ಸತತ ಐದನೇ ದಿನವೂ ಪೆಟ್ರೋಲ್​​-ಡೀಸೆಲ್​​​ ದರ ಏರಿಕೆ: ಒಂದು ಲೀಟರ್​​ಗೆ ಎಷ್ಟು ಗೊತ್ತೇ?

ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್‌ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದೆ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದರು. ಆದರೀಗ, ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆ ಏರಿಕೆಯಾಗಲಿದೆ ಎನ್ನುತ್ತಿವೆ ಮೂಲಗಳು.

news18india
Updated:November 14, 2019, 8:30 PM IST
ಸತತ ಐದನೇ ದಿನವೂ ಪೆಟ್ರೋಲ್​​-ಡೀಸೆಲ್​​​ ದರ ಏರಿಕೆ: ಒಂದು ಲೀಟರ್​​ಗೆ ಎಷ್ಟು ಗೊತ್ತೇ?
ಪೆಟ್ರೋಲ್​- ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ನ.14): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ದಾಖಲೆಯ ಮಟ್ಟ ತಲುಪಿದ ಬಳಿಕ ಇಳಿಕೆಯಾಗುತ್ತಲೇ ಇತ್ತು. ಆದರೀಗ ಕಳೆದ ಐದು ದಿನಗಳಿಂದ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಪೆಟ್ರೋಲ್​​-ಡೀಸೆಲ್​​​ ದರದಲ್ಲಿ ದಿಢೀರ್​​ ಏರಿಕೆಯಾಗಿದೆ. ಒಂದು ಲೀಟರ್​​ ಪೆಟ್ರೋಲ್ ಮತ್ತು ಡೀಸೆಲ್​​ ದರ 10 ರಿಂದ 50 ಪೈಸೆ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್​​ ಪೆಟ್ರೋಲ್​​ ಬೆಲೆ 73.30 ರೂ., ಡೀಸೆಲ್ ಬೆಲೆ ಲೀಟರ್​​ಗೆ 65.79 ರೂ. ಆಗಿದೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್​​ ಲೀಟರ್​ ದರ 75.81 ರೂ., ಡೀಸೆಲ್​​ಗೆ 68.03 ರೂ. ಇದೆ. ಹಾಗೆಯೇ ಕೊಲ್ಕತ್ತಾದಲ್ಲಿ ಪೆಟ್ರೋಲ್​​-ಡೀಸೆಲ್​​ ಬೆಲೆ ಕ್ರಮವಾಗಿ 76.00 ರೂ. ಮತ್ತು 68.20 ರೂ. ಆಗಿದೆ. ಅಲ್ಲದೇ ಮುಂಬೈನಲ್ಲಿ ಲೀಟರ್​​ ಪೆಟ್ರೋಲ್​​ಗೆ 78.97 ರೂ. ಮತ್ತು ಡೀಸೆಲ್​​ಗೆ 69.01 ರೂ. ಇದೆ. ಚೆನ್ನೈ ಪೆಟ್ರೋಲ್​ಗೆ 76.18 ರೂ., ಡೀಸೆಲ್​ ದರವೂ 69.54 ರೂ. ಆಗಿದೆ. ಅಂತೆಯೇ ಹೈದರಾಬಾದ್​ನಲ್ಲೂ ಪೆಟ್ರೋಲ್​​​ಗೆ ಲೀಟರ್​​ ಬೆಲೆ 78.01 ರೂ., ಡೀಸೆಲ್​​ ಬೆಲೆ 71.80 ರೂ. ಇದೆ.

ಈ ಹಿಂದೆ ಸೆಪ್ಟೆಂಬರ್​​ 14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಈ ಡ್ರೋನ್​​ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿಢೀರ್​​ ಏರಿಕೆಯಾಗಿತ್ತು. ತೈಲ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡ ಕಾರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾ ಬೀರಿತ್ತು. ಇದರಿಂದಲೇ ಬೆಲೆ ಏರಿಕೆ ಕಂಡಿತ್ತು.

ಇದನ್ನೂ ಓದಿ: ಬೆಂಗಳೂರು ಏರ್​​ಪೋರ್ಟ್​:​ ಹುಲ್ಲುಗಾವಲು ಪ್ರದೇಶದಿಂದ ವಿಮಾನ ಟೇಕ್ ಮಾಡಿದ ಪೈಲಟ್​​ ಅಮಾನತು

ಈಗ ಎಲ್ಲಾ ಸಮಸ್ಯೆಯೂ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್‌ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದೆ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದರು. ಆದರೀಗ, ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆ ಏರಿಕೆಯಾಗಲಿದೆ ಎನ್ನುತ್ತಿವೆ ಮೂಲಗಳು.
------------
First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ