Fuel price today: ಲೀಟರ್ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಗೊತ್ತೇ?
ಸತತ ಮೂರನೇ ದಿನವೂ ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು, ಡೀಸೆಲ್ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 73.27 ರೂ., ಡೀಸೆಲ್ ಬೆಲೆ ಲೀಟರ್ಗೆ 67.24 ರೂ. ಆಗಿದೆ ಎನ್ನಲಾಗಿದೆ.
news18-kannada Updated:October 20, 2019, 7:53 PM IST

ಪೆಟ್ರೋಲ್ ಬಂಕ್
- News18 Kannada
- Last Updated: October 20, 2019, 7:53 PM IST
ಬೆಂಗಳೂರು(ಅ.20): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ದಾಖಲೆಯ ಮಟ್ಟ ತಲುಪಿದ ಬಳಿಕ ಇಳಿಕೆಯಾಗಿದೆ. ಆದರೆ, ಕಳೆದೊಂದು ವಾರದಿಂದ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಪೆಟ್ರೋಲ್ ದರದಲ್ಲಿ ಮಾತ್ರ ಸ್ಥಿರತೆ ಕಂಡು ಬಂದಿದ್ದು, ಡೀಸೆಲ್ ಬೆಲೆಯಲ್ಲಿ 8 ಪೈಸೆ ಇಳಿಕೆಯಾಗಿದೆ.
ಸತತ ಮೂರನೇ ದಿನವೂ ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು, ಡೀಸೆಲ್ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 73.27 ರೂ., ಡೀಸೆಲ್ ಬೆಲೆ ಲೀಟರ್ಗೆ 67.24 ರೂ. ಆಗಿದೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ದರ 75.74 ರೂ., ಡೀಸೆಲ್ಗೆ 68.40 ರೂ. ಇದೆ. ಹಾಗೆಯೇ ಕೊಲ್ಕತ್ತಾದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕ್ರಮವಾಗಿ 75.92 ರೂ. ಮತ್ತು 68.53 ರೂ. ಆಗಿದೆ. ಅಲ್ಲದೇ ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ 78.88 ರೂ. ಮತ್ತು ಡೀಸೆಲ್ಗೆ 69.35 ರೂ. ಇದೆ. ಚೆನ್ನೈ ಪೆಟ್ರೋಲ್ಗೆ 76.09 ರೂ., ಡೀಸೆಲ್ ದರವೂ 69.89 ರೂ. ಕಡಿಮೆಯಾಗಿದೆ. ಅಂತೆಯೇ ಹೈದರಾಬಾದ್ನಲ್ಲೂ ಪೆಟ್ರೋಲ್ಗೆ ಲೀಟರ್ ಬೆಲೆ 77.91 ರೂ., ಡೀಸೆಲ್ ಬೆಲೆ 72.15 ರೂ. ಆಗಿದೆ. ಈ ಹಿಂದೆ ಸೆಪ್ಟೆಂಬರ್ 14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್ ದಾಳಿ ನಡೆದಿತ್ತು. ಈ ಡ್ರೋನ್ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿಢೀರ್ ಏರಿಕೆಯಾಗಿತ್ತು. ತೈಲ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡ ಕಾರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾ ಬೀರಿತ್ತು. ಇದರಿಂದಲೇ ಬೆಲೆ ಏರಿಕೆ ಕಂಡಿತ್ತು.
ಇದನ್ನೂ ಓದಿ: ವಾಯುಭಾರ ಕುಸಿತ: ರಾಜ್ಯದ ಹಲವೆಡೆ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ
ಇದೀಗ ಎಲ್ಲಾ ಸಮಸ್ಯೆಯೂ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದ ಎಂದು ಇಂಡಿಯನ್ ಆಯಿಲ್ನ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.
ಯಾಕೆ ಬೆಲೆ ಕಡಿಮೆ?: ಕಳೆದ ಐದು ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆಗಳು ಇಳಿಕೆಯಾಗುತ್ತಿರವುದನ್ನು ನಾವು ಗಮನಿಸಬಹುದು. ಪೆಟ್ರೋಲ್ ಬೆಲೆ ಇಳಿಕೆಗೆ ಮಾಮೂಲಿಯಂತೆ ಕಾರಣವಾಗಿರುವುದು ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಆಗುತ್ತಿರುವ ಗಣನೀಯ ಇಳಿಕೆ. ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್ನಲ್ಲಿ ಬ್ಯಾರೆಲ್ ತೈಲವು 59.23 ಡಾಲರ್ಗೆ ಇಳಿಕೆಯಾಗಿದೆ. ಹಾಗೆಯೇ ಡಬ್ಲ್ಯೂಟಿಐ ಕ್ರೂಡ್ನಲ್ಲಿನ ಬ್ಯಾರೆಲ್ ತೈಲವು 50.53 ಡಾಲರ್ ಆಗಿದೆ. ಮುಂದಿನ ಕೆಲ ದಿನಗಳವರೆಗೂ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.
----------
ಸತತ ಮೂರನೇ ದಿನವೂ ಪೆಟ್ರೋಲ್ ಬೆಲೆ ಸ್ಥಿರವಾಗಿದ್ದು, ಡೀಸೆಲ್ ಬೆಲೆಯಲ್ಲಿ ಮಾತ್ರ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 73.27 ರೂ., ಡೀಸೆಲ್ ಬೆಲೆ ಲೀಟರ್ಗೆ 67.24 ರೂ. ಆಗಿದೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ದರ 75.74 ರೂ., ಡೀಸೆಲ್ಗೆ 68.40 ರೂ. ಇದೆ. ಹಾಗೆಯೇ ಕೊಲ್ಕತ್ತಾದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕ್ರಮವಾಗಿ 75.92 ರೂ. ಮತ್ತು 68.53 ರೂ. ಆಗಿದೆ. ಅಲ್ಲದೇ ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ 78.88 ರೂ. ಮತ್ತು ಡೀಸೆಲ್ಗೆ 69.35 ರೂ. ಇದೆ. ಚೆನ್ನೈ ಪೆಟ್ರೋಲ್ಗೆ 76.09 ರೂ., ಡೀಸೆಲ್ ದರವೂ 69.89 ರೂ. ಕಡಿಮೆಯಾಗಿದೆ. ಅಂತೆಯೇ ಹೈದರಾಬಾದ್ನಲ್ಲೂ ಪೆಟ್ರೋಲ್ಗೆ ಲೀಟರ್ ಬೆಲೆ 77.91 ರೂ., ಡೀಸೆಲ್ ಬೆಲೆ 72.15 ರೂ. ಆಗಿದೆ.