ಬಾಲಿವುಡ್​ ನಟಿ ವಿರುದ್ಧ ಆನ್​ಲೈನ್​ ವಂಚನೆ ಆರೋಪ!

news18
Updated:July 21, 2018, 2:55 PM IST
ಬಾಲಿವುಡ್​ ನಟಿ ವಿರುದ್ಧ ಆನ್​ಲೈನ್​ ವಂಚನೆ ಆರೋಪ!
news18
Updated: July 21, 2018, 2:55 PM IST
- ಕಿರಣ ಕೆ.ಎನ್,  ನ್ಯೂಸ್​ 18 ಕನ್ನಡ 

ಬೆಂಗಳೂರು (ಜುಲೈ 21) : ಬಾಲಿವುಡ್ ನಟಿ ವಿರುದ್ಧ ಆನ್‌ಲೈನ್‌ನಲ್ಲಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಆರೋಪ ಎದುರಿಸುತ್ತಿರುವುದು ಬಾಲಿವುಡ್ ನಟಿ ಬಂದಗಿ ಕಲ್ರಾ.

Differentcollection.nexafashion.com ಎಂಬ ವೆಬ್ ಸೈಟ್ ಮೂಲಕ ಐಫೋನ್​ ಎಕ್ಸ್​ ಹಾಗೂ ಮತ್ತೊಂದು ಮೊಬೈಲ್​ ಅನ್ನು ಮಾರಟಕಿಟ್ಟಿದ್ದರು ಬಂದಗಿ. ಅದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲೂ ಶೇರ್​ ಮಾಡಿದ್ದರು. ಈ ಜಾಹೀರಾತು ನೋಡಿ ನಟಿ ಜೊತೆ ಬೆಂಗಳೂರಿನ ಯುವಕ ಯುವರಾಜ್ ಯಾದವ್ ಚಾಟ್ ಮಾಡಿದ್ದರು.

ಒಟ್ಟು ಎರಡು ಮೊಬೈಲ್‌ಗೆ 61ಸಾವಿರ ಬೆಲೆ ಹೇಳಿದ್ದ ನಟಿ. ಪೇಟಿಯಂ ಮೂಲಕ 11,100 ಅಡ್ವಾನ್ಸ್ ನೀಡಿದ್ದರು ಯುವರಾಜ್ ಸಿಂಗ್​ ಯಾದವ್. ಬಳಿಕ ನಟಿ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಐಫೋನ್ ಪಾರ್ಸಲ್ ಕಳುಹಿಸಿದ್ದರು. ಆದರೆ ಯಾದವ್ ಬಾಕಿ 48 ಸಾವಿರ ಕೊಟ್ಟು ಅದನ್ನು ಕೊಂಡಿದ್ದರು. ಇನ್ನು ಕೊರಿಯರ್ ಶಾಪ್ ಮುಂದೆಯಯೇ ಬಾಕ್ಸ್ ತೆರೆದು ನೋಡಿದ್ದ ಯುವರಾಜ್ ಅವರಿಗೆ ಸಿಕ್ಕಿದ್ದು ಮಾತ್ರ ನಕಲಿ ಮೊಬೈಲ್.

ಇದಾದ ನಂತರ ನಟಿ ಭಂದಗಿ ಕಲ್ರಾ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಸಂಬಂಧ ನಟಿ ಮತ್ತು ಬ್ಲೂ ಡಾರ್ಟ್ ವಿರುದ್ಧ ಮಾರತ್ ಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ ಯುವರಾಜ್​.

ವಂಚನೆ ಆರೋಪ ಎದುರಿಸುತ್ತಿರುವ ನಟಿ ಬಂದಗಿ,  ಬಿಗ್​ಬಾಸ್​ ಸಿಜನ್ 11ರಲ್ಲಿ ಸ್ಪರ್ಧಿಯಾಗಿದ್ದರು. ಸದ್ಯ ಬಾಲಿವುಡ್​ನ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
Loading...

 

 

 

 
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...