ಮತದಾನ ಮಾಡುವ ಸಲುವಾಗಿ ಎಲ್ಲರೂ ಇಂದು ಬೆಳಗಿನಿಂದಲೇ (Morning) ತಮ್ಮ ತಮ್ಮ ಮತಗಟ್ಟೆಗೆ ಹೊರಡುತ್ತಿದ್ದಾರೆ. ಆದರೆ ಇನ್ನು ಹಲವರು ಒಂದು ಒಳ್ಳೆ ಸಮಯದಲ್ಲಿ ಮತದಾನ ಮಾಡಬೇಕು ಎಂಬ ಆಶಯ ಹೊಂದಿರುತ್ತಾರೆ. ಅವರೆಲ್ಲರೂ ಇಂದು ರಾಹುಕಾಲ ಎಷ್ಟು ಗಂಟೆಗೆ (Time) ಎಂಬುದನ್ನು ತಿಳಿದುಕೊಂಡು ನಂತರ ಮತದಾನ ಮಾಡುತ್ತಾರೆ. ಅದರಲ್ಲೂ ಚುನಾವಣೆಯಲ್ಲಿ (Election) ಸ್ಪರ್ಧಿಸುತ್ತಿರುವ ಅನೇಕ ಅಭ್ಯರ್ಥಿಗಳು ಇದನ್ನು ಹೆಚ್ಚಾಗಿ ನಂಬುತ್ತಾರೆ. ಈ ಸಮಯದಲ್ಲಿ ಮತದಾನ ಮಾಡಲು ಅಷ್ಟಾಗಿ ಇಷ್ಟಪಡುವುದಿಲ್ಲ.
ಹಾಗಾದ್ರೆ ಇಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯ ವರೆಗೆ ರಾಹುಕಾಲ ಇರಲಿದೆ ಎಂದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ
ಈ ದಿನ ರಾಹುಕಾಲ - 12.23 pm to 1.59 pmರ ವರೆಗೆ ಇರಲಿದೆ. ಈ ಸಮಯವನ್ನು ನೋಡಿಕೊಂಡು ಕೆಲವರು ಮತದಾನ ಮಾಡುತ್ತಾರೆ.
ಇದನ್ನೂ ಓದಿ: Karnataka Election 2023 Live Updates: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತದಾನ
ರಾಹುಕಾಲದಲ್ಲಿ ಯಾವುದಾದರೂ ಒಂದು ಕಾರ್ಯ ಮಾಡಿದರೆ ಅದು ಸರಿಯಾಗಿ ಆಗುವುದಿಲ್ಲ ಎಂಬ ಒಂದು ನಂಬಿಕೆ ಇದೆ. ಈ ಕಾರಣಕ್ಕಾಗಿ ಈ ಸಮಯದಲ್ಲಿ ಮತದಾನ ಮಾಡುವವರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾದರೂ ಆಗಬಹುದು.
ಹಾಗೆಯೇ ಈ ದಿನ ರಾಹುಕಾಲ - 12.23 pm to 1.59 pm, ಗುಳಿಕ ಕಾಲ - 10.48 am to 12.23 pm, ಯಮಗಂಡಕಾಲ - 7.38 am to 9.13 am, ಸೂರ್ಯೋದಯ - 6.03 am, ಸೂರ್ಯಾಸ್ತ - 6.44 pm, ಚಂದ್ರೋದಯ - 11.33 pm, ಚಂದ್ರಾಸ್ತ -10.05 am ಆಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ