ಪೆಟ್ರೋಲ್​​-ಡೀಸೆಲ್​​​ ದರ ಮತ್ತೆ ಏರಿಕೆ: ಒಂದು ಲೀಟರ್​​ಗೆ ಎಷ್ಟು ಗೊತ್ತೇ?

ಈ ಹಿಂದೆ ಸೆಪ್ಟೆಂಬರ್​​ 14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಈ ಡ್ರೋನ್​​ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿಢೀರ್​​ ಏರಿಕೆಯಾಗಿತ್ತು.

news18-kannada
Updated:November 8, 2019, 4:24 PM IST
ಪೆಟ್ರೋಲ್​​-ಡೀಸೆಲ್​​​ ದರ ಮತ್ತೆ ಏರಿಕೆ: ಒಂದು ಲೀಟರ್​​ಗೆ ಎಷ್ಟು ಗೊತ್ತೇ?
ಪೆಟ್ರೋಲ್​​ ಬಂಕ್​​​
news18-kannada
Updated: November 8, 2019, 4:24 PM IST
ಬೆಂಗಳೂರು(ನ.08): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ದಾಖಲೆಯ ಮಟ್ಟ ತಲುಪಿದ ಬಳಿಕ ಇಳಿಕೆಯಾಗುತ್ತಲೇ ಇತ್ತು. ಇದೀಗ ಸತತ ಐದು ವಾರಗಳ ಬಳಿಕ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಪೆಟ್ರೋಲ್​​-ಡೀಸೆಲ್​​​ ದರ ಏರಿಕೆಯಾಗಿದೆ. ಒಂದು ಲೀಟರ್​​ ಪೆಟ್ರೋಲ್​​ಗೆ 9 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 10 ಪೈಸೆ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್​​ ಪೆಟ್ರೋಲ್​​ ಬೆಲೆ 72.70 ರೂ., ಡೀಸೆಲ್ ಬೆಲೆ ಲೀಟರ್​​ಗೆ 65.84 ರೂ. ಆಗಿದೆ ಎನ್ನಲಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್​​ ಲೀಟರ್​ ದರ 75.18 ರೂ., ಡೀಸೆಲ್​​ಗೆ 68.08 ರೂ. ಇದೆ. ಹಾಗೆಯೇ ಕೊಲ್ಕತ್ತಾದಲ್ಲಿ ಪೆಟ್ರೋಲ್​​-ಡೀಸೆಲ್​​ ಬೆಲೆ ಕ್ರಮವಾಗಿ 75.41 ರೂ. ಮತ್ತು 68.25 ರೂ. ಆಗಿದೆ. ಅಲ್ಲದೇ ಮುಂಬೈನಲ್ಲಿ ಲೀಟರ್​​ ಪೆಟ್ರೋಲ್​​ಗೆ 78.38 ರೂ. ಮತ್ತು ಡೀಸೆಲ್​​ಗೆ 69.06 ರೂ. ಇದೆ. ಚೆನ್ನೈ ಪೆಟ್ರೋಲ್​ಗೆ 75.55 ರೂ., ಡೀಸೆಲ್​ ದರವೂ 69.59 ರೂ. ಆಗಿದೆ. ಅಂತೆಯೇ ಹೈದರಾಬಾದ್​ನಲ್ಲೂ ಪೆಟ್ರೋಲ್​​​ಗೆ ಲೀಟರ್​​ ಬೆಲೆ 77.37 ರೂ., ಡೀಸೆಲ್​​ ಬೆಲೆ 71.85 ರೂ. ಇದೆ.

ಈ ಹಿಂದೆ ಸೆಪ್ಟೆಂಬರ್​​ 14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಈ ಡ್ರೋನ್​​ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿಢೀರ್​​ ಏರಿಕೆಯಾಗಿತ್ತು. ತೈಲ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡ ಕಾರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾ ಬೀರಿತ್ತು. ಇದರಿಂದಲೇ ಬೆಲೆ ಏರಿಕೆ ಕಂಡಿತ್ತು.

ಇದನ್ನೂ ಓದಿ: ಕರವೇ ಕಾರ್ಯಕರ್ತರ ಬಂಧನ: ಮುಷ್ಕರ ಕೈಬಿಟ್ಟ ವೈದ್ಯರು: ಮತ್ತೆ ಒಪಿಡಿ ಸೇವೆ ಆರಂಭ

ಈಗ ಎಲ್ಲಾ ಸಮಸ್ಯೆಯೂ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್‌ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದೆ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದರು. ಆದರೀಗ, ಮತ್ತೆ ಪೆಟ್ರೋಲ್​​-ಡೀಸೆಲ್​​ ಬೆಲೆ ಏರಿಕೆಯಾಗಲಿದೆ ಎನ್ನುತ್ತಿವೆ ಮೂಲಗಳು.
----------
First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...