ಮೊದಲು ನೀವು ಬದಲಾಗಿ, ಆನಂತರ ನಮಗೆ ಬುದ್ಧಿ ಹೇಳುವಿರಂತೆ; ಎಚ್​ಡಿಕೆಗೆ ಟಾಂಗ್ ಕೊಟ್ಟ ಚಲುವರಾಯಸ್ವಾಮಿ

ಇತ್ತೀಚೆಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಕಾಂಗ್ರೆಸ್ ನಾಯಕರಿಂದ ತೀವ್ರವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಮ್ಮ ಶಾಸಕರು ಇಂತಹ ಹೇಳಿಕೆ ನೀಡದೆ ತಡೆಯುವಂತೆ ಕಾಂಗ್ರೆಸ್ ಪಕ್ಷಕ್ಕೆ ತಾಕೀತು ಮಾಡಿದ್ದರು.

Seema.R | news18
Updated:May 9, 2019, 2:00 PM IST
ಮೊದಲು ನೀವು ಬದಲಾಗಿ, ಆನಂತರ ನಮಗೆ ಬುದ್ಧಿ ಹೇಳುವಿರಂತೆ; ಎಚ್​ಡಿಕೆಗೆ ಟಾಂಗ್ ಕೊಟ್ಟ ಚಲುವರಾಯಸ್ವಾಮಿ
ಚೆಲುವರಾಯ ಸ್ವಾಮಿ-ಎಚ್​​ಡಿಕೆ
  • News18
  • Last Updated: May 9, 2019, 2:00 PM IST
  • Share this:
ಮಂಡ್ಯ (ಮೇ.9): ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿ ಆನಂತರ ಕಾಂಗ್ರೆಸ್ ನಾಯಕರು ಯಾವ ರೀತಿ ಇರಬೇಕು ಎಂಬ ಕುರಿತು ಉಪದೇಶ ನೀಡಲಿ ಎಂದು ಮಾಜಿ ಸಂಸದ ಎನ್. ಚೆಲುವರಾಯಸ್ವಾಮಿ ಎಚ್​ಡಿಕೆಗೆ ನೇರಾನೇರ ಟಾಂಗ್ ನೀಡಿದ್ದಾರೆ.

ಇತ್ತೀಚೆಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಕಾಂಗ್ರೆಸ್ ನಾಯಕರಿಂದ ತೀವ್ರವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಮ್ಮ ಶಾಸಕರು ಇಂತಹ ಹೇಳಿಕೆ ನೀಡದೆ ತಡೆಯುವಂತೆ ಕಾಂಗ್ರೆಸ್ ಪಕ್ಷಕ್ಕೆ ತಾಕೀತು ಮಾಡಿದ್ದರು.

ಎಚ್​ಡಿಕೆ ಅವರ ಈ ವರ್ತನೆಯನ್ನು ಬಲವಾಗಿ ಖಂಡಿಸಿರುವ ಚೆಲುವರಾಯಸ್ವಾಮಿ, "ಕಳೆದ ಮೂರು ನಾಲ್ಕು ದಿನಗಳಿಂದ ಮತ್ತೆ ಸಿದ್ದರಾಮಯ್ಯ  ಸಿಎಂ ಆಗಬೇಕು ಎಂಬ ವಿಷಯ ಬಹಳ ಚರ್ಚೆಯಾಗುತ್ತಿದೆ. ಈ ವಿಚಾರದ ಕುರಿತು ಸಿಎಂ ಕುಮಾರಸ್ವಾಮಿ 80 ಸೀಟುಗಳನ್ನು ಗೆದ್ದಿರುವ ರಾಷ್ಟ್ರೀಯ ಪಕ್ಷಕ್ಕೆ ಸೂಚನೆ ನೀಡುತ್ತಾರೆ. ಕಾಂಗ್ರೆಸ್​ ನಾಯಕರು ಯಾವ ರೀತಿ ಇರಬೇಕು ಎಂಬ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡುವ ಅವರು ತಮ್ಮ ನಡುವಳಿಕೆ ಮಾತ್ರ ಕಿಂಚಿತ್ತು ಬದಲಿಸಿಕೊಂಡಿಲ್ಲ" ಎಂದು ಸಿಎಂ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗಬೇಕೆಂಬುದು ಹಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಕುಮಾರಸ್ವಾಮಿಯನ್ನು ಬದಲಾವಣೆ ಮಾಡಿ  ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂದು ಅರ್ಥವಲ್ಲ. ಕುಮಾರಸ್ವಾಮಿ ಬದಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಯಾರು ಹೇಳಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಒಬ್ಬ ಒಳ್ಳೆಯ ನಾಯಕ ಸಿಎಂ ಆಗಬೇಕು . ಎಲ್ಲ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ ನಮಗೆ ಬೇಕು ಎಂಬುದು ನಮ್ಮ ಉದ್ದೇಶ ಅಷ್ಟೆ" ಎಂದು ಸ್ಪಷ್ಟಪಡಿಸಿದರು.

37 ಸ್ಥಾನ ಗೆದ್ದು ಸಿಎಂ ಆದವರು 80 ಸ್ಥಾನ ಗೆದ್ದವರಿಗೆ ಸೂಚನೆ ನೀಡುತ್ತಾರೆ. ಕಾಂಗ್ರೆಸ್​ ನಾಯಕರು ಹೀಗಿರಬೇಕು. ಹಾಗಿರಬೇಕು ಎಂದು ಹೇಳುತ್ತಾರೆ. ಯಾವುದೇ ಮೈತ್ರಿ ಸರ್ಕಾರದಲ್ಲಿ ಈ ರೀತಿ ನಡವಳಿಕೆ ನೋಡಿಲ್ಲ. ರಾಜ್ಯದಲ್ಲಿ ಯಾರೇ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರೂ ಈ ರೀತಿಯ ವರ್ತನೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಜೆಡಿಎಸ್​ ಜೊತೆ ಕಾಂಗ್ರೆಸ್​ ಮಂಡ್ಯದಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ಒಂದಾಗಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಂಡ್ಯದಲ್ಲಿ ಹಾಲು ಒಕ್ಕೂಟ ಚುನಾವಣೆ ಏಕಿಲ್ಲ? : ಮಂಡ್ಯದಲ್ಲಿ ಮನ್​ಮೂಲ್​ (ಹಾಲು ಒಕ್ಕೂಟ) ಚುನಾವಣೆ ನಡೆಯಬೇಕಿತ್ತು. ರಾಜ್ಯದ ಎಲ್ಲ ಕಡೆ ಹಾಲು ಒಕ್ಕೂಟಗಳಿಗೆ ಚುನಾವಣೆ ನಡೆಯುತ್ತಿದೆ. ಮಂಡ್ಯದಲ್ಲಿಯೂ 30ನೇ ತಾರೀಖಿನ ಒಳಗೆ ಈ ಚುನಾವಣೆ ನಡೆಯಬೇಕಿತ್ತು. ಆದರೆ, ಇಲ್ಲಿ ಈ ಚುನಾವಣೆ ನಡೆಯದಂತೆ ಮೈತ್ರಿ ನಾಯಕರು ಸೂಚನೆ ನೀಡಿದ್ದಾರೆ.

ಇದನ್ನು ಓದಿ: ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂಬ ಶ್ರೀರಾಮುಲು ಆರೋಪ; ದೂರು ದಾಖಲಿಸಲು ಮುಂದಾದ ಕೈ ನಾಯಕರುಸರ್ಕಾರ ನಡೆಸುವವರು ಅಧಿಕಾರಿಗಳಿಗೆ ತಾಕಿತು ಮಾಡಿ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದಾರೆ. ಅಧಿಕಾರಿಗಳು ಕೂಡ ಸರ್ಕಾರದ ಗುಲಾಮರಂತೆ ಕೆಲಸಮಾಡುತ್ತಿದ್ದಾರೆ. ಸಹಕಾರ ಸಂಘ ಅಧಿಕಾರಿಗಳಿಗೆ ನಾಚಿಕೆಯಾಬೇಕು. ಮಾನ ಮರ್ಯಾದೆ ಇದ್ದರೆ ಮಂಡ್ಯ ಮನ್‌ಮುಲ್‌ ಚುನಾವಣೆ ನಡೆಸಲಿ. ಮಂಡ್ಯ ಮನ್‌ಮುಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ನಿರ್ದೇಶಕರಿದ್ದಾರೆ ಅಂತ ಈ ರೀತಿ ಮಾಡಿದ್ದಾರೆ. ಕಾಂಗ್ರೆಸ್​ ನಾಯಕರಿಗೆ ಬುದ್ಧಿಕಲಿಸಬೇಕು ಎಂದು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ.

(ವರದಿ : ರಾಘವೇಂದ್ರ ಗಂಜಾಮ್​)

First published: May 9, 2019, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading