Fuel price today: ಇಲ್ಲಿದೆ ಪೆಟ್ರೋಲ್​​-ಡೀಸೆಲ್​​ ದರ; ಒಂದು ಲೀಟರ್​​​​ಗೆ ಎಷ್ಟು ಗೊತ್ತೇ?

ಈಗ ಎಲ್ಲಾ ಸಮಸ್ಯೆಯೂ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್‌ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದೆ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದರು. ಆದರೀಗ, ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆ ಏರಿಕೆಯಾಗಲಿದೆ ಎನ್ನುತ್ತಿವೆ ಮೂಲಗಳು.

news18-kannada
Updated:November 21, 2019, 3:50 PM IST
Fuel price today: ಇಲ್ಲಿದೆ ಪೆಟ್ರೋಲ್​​-ಡೀಸೆಲ್​​ ದರ; ಒಂದು ಲೀಟರ್​​​​ಗೆ ಎಷ್ಟು ಗೊತ್ತೇ?
ಪೆಟ್ರೋಲ್​- ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ನ.21): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ದಾಖಲೆಯ ಮಟ್ಟ ತಲುಪಿದ ಬಳಿಕ ಇಳಿಕೆಯಾಗುತ್ತಲೇ ಇತ್ತು. ಬಳಿಕ ಕಳೆದ ಒಂದು ವಾರದಿಂದ ಮತ್ತೆ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಪೆಟ್ರೋಲ್​​-ಡೀಸೆಲ್​​​ ದರದಲ್ಲಿ ದಿಢೀರ್​​ ಏರಿಕೆಯಾಗಲು ಶುರುವಾಯ್ತು. ಆದರೀಗ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್​​ ಬೆಲೆ ಮೂರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್​​ ಪೆಟ್ರೋಲ್​​ ಬೆಲೆ 74.20 ರೂ., ಡೀಸೆಲ್ ಬೆಲೆ ಲೀಟರ್​​ಗೆ 65.84 ರೂ. ಆಗಿದೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್​​ ಲೀಟರ್​ ದರ 76.74 ರೂ., ಡೀಸೆಲ್​​ಗೆ 68.08 ರೂ. ಇದೆ. ಹಾಗೆಯೇ ಕೊಲ್ಕತ್ತಾದಲ್ಲಿ ಪೆಟ್ರೋಲ್​​-ಡೀಸೆಲ್​​ ಬೆಲೆ ಕ್ರಮವಾಗಿ 76.89 ರೂ. ಮತ್ತು 68.25 ರೂ. ಆಗಿದೆ. ಅಲ್ಲದೇ ಮುಂಬೈನಲ್ಲಿ ಲೀಟರ್​​ ಪೆಟ್ರೋಲ್​​ಗೆ 79.86 ರೂ. ಮತ್ತು ಡೀಸೆಲ್​​ಗೆ 69.06 ರೂ. ಇದೆ. ಚೆನ್ನೈ ಪೆಟ್ರೋಲ್​ಗೆ 77.13 ರೂ., ಡೀಸೆಲ್​ ದರವೂ 69.59 ರೂ. ಆಗಿದೆ. ಅಂತೆಯೇ ಹೈದರಾಬಾದ್​ನಲ್ಲೂ ಪೆಟ್ರೋಲ್​​​ಗೆ ಲೀಟರ್​​ ಬೆಲೆ 78.96 ರೂ., ಡೀಸೆಲ್​​ ಬೆಲೆ 71.85 ರೂ. ಇದೆ.

ಇದನ್ನೂ ಓದಿ: ಲಂಕಾದಲ್ಲಿ ತಮಿಳಿಗ ಮುತ್ತಯ್ಯ ಮುರಳೀಧರನ್ ರಾಜ್ಯಪಾಲರಾಗಲು ತಮಿಳಿಗರಿಂದಲೇ ವಿರೋಧ; ಪೇಚಿಗೆ ಸಿಲುಕಿದ ಸ್ಪಿನ್ ಮಾಂತ್ರಿಕ

ಈ ಹಿಂದೆ ಸೆಪ್ಟೆಂಬರ್​​ 14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಈ ಡ್ರೋನ್​​ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿಢೀರ್​​ ಏರಿಕೆಯಾಗಿತ್ತು. ತೈಲ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡ ಕಾರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾ ಬೀರಿತ್ತು. ಇದರಿಂದಲೇ ಬೆಲೆ ಏರಿಕೆ ಕಂಡಿತ್ತು.

ಈಗ ಎಲ್ಲಾ ಸಮಸ್ಯೆಯೂ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್‌ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದೆ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದರು. ಆದರೀಗ, ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆ ಏರಿಕೆಯಾಗಲಿದೆ ಎನ್ನುತ್ತಿವೆ ಮೂಲಗಳು.
First published: November 21, 2019, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading