ರಾಯಚೂರು: ಕೊರೋನಾ ತಡೆಗಾಗಿ ಗಡಿಭಾಗದಲ್ಲಿ ಕಾಟಾಚಾರಕ್ಕೆ ಚೆಕ್ ಪೋಸ್ಟ್ ಗಳು

ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬರುವ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಸರಕಾರ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ  ರಾಯಚೂರು ತಾಲೂಕಿನ ಶಕ್ತಿನಗರ, ದೇವದುರ್ಗಾ ತಾಲೂಕಿನ ಹೂವಿನ ಹೆಡಗಿ, ತಿಂಥಣಿ, ಸಿಂಧನೂರು ತಾಲೂಕಿನ ದಡೇಸಗೂರು, ರಾಯಚೂರಿನ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಆರಂಭಿಸಿದ್ದಾರೆ.

ಚೆಕ್​ಪೋಸ್ಟ್​

ಚೆಕ್​ಪೋಸ್ಟ್​

  • Share this:
ರಾಯಚೂರು(ಫೆ.27): ಕಳೆದ ವರ್ಷದಿಂದ ಅಬ್ಬರಿಸುತ್ತಿರುವ ಮಹಾಮಾರಿ ಕೊರೋನಾ ಈಗ ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ದೇಶದಲ್ಲಿ ಕೊರೋನಾ ಎರಡನೆಯ ಅಲೆ ಆರಂಭವಾಗಿ ಆತಂಕ ಸೃಷ್ಟಿಸಿದೆ. ಕೊರೋನಾ ರಾಯಚೂರು ಜಿಲ್ಲೆಯಲ್ಲಿಯೂ ಆತಂಕ ಸೃಷ್ಟಿಸಿದೆ. ಈ ಹಿನ್ನಲೆಯಲ್ಲಿ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಆರಂಭಿಸಿದ್ದಾರೆ. ಈ ಚೆಕ್ ಪೋಸ್ಟ್ ಗಳು ಕಾಟಾಚಾರಕ್ಕೆ ಚೆಕ್ ಪೋಸ್ಟ್ ಆರಂಭವಾದಂತೆ ಇವೆ. ರಾಜ್ಯದಲ್ಲಿ ಕಳೆದ ವರ್ಷ ಮಾರ್ಚ್​​​​ ತಿಂಗಳಲ್ಲಿ ಕೊರೋನಾ ಪ್ರಕರಣಗಳು ಆರಂಭವಾಗಿ ಇಡೀ ರಾಜ್ಯ ತತ್ತರಿಸುವಂತಾಗಿತ್ತು.

ರಾಯಚೂರು ಜಿಲ್ಲೆಯಲ್ಲಿ ಆರಂಭದಲ್ಲಿ ಕೊರೋನಾದಿಂದ ದೂರವಿತ್ತು. ಮೇ 17ರವರೆಗೂ ಒಂದೂ ಕೊರೋನಾ ಪ್ರಕರಣಗಳು ಇರಲಿಲ್ಲ. ಯಾವಾಗ ಮಹಾರಾಷ್ಟ್ರದಿಂದ ವಲಸಿಗರು ರಾಯಚೂರು ಜಿಲ್ಲೆಗೆ ಬಂದರೋ ಆಗಿನಿಂದ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಆರಂಭವಾಯಿತು. ಜಿಲ್ಲೆಯಲ್ಲಿ ಮೊದಲೆರಡು ತಿಂಗಳು ಮಹಾರಾಷ್ಟ್ರ ವಲಿಸಗರಲ್ಲಿಯೇ ಅಧಿಕ ಕೊರೋನಾ ಪ್ರಕರಣಗಳಿದ್ದು, ನಂತರದಲ್ಲಿ ಜಿಲ್ಲೆಯ ಒಳಗಿನವರಿಗೆ ಹರಡಿ ಕೊರೊನಾ ಅಬ್ಬರಿಸಿತು. ಈಗ ಜಿಲ್ಲೆಯಲ್ಲಿ ಒಟ್ಟು 289861 ಜನರ ಗಂಟಲ ದ್ರವ ಪರೀಕ್ಷೆ ಮಾಡಿದ್ದು ಅದರಲ್ಲಿ 14397 ಜನರಿಗೆ ಕೊರೋನಾ ಸೋಂಕು ತಗುಲಿತ್ತು. ಈಗ ಜಿಲ್ಲೆಯಲ್ಲಿ ಕೇವಲ 12 ಸಕ್ರಿಯ ಕೊರೋನಾ ಪ್ರಕರಣಗಳಿವೆ. ಇಲ್ಲಿಯವರೆಗೂ 158 ಜನರು ಸಾವನ್ನಪ್ಪಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಿನ ಆರಂಭದಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು ಜನವರಿ ಒಂದರಿಂದ ನಿನ್ನೆಯವರೆಗೂ ಕೇವಲ 128  ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಈ ಮೊದಲು ಗಂಟಲದ್ರವ ನೀಡಿದರಲ್ಲಿ ಶೇ 5 ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ 1000 ಕ್ಕೆ ಒಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಜನರು ಕೊರೋನಾ ಭಯದಿಂದ ಸ್ವಲ್ಪ ದೂರವಾಗಿದ್ದಾರೆ ಎನ್ನುತ್ತಿರುವಾಗಲೇ ಮತ್ತೆ ಮಹಾರಾಷ್ಟ್ರ ದಲ್ಲಿ ಸೋಂಕು ತೀವ್ರಗೊಳ್ಳುತ್ತಿರುವದು ರಾಯಚೂರು ಜನತೆಯಲ್ಲಿ ಆತಂಕ ಮೂಡಿಸಿದೆ.

BS Yediyurappas Birthday: 79ನೇ ಜನ್ಮದಿನದ ಸಂಭ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ; ಶುಭ ಕೋರಿದ ಪ್ರಧಾನಿ ಮೋದಿ

ರಾಜ್ಯದಲ್ಲಿ ಕೊರೋನಾ ತಡೆಗಾಗಿ ಸರಕಾರ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ, ಈ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ, ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬರುವ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಸರಕಾರ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ  ರಾಯಚೂರು ತಾಲೂಕಿನ ಶಕ್ತಿನಗರ, ದೇವದುರ್ಗಾ ತಾಲೂಕಿನ ಹೂವಿನ ಹೆಡಗಿ, ತಿಂಥಣಿ, ಸಿಂಧನೂರು ತಾಲೂಕಿನ ದಡೇಸಗೂರು, ರಾಯಚೂರಿನ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಆರಂಭಿಸಿದ್ದಾರೆ.

ಈ ಚೆಕ್ ಪೋಸ್ಟ್ ಗಳಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳುತ್ತಾರೆ ಎಂಬುವುದನ್ನು ನ್ಯೂಸ್ 18 ನ್ಯೂಸ್ ರಿಯಾಲಿಟಿ ಚೆಕ್ ಮಾಡಿದಾಗ ಈ ಚೆಕ್ ಪೋಸ್ಟ್ ಗಳು ಕಾಟಾಚಾರಕ್ಕೆ ಇರುವಂತೆ ಇವೆ. ಕೇರಳ ಹಾಗು ಮಹಾರಾಷ್ಟ್ರದಿಂದ ಬರುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ, ಶಕ್ತಿನಗರ ಚೆಕ್ ಪೋಸ್ಟ್ ನಲ್ಲಿ ಕೇವಲ ಕೆಪಿಸಿ ಆರೋಗ್ಯ ಸಿಬ್ಬಂದಿಯೊಬ್ಬರು ಇದ್ದರು, ಒಬ್ಬರು ಪೊಲೀಸರು ಮಾತ್ರ ಇದ್ದರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇತ್ತ ಇರಲಿಲ್ಲ, ಕೆಪಿಸಿಯ ಆರೋಗ್ಯ ಸಿಬ್ಬಂದಿಯವರನ್ನು ಕೇಳಿದರೆ ಇವತ್ತು ದೇವಸಗೂರಿನ ಜಾತ್ರೆ ಇದೆ ಹೀಗಾಗಿ ತಡವಾಗಿ ಬರುತ್ತಾರೆ ಎಂದು ಹೇಳಿದ್ದಾರೆ ಎಂದರು.

ಇನ್ನೂ ನಿನ್ನೆಯಿಂದ ಆರೋಗ್ಯ ಇಲಾಖೆಯು ಚೆಕ್ ಪೋಸ್ಟ್ ತಪಾಸಣೆಯ ಮಾಹಿತಿಗಾಗಿ ಫಾರ್ಮೆಟ್ ನೀಡಲಾಗಿದೆ, ಅದರಲ್ಲಿ ನಿನ್ನೆ ಭರ್ತಿಯಾಗಿದ್ದು ಕೇವಲ 15 ವಾಹನಗಳ ತಪಾಸಣೆ ಮಾತ್ರ, ಆದರೆ ನಾವು ಇಂದು ಸ್ಥಳದಲ್ಲಿದ್ದ ಹದಿನೈದು ನಿಮಿಷದಲ್ಲಿ ಮಹಾರಾಷ್ಟ್ರದಿಂದ ನಾಲ್ಕು ವಾಹನಗಳ ತಪಾಸಣೆ ಮಾಡಿದರು, ಇದರಿಂದಾಗಿ ಇಲ್ಲಿ ಸರಿಯಾಗಿ ತಪಾಸಣೆಯಾಗುತ್ತಿಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.ಕೊರೊನಾ ಎರಡನೆಯ ಅಲೆ ಜಿಲ್ಲೆಗೆ ಅಬ್ಬರಿಸಲು ಬಿಡದಂತೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ , ಇಲ್ಲದಿದ್ದರೆ ಮೊದಲು ಅಲೆಯಲ್ಲಿ ತತ್ತರಿಸಿ ಸಂಕಷ್ಟ ಅನುಭವಿಸಿದ ಜನ ಎರಡನೆಯ ಅಲೆ ಬರುವುದು ಬೇಡ ಎಂದು ಪ್ರಾರ್ಥಿಸುತ್ತಿದ್ದಾರೆ, ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜನತೆ ಆಗ್ರಹಿಸಿದ್ದಾರೆ.
Published by:Latha CG
First published: