HOME » NEWS » State » CHECK DAM WALL COLLAPSE AT CHITRADURGA FROM RAINFALL DUE TO DUPLICATE CONSTRUCTION LG

ಒಂದೇ ಮಳೆಗೆ ನೀರಲ್ಲಿ ಕೊಚ್ಚಿ ಹೋಯ್ತು 6.64 ಕೋಟಿ ವೆಚ್ಚದ ಚೆಕ್ ಡ್ಯಾಂ ಗೋಡೆ

ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಬೃಹತ್ ಚೆಕ್ ಡ್ಯಾಂ ಹೊಡೆದು ಹೋಗಿದ್ದು, ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಹಾಗಾಗಿ ಕಳಪೆ ಕಾಮಗಾರಿ ಮಾಡಿರುವ ಜಿಒ ರಾಜು, ಕರ್ತವ್ಯ ಲೋಪ  ತೋರಿರುವ ಇಂಜಿನಿಯರ್ಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡಿದ್ದಾರೆ.

news18-kannada
Updated:September 12, 2020, 8:26 AM IST
ಒಂದೇ ಮಳೆಗೆ ನೀರಲ್ಲಿ ಕೊಚ್ಚಿ ಹೋಯ್ತು 6.64 ಕೋಟಿ ವೆಚ್ಚದ ಚೆಕ್ ಡ್ಯಾಂ ಗೋಡೆ
ಚೆಕ್​ ಡ್ಯಾಂ ಗೋಡೆ ಕುಸಿದಿರುವ ದೃಶ್ಯ
  • Share this:
ಚಿತ್ರದುರ್ಗ(ಸೆ.12): ಸರ್ಕಾರ ಬರದ ನಾಡಲ್ಲಿ ಅಂತರ್ಜಲ ಹೆಚ್ಚಿಸಲು, ನೀರಿನ ಬವಣೆ ನೀಗಿಸಲು ಹತ್ತಾರು ಯೋಜನೆಗಳನ್ನ ಜಾರಿ ಮಾಡುತ್ತಲೇ ಇದೆ. ಚೆಕ್ ಡ್ಯಾಂ ಗಳ ಮೂಲಕ ನೀರು ನಿಲ್ಲಿಸೋಕೆ ಕೋಂಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಆದ್ರೆ ಗುತ್ತಿಗೆದಾರರು ಹಾಗೂ ಇಂಜಿನಿಯರ್​ಗಳ ಬೇಜವಾಬ್ದಾರಿತನಕ್ಕೆ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಪೋಲಾಗ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ  ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಆರುವರೆ ಕೋಟಿ ವೆಚ್ಚದ ಚೆಕ್ ಡ್ಯಾಂ ಕೊಚ್ಚಿ ಹೋಗಿದೆ. ಕಾಮಗಾರಿ ಪ್ರಗತಿಯಲ್ಲಿ ಇರುವಾಗಲೇ ಚೆಕ್ ಡ್ಯಾಂ ನ ಗೋಡೆ ನೀರಲ್ಲಿ ಕೊಚ್ಚಿ ಹೋಗಿದ್ದು, ಕಳಪೆ ಗುಣಮಟ್ಟವನ್ನ ಬಯಲು ಮಾಡಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ, ತೊರೆ ಓಬಯ್ಯನ ಹಳ್ಳಿ ಗ್ರಾಮಗಳ ಮಧ್ಯದ ಬೃಹತ್ ಚೆಕ್ ಡ್ಯಾಂ ಗೋಡೆ ನೀರಲ್ಲಿ ಕೊಚ್ಚಿ ಹೋಗಿದೆ. ಈ ಬೃಹತ್ ಚೆಕ್ ಡ್ಯಾಂ ನಿರ್ಮಾಣಕ್ಕಾಗಿ ಕುಮಾರಸ್ವಾಮಿ ನೇತೃತ್ವದ  ಹಿಂದಿನ ಮೈತ್ರಿ ಸರ್ಕಾರದ, ಬರೋಬ್ಬರಿ ಆರುವರೆ ಕೋಟಿ ವೆಚ್ಚದಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ ಬರದ ಹಣೆಪಟ್ಟಿ ಹೊತ್ತಿರೋ ಚಿತ್ರದುರ್ಗ ಜಿಲ್ಲೆಯಲ್ಲಿ ಅಂತರ್ಜಲ ವೃದ್ದಿಗಾಗಿ ಹಾಗೂ ಜಲ ಮರು ಪೂರಣಕ್ಕಾಗಿ ಸರ್ಕಾರ ವಿಶೇಷ ಅನುದಾನ ಬಿಡುಗಡೆಗೊಳಿಸಿತ್ತು.

ಈ ಕಾಮಗಾರಿಯನ್ನ ಸಣ್ಣ ನೀರಾವರಿ ಇಲಾಖೆಗೆ ಹಣ ಬಿಡುಗಡೆ ಮಾಡಿ ಕಾಮಗಾರಿ ನಿರ್ಮಿಸೋಕೆ ಅನುಮೋದನೆ ನೀಡಿದೆ. ಆದರೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಗುತ್ತಿಗೆದಾರ ಜಿಓ ರಾಜು ಕಳಪೆ ಕಾಮಾಗಾರಿ ಮಾಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ. ಅಲ್ಲದೇ 6 ಕೋಟಿ 64 ಲಕ್ಷದ ವೆಚ್ಚದ ಬೃಹತ್ ಚೆಕ್ ಡ್ಯಾಂ, ಮೊನ್ನೆ ರಾತ್ರಿ ಸುರಿದ ಒಂದೇ ಮಳೆಗೆ ಕೊಚ್ಚಿ ಹೋಗಿದೆ. ಇದ್ರಿಂದ ಸಾವಿರಾರು  ರೈತರ ಕನಸಿಗೆ ಬರೆ ಎಳೆದಂತಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರ ಜಿಒ ರಾಜು ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದ್ದಾರೆ.

ಇನ್ನೂ ಈ ಬೃಹತ್ ಪ್ರಮಾಣದ ಚೆಕ್ ಡ್ಯಾಂ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಜನರು ಸಣ್ಣ ಕಲ್ಲಿನಿಂದ ಕೆರೆದರೂ ಸಿಮೆಂಟ್ ಕಿತ್ತು ಹೋಗುತ್ತಿದೆ. ಅಲ್ಲದೇ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಬೃಹತ್ ಚೆಕ್ ಡ್ಯಾಂ ಹೊಡೆದು ಹೋಗಿದ್ದು, ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಹಾಗಾಗಿ ಕಳಪೆ ಕಾಮಗಾರಿ ಮಾಡಿರುವ ಜಿಒ ರಾಜು, ಕರ್ತವ್ಯ ಲೋಪ  ತೋರಿರುವ ಇಂಜಿನಿಯರ್ಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡಿದ್ದಾರೆ. ಇನ್ನೂ ಕಾಮಗಾರಿ ಮುಗಿಯುವ ಮುನ್ನವೇ ಚೆಕ್ ಡ್ಯಾಂ ಕಾಮಗಾರಿ ತುಂಬ ಬಿರುಕು ಕಾಣಿಸಿದೆ. ಇದನ್ನ ಗಮನಿಸಿರುವ  ಗುತ್ತಿಗೆದಾರ ಜಿಒ ರಾಜು, ಬೃಹತ್ ಚೆಕ್ ಡ್ಯಾಂ ಸುತ್ತಲೂ ಸಿಮೆಂಟ್ ತೇಪೆ ಹಾಕಿ ಮುಚ್ಚಲು ಮುಂದಾಗಿರುವುದು ಆ ಭಾಗದ ರೈತರನ್ನ ಕೆರಳಿಸಿದೆ.

ಕೊರೋನಾ ಭೀತಿ; ಈ ವರ್ಷ ಉತ್ತರ ಕರ್ನಾಟಕದ ಜನಪ್ರಿಯ ಕೃಷಿ‌ ಮೇಳ ರದ್ದು

ಅಲ್ಲದೇ ನೂರಾರು ಬೋರ್​ವೆಲ್​ಗಳಿಗೆ ಆಸರೆಯಾಗಬೇಕಿದ್ದ ಚೆಕ್ ಡ್ಯಾಂ  ಮಳೆ ನೀರಿಗೆ ಕೊಚ್ಚಿ ಹೋಗಿದ್ದು, ರೈತರ ಆಕ್ರೋಶ ಕಾರಣವಾಗಿದೆ. ಗುತ್ತಿಗೆದಾರ ರಾಜು ಹಾಗೂ ಇಂಜಿನಿಯರ್ ಭೀಮರಾಜ್ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ಇನ್ನೂ ಈ ಬಗ್ಗೆ ಕಾರ್ಯಪಾಲಕ ಇಂಜಿನಿಯರ್ ಕೆ.ವಿ ರಾಧಾಕೃಷ್ಣ ಅವರನ್ನು ಕೇಳಿದ್ರೆ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೋವಿಡ್ ನಿಂದಾಗಿ ಕೆಲಸ ಸ್ಥಗಿತಗೊಂಡಿತ್ತು. ಗುತ್ತಿಗೆದಾರ ಜಿಒ ರಾಜು ಎಸ್ಟೀಮೆಂಟ್ ಪ್ರಕಾರ 270 ಮೀಟರ್ 270 ಮೀಟರ್ ಉದ್ದ ಹಾಗೂ 3 ಮೀಟರ್ ಎತ್ತರ ಕಾಮಗಾರಿ ಮಾಡಿದ್ದಾರೆ. ಆದರೆ ಚೆಕ್ ಡ್ಯಾಂ ಕುಸಿದಿದ್ದು, ಗುತ್ತಿಗೆದಾರ ರಾಜು ಸರಿ ಪರಿಸಿಕೊಡ್ತಾರೆ. ಅಲ್ಲದೇ ಆ ಕಾಮಗಾರಿಗೆ ಇನ್ನೂ ಬಿಲ್ ಪಾವತಿಸಿಲ್ಲ,  ಯಾವುದೇ ಕಳಪೆ ಕಾಮಗಾರಿ ನಡೆದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.



ಒಟ್ಟಾರೆ ಸರ್ಕಾರ ಬರದ ನಾಡಿನ ಅನ್ನದಾತರ ಜಮೀನುಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕೊಟ್ಟಿದ್ದ ಹಣ ಕಳಪೆ ಕಾಮಗಾರಿಯಿಂದ ನೀರಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಅಧಿಕಾರಿಗಳು ಮಾತ್ರ ಗುತ್ತಿಗೆದಾರರ ಜೊತೆ ಸೇರಿ ಕೋಟ್ಯಂತರ ಹಣ ಹೊಡೆಯಲು ಮುಂದಾಗಿದ್ದಾರಾ ಅನ್ನೋ ಅನುಮಾನಗಳು ಮೂಡಿವೆ. ಇನ್ನಾದ್ರೂ ಇಂಥ ಬೇಜವಾಬ್ದಾರಿತನ ಪ್ರದರ್ಶಿಸುವ ಅಧಿಕಾರಿಗಳು ಮತ್ತು ಕಂಟ್ರಾಕ್ಟರ್ ಗಳ ವಿರುದ್ದ ಸಂಬಂಧಪಟ್ಟ ಇಲಾಖೆ, ಮತ್ತು ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕಿದೆ.
Published by: Latha CG
First published: September 12, 2020, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories