಗೆ ಎಂಟುವರೆಯಲ್ಲೇ ಈ ಘಟನೆ ನಡೆದಿದೆ.

ರಸಾಯನಿಕ ಸೋರಿಕೆಯಾಗಿದ್ದರಿಂದ ಆ ರಸ್ತೆಯಲ್ಲೇ ಶಾಲೆಗೆ ಹೋಗುತ್ತಿದ್ದ ಸಿದ್ಧಾಪುರದ ಸೆಂಟ್ ಆ್ಯನ್ಸ್ ಶಾಲೆಯ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಮಕ್ಕಳಿಗೆ ತಲೆಸುತ್ತು ಮತ್ತು ವಾಂತಿ

ಶಾಲೆಯ ಜಯಶ್ರೀ, ರಿಶಿನ್, ದಿವಿನ್, ವಿಸ್ಮಿತ, ಮಹಮ್ಮದ್ ಸೈಯದ್ ಮತ್ತು ಕೃಷಿಕ್ ಎಂಬ ಆರು ವಿದ್ಯಾರ್ಥಿಗಳು ರಸ್ತೆಯಿಂದ ಶಾಲಾ ಆವರಣಕ್ಕೆ ಹೋಗುವಷ್ಟರಲ್ಲಿ ತಲೆಸುತ್ತು, ವಾಂತಿ ಜೊತೆಗೆ ಉಸಿರಾಟದ ಸಮಸ್ಯೆಯಿಂದ ಬಳಲಿದ್ದಾರೆ. ಎಚ್ಚೆತ್ತುಕೊಂಡ ಶಾಲೆಯ ಶಿಕ್ಷಕರು ಕೂಡಲೇ ವಿದ್ಯಾರ್ಥಿಗಳನ್ನು ಆಟೋದಲ್ಲಿ ಸಿದ್ದಾಪುರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ:  Basavaraj Horatti: ದಾಖಲೆ ಬರೀತಾರಾ ಬಸವರಾಜ್ ಹೊರಟ್ಟಿ: ತಮ್ಮ ಅಂಬಾಸಿಡರ್ ಕಾರ್ ಬಗ್ಗೆ ಹೇಳಿದ್ದು ಹೀಗೆ

ವಿದ್ಯಾರ್ಥಿಗಳಲ್ಲಿ ಉಸಿರಾಟದ ಸಮಸ್ಯೆ

ಎಲ್ಲಾ ವಿದ್ಯಾರ್ಥಿಗಳಿಗೂ ಉಸಿರಾಟದಲ್ಲಿ ಸಮಸ್ಯೆ ಇದ್ದಿದ್ದರಿಂದ ಎಲ್ಲರಿಗೂ ಆಕ್ಸಿಜನ್ ಅಳವಡಿಸಿ ಚಿಕಿತ್ಸೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ವೆಂಕಟೇಶ್ ಸ್ವತಃ ಆರು ವಿದ್ಯಾರ್ಥಿಗಳ ಆರೋಗ್ಯ ಪರಿಶೀಲನೆ ನಡೆಸಿದರು.

ಮನೆಯಿಂದ ಹೊರ ಬರಲು ಹೆದರಿದ ಗ್ರಾಮಸ್ಥರು

ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ರಸ್ತೆಯಲ್ಲಿ ಓಡಾಡಿದ ಜನರಿಗೂ ಇದ್ದಕ್ಕಿದ್ದಂತೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕೆಮ್ಮು, ಮೂಗು ಮತ್ತು ಕಣ್ಣುಗಳು ಉರಿಯಲಾರಂಭಿಸಿವೆ. ಮತ್ತೆ ಕೆಲವರಿಗೆ ತಲೆ ಸುತ್ತುವ ಅನುಭವಾಗಿದ್ದು, ವಾಂತಿಯೂ ಆಗಿದೆ. ಇದರಿಂದ ಆತಂಕಗೊಂಡ ನಂಜರಾಯಪಟ್ಟಣ, ನೆಲ್ಯಹುದಿಕೇರಿ, ಸಿದ್ದಾಪುರ, ಅಮ್ಮತ್ತಿ ಮತ್ತು ವಿರಾಜಪೇಟೆಯ ಜನರು ಮನೆಯಿಂದ ಹೊರಗೆ ಬರುವುದಕ್ಕೂ ಹಿಂದೇಟು ಹಾಕಿದರು. ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ರಾಸಾಯನಿಕ ಸಾಗಿಸುತ್ತಿದ್ದ ಲಾರಿಯನ್ನು ಕರ್ನಾಟಕ ಕೇರಳ ಗಡಿಭಾಗ ಪೆರಂಬಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದರು.

Chemical leak six student hospitalized in kodagu district rsk mrq
ವಶಕ್ಕೆ ಪಡೆದ ಲಾರಿ


ಪ್ರಯೋಗಾಲಯಕ್ಕೆ ರಾಸಾಯನಿಕ ಮಾದರಿ ರವಾನೆ

ಸ್ಥಳಕ್ಕೆ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ರಾಸಾಯನಿಕದ ಮಾದರಿ ಸಂಗ್ರಹಿಸಿ ಪ್ರಯೋಗಾಲಕ್ಕೆ ಕಳುಹಿಸಿದ್ದಾರೆ. ಎರಡು ದಿನಗಳಲ್ಲಿ ವರದಿ ಬರಲಿದ್ದು ಅದಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಡಿಎಚ್ಓ ಡಾ.ವೆಂಕಟೇಶ್ ಅವರಿಂದ ಘಟನೆ ಬಗ್ಗೆ ಮಾಹಿತಿ

ಈ ಕುರಿತು ಮಾತನಾಡಿದ ಡಿಎಚ್‍ಒ ಡಾ. ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳೆಲ್ಲರ ಆರೋಗ್ಯ ಸ್ಥಿರವಾಗಿದೆ. ಆದರೆ ಸೋರಿಕೆಯಾಗಿರುವ ರಾಸಾಯನಿಕದಿಂದಲೇ ವಿದ್ಯಾರ್ಥಿಗಳಿಗೆ ಉಸಿರಾಟದಲ್ಲಿ ತೊಂದರೆ ಆಗಿರುವುದು ಸತ್ಯ. ರಾಸಾಯನಿಕ ಸಾಗಿಸುತ್ತಿದ್ದ ಲಾರಿ ಚಾಲಕ ಅದು ಮೆಣಸಿನ ಸಾಸ್ ಎಂದು ಹೇಳಿದ್ದಾನೆ. ಆದರೆ ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ.

ಇದನ್ನೂ ಓದಿ:  Tulu Nadu: ತುಳುನಾಡಲ್ಲಿ ಈಗ ಪತ್ತನಾಜೆ ಸಮಯ! ಸಮಾರಂಭಕ್ಕೆ ಬ್ರೇಕ್, ಕೃಷಿ ಕಾರ್ಯಕ್ಕೆ ಚಾಲನೆ

ಉಸಿರಾಟಕ್ಕೆ ಸಮಸ್ಯೆ ಮಾಡಿದೆ ಎಂದರೆ ಅದು ಯಾವುದೋ ಕೆಮಿಕಲ್ ಎಂದು ಕಂಡು ಬರುತ್ತಿದೆ. ಸದ್ಯ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಎರಡು ದಿನಗಳಲ್ಲಿ ವರದಿ ಬರಲಿದೆ. ಆ ಬಳಿಕವಷ್ಟೇ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸೋರಿಕೆಯಾದ ರಾಸಾಯನಿಕ ಹಲವು ಹಳ್ಳಿಗಳಲ್ಲಿ ಆತಂಕವನ್ನೇ ಸೃಷ್ಟಿಸಿತ್ತು.
Published by:Mahmadrafik K
First published: