• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಳ್ಳಾರಿಯಲ್ಲಿ ಕಾಟಾಚಾರಕ್ಕೆ ಗಡಿ ಚೆಕ್​ಪೋಸ್ಟ್ ನಿರ್ಮಾಣ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಬಳ್ಳಾರಿಯಲ್ಲಿ ಕಾಟಾಚಾರಕ್ಕೆ ಗಡಿ ಚೆಕ್​ಪೋಸ್ಟ್ ನಿರ್ಮಾಣ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಚೆಕ್​ಪೋಸ್ಟ್

ಚೆಕ್​ಪೋಸ್ಟ್

ಬಳ್ಳಾರಿ ಜಿಲ್ಲೆಯಲ್ಲಿ ದಿನ ಒಂದಕ್ಕೆ 900 ಕ್ಕೂ ಅಧಿಕ ಕೊರೋನಾ ಸೋಂಕಿತರು  ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕೂಡ ಕೊರೋನಾ ವೈರಸ್ ಅನ್ನು ಕಟ್ಟಿ ಹಾಕಲು ಹಲವು ತಂತ್ರಗಳನ್ನು ರೂಪಿಸಿದೆ. ಆದರೆ ಯಾವ ತಂತ್ರಗಳು ಸರಿಯಾದ ರೀತಿ ಕೆಲಸ ಮಾಡುತ್ತಿಲ್ಲ.  ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ ಎಂದು ಸಾರ್ವಜನಿಕರು  ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಮುಂದೆ ಓದಿ ...
  • Share this:

    ಬಳ್ಳಾರಿ(ಏ.25): ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಜನ್ರಲ್ಲಿ ಆತಂಕ ಸೃಷ್ಟಿ ಮಾಡಿದೆ. ಮಹಾಮಾರಿ ಕೊರೋನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಕೂಡ ಟಫ್​ ರೂಲ್ಸ್ ಜಾರಿ ಮಾಡಿದೆ. ವಿಪರ್ಯಾಸವೆಂದರೆ ಜಿಲ್ಲಾಡಳಿತ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿದೆ . ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪಕ್ಕದ ರಾಜ್ಯದಿಂದ ಜನರು ಜಿಲ್ಲೆಗೆ ಬರುತ್ತಾರೆ. ಕೋವಿಡ್ ಚೆಕ್‌ ಅಪ್, ಥರ್ಮಲ್ ಸ್ಕ್ಯಾನಿಂಗ್ ಮಾಡಲು ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಆದ್ರೆ ಆ ಚೆಕ್ ಪೋಸ್ಟ್‌ಗಳು ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿವೆ.


    ಹೌದು, ಹೀಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ನಿರ್ಮಾಣ ಮಾಡಿರುವ ಚೆಕ್ ಪೋಸ್ಟ್, ಚೆಕ್ ಪೋಸ್ಟ್ ನಲ್ಲಿ ಕ್ಯಾಮರಾ ನೋಡುತ್ತಲೇ ಡ್ಯೂಟಿ ಡ್ರೆಸ್ ಹಾಕಿಕೊಳ್ಳುತ್ತಿರುವ ಪೊಲೀಸ್ ಸಿಬ್ಬಂದಿ, ಅತ್ತಿಂದಿತ್ತ ವಾಹನಗಳ ಸಂಚಾರವಾದ್ರು ಡೋಂಟ್ ಕೇರ್ ಎನ್ನದೆ ನಿಂತಿರುವ ಆರೋಗ್ಯ ಇಲಾಖೆ ಸಿಬ್ಬಂದಿ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಗಣಿನಾಡು ಬಳ್ಳಾರಿ ಜಿಲ್ಲೆಯ ಮತ್ತು ಆಂಧ್ರಪ್ರದೇಶದ ಮಧ್ಯ ಭಾಗದಲ್ಲಿರುವ ಸಿಂಧ್ವಾವಾಳ್ ಗ್ರಾಮದಲ್ಲಿ ನಿರ್ಮಾಣವಾದ ಚೆಕ್ ಪೋಸ್ಟ್ ನಲ್ಲಿ.


    Explainer: ಭಾರತಕ್ಕೆ ಕೋವಿಡ್-19 ಲಸಿಕೆ ಪದಾರ್ಥಗಳು ಅಮೆರಿಕದಿಂದಲೇ ಏಕೆ ಬೇಕು..? ಯುಎಸ್‌ ನಿರ್ಬಂಧದಿಂದ ಲಸಿಕೆ ಉತ್ಪಾದನೆ ಮೇಲೆ ಪರಿಣಾಮ..!


    ಹೌದು ಬಳ್ಳಾರಿ ಜಿಲ್ಲೆಯಲ್ಲಿ ದಿನ ಒಂದಕ್ಕೆ 900 ಕ್ಕೂ ಅಧಿಕ ಕೊರೋನಾ ಸೋಂಕಿತರು  ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕೂಡ ಕೊರೋನಾ ವೈರಸ್ ಅನ್ನು ಕಟ್ಟಿ ಹಾಕಲು ಹಲವು ತಂತ್ರಗಳನ್ನು ರೂಪಿಸಿದೆ. ಆದರೆ ಯಾವ ತಂತ್ರಗಳು ಸರಿಯಾದ ರೀತಿ ಕೆಲಸ ಮಾಡುತ್ತಿಲ್ಲ.  ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ನೇರ ಕಾರಣ ಎಂದು ಸಾರ್ವಜನಿಕರು  ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.


    ಇನ್ನು ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಐದು ಕಡೆ ಚಕ್ಕ ಪೋಸ್ಟ್​​ಗಳನ್ನು ನಿರ್ಮಾಣ ಮಾಡಿದ್ದು, ಹೊರರಾಜ್ಯಗಳಿಂದ ಬರುವಂತಹ ವಾಹನಗಳನ್ನು ಮತ್ತು ಜನರನ್ನು ತಪಾಸಣೆ ಮಾಡುವ ಮೂಲಕ ಜಿಲ್ಲೆಗೆ ಎಂಟ್ರಿ ಮಾಡಲಾಗುತ್ತೆ. ಬರುವಂತಹ ಜನರಿಗೆ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಚೆಕಪ್ ಮಾಡುವುದು ಕಡ್ಡಾಯವಾಗಿದೆ. ಇನ್ನೂ ಒಂದು ವೇಳೆ ಕೊರೋನಾ ಲಕ್ಷಣಗಳು ಕಂಡು ಬಂದಂತಹ ವ್ಯಕ್ತಿಗಳಿಗೆ ಕೋವಿಡ್ ಚಕ್ ಸಹ ಮಾಡಬೇಕಾಗುತ್ತೆ. ಆದರೆ ಈ ನಿಯಮಗಳನ್ನ ಅಧಿಕಾರಿಗಳು ಪಾಲನೆ ಮಾಡದೇ ಬೇಕಾ ಬಿಟ್ಟಿಯಾಗಿ ವಾಹನಗಳನ್ನ ಹಾಗೆ ಬಿಡುತ್ತಿದ್ದಾರೆ.. ಇದರಿಂದ ಬಳ್ಳಾರಿ ನಗರದಲ್ಲಿ ಮತ್ತಷ್ಟು ಕೊರೊನ ಉಲ್ಬಣ ಆಗುವುದರಲ್ಲಿ ಅನುಮಾನವಿಲ್ಲ.


    ಒಟ್ಟಾರೆಯಾಗಿ ಬಳ್ಳಾರಿ ಜಿಲ್ಲೆಯಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊರೋನಾ ಟಫ್​​ ರೂಲ್ಸ್ ಗಳನ್ನ ಕಟ್ಟುನಿಟ್ಟಾಗಿ ಜಾರಿ ಮಾಡುವ ಮೂಲಕ ವೈರಸ್‌ಗೆ ಬ್ರೇಕ್ ಹಾಕಬೇಕಿದೆ. ಇನ್ನು ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಕಡೆಗೆ ಜಿಲ್ಲಾಡಳಿತ ಗಮನ ಹರಿಸಿ ಕ್ರಮ ತೆಗೆದುಕೊಂಡು ಮತ್ತೊಮ್ಮೆ ಹೀಗಾಗದಂತೆ ನೋಡಿಕೊಳ್ಳಬೇಕಿದೆ.

    • ವರದಿ: ವಿನಾಯಕ ಬಡಿಗೇರ

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು