ಇಂದಿನಿಂದ ಚಾರ್ಮಾಡಿ ಘಾಟ್ ಸಂಚಾರ ಮುಕ್ತ; ವಾಹನ ಸವಾರರೇ ಮೈ ಮರೆಯಬೇಡಿ

ಕಳೆದ ವರ್ಷ ಭಾರೀ ಭೂ ಕುಸಿತಗೊಂಡು ತಿಂಗಳಾನುಗಟ್ಟಲೆ ಬಂದ್ ಆಗಿದ್ದ ಚಾರ್ಮಾಡಿ ಘಾಟ್ ಈ ಬಾರಿಯೂ ಅಲ್ಪ ಪ್ರಮಾಣದ ಕುಸಿತ ಕಂಡಿದೆ. ಹಾಗಾಗಿ ಕಳೆದ ಮೂರು ದಿನಗಳಿಂದ ರಸ್ತೆಗೆ ಬಿದ್ದಿದ್ದ ಮಣ್ಣಿನ ತೆರವು ಕಾರ್ಯಾಚರಣೆಯೂ ಮುಕ್ತಾಯಗೊಂಡಿದೆ. ಇಂದಿನಿಂದ ಘಾಟ್ ರಸ್ತೆ ಪ್ರಯಾಣಿಕರ ಪ್ರಯಾಣಕ್ಕೆ ಮುಕ್ತವಾಗಿದೆ.

news18-kannada
Updated:August 12, 2020, 1:08 PM IST
ಇಂದಿನಿಂದ ಚಾರ್ಮಾಡಿ ಘಾಟ್ ಸಂಚಾರ ಮುಕ್ತ; ವಾಹನ ಸವಾರರೇ ಮೈ ಮರೆಯಬೇಡಿ
ಚಾರ್ಮಾಡಿ ಘಾಟ್
  • Share this:
ಚಾರ್ಮಾಡಿ ಘಾಟ್ ನಿರಂತರ ಭೂಕುಸಿತದಿಂದ ತತ್ತರಿಸಿದೆ. ಘಾಟ್ ಪ್ರಯಾಣ ಅಪಾಯವನ್ನು ಸೂಚಿಸುತ್ತಿದೆ. ಆದರೆ ಚಾರ್ಮಾಡಿ ಮಾತ್ರ ಎಷ್ಟೇ ಜರ್ಜರಿತವಾದ್ರೂ ತನ್ನ ಸೌಂದರ್ಯವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ. ಚಾರ್ಮಾಡಿ ತನ್ನ ಅದಮ್ಯ ಸೌಂದರ್ಯ ವನ್ನು ಹೊರಸೂಸುತ್ತಿದೆ.

ಹೌದು, ಚಾರ್ಮಾಡಿ ಯಲ್ಲಿ ಪ್ರಕೃತಿಮಾತೆ ಹಸಿರ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದಾಳೆ. ಮಂಜಿನ ಹನಿಯ ಸಿಂಚನದೊಂದಿದೆ ಚಾರ್ಮಾಡಿಯ ಘಾಟ್ ಸೌಂದರ್ಯ ಪದಗಳಿಗೆ ನಿಲುಕದ್ದಾಗಿದೆ‌‌. ಹಸಿರ ಲೋಕದ ನಡುವೆ ಹಾದು ಹೋಗುವ ಘಾಟ್ ರಸ್ತೆ ಯ ಪ್ರಯಾಣ ಹೊಸ ಜಗತ್ತಿಗೇ ಆಹ್ವಾನ ನೀಡಿದೆ‌‌. ದಟ್ಟವಾದ ಮಂಜು ದೃಶ್ಯಗಳನೆಲ್ಲಾ ಗೌಣವಾಗಿಟ್ಟರೆ ಮಂಜು ಸರಿದ ಮೇಲೆ ಎದುರು ಕಾಣುವ ದೃಶ್ಯ ವೈಭವ ಮಾತ್ರ ವರ್ಣಿಸಲು ಅಸಾಧ್ಯ.

ಕಳೆದ ವರ್ಷ ಭಾರೀ ಭೂ ಕುಸಿತಗೊಂಡು ತಿಂಗಳಾನುಗಟ್ಟಲೆ ಬಂದ್ ಆಗಿದ್ದ ಚಾರ್ಮಾಡಿ ಘಾಟ್ ಈ ಬಾರಿಯೂ ಅಲ್ಪ ಪ್ರಮಾಣದ ಕುಸಿತ ಕಂಡಿದೆ. ಹಾಗಾಗಿ ಕಳೆದ ಮೂರು ದಿನಗಳಿಂದ ರಸ್ತೆಗೆ ಬಿದ್ದಿದ್ದ ಮಣ್ಣಿನ ತೆರವು ಕಾರ್ಯಾಚರಣೆಯೂ ಮುಕ್ತಾಯಗೊಂಡಿದೆ. ಇಂದಿನಿಂದ ಘಾಟ್ ರಸ್ತೆ ಪ್ರಯಾಣಿಕರ ಪ್ರಯಾಣಕ್ಕೆ ಮುಕ್ತವಾಗಿದ್ದು, ವಾಹನದಲ್ಲೇ ಪೃಕೃತಿಯನ್ನು ಆಸ್ವಾದಿಸುತ್ತಾ, ಘಾಟ್ ರಸ್ತೆಯಲ್ಲಿ ಚಲಿಸಬೇಕೆಂಬ ನಿಯಮ ತರಲಾಗಿದೆ‌‌. ಘಾಟ್ ರಸ್ತೆಯಲ್ಲಿ ವಾಹನ ನಿಲ್ಲಿಸಲು ಅವಕಾಶ ನೀಡಿಲ್ಲ. ಫಾಲ್ಸ್ ಗಳ ಬಳಿ ಫೋಟೋಗ್ರಫಿ, ವಿಡಿಯೋಗ್ರಾಫಿಗೂ ಅವಕಾಶ ನಿರಾಕರಿಸಲಾಗಿದೆ.

ಕೊರೋನಾ ಮತ್ತು ನೆರೆಗೆ ನಲುಗಿದ ಕೊಡಗು ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಹಾಯಹಸ್ತ

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಸಂಪರ್ಕದ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ ಅದ್ಭುತ ದೃಶ್ಯ ಕಾವ್ಯವನ್ನೇ ಮೈದವಳಿಕೊಂಡಿದೆ‌‌. ಅಲ್ಲಲ್ಲಿ ಸಿಗುವ ಘಾಲ್ಸ್ ಗಳು ತನ್ನ ಅದಮ್ಯ ಸೌಂದರ್ಯದಿಂದಲೇ ನಿಸರ್ಗದ ಅದ್ಭುತ ಲೋಕಕ್ಕೆ ಸ್ವಾಗತಿಸುತ್ತದೆ‌‌‌. ಗಿರಿಶಿಖರಗಳ ನಡುವೆ ಹಾದು ಹೋಗುವ ಘಾಟ್ ರಸ್ತೆಯ ಪ್ರಯಾಣ ಎಂತವರ ಮನಸ್ಸಿಗೆ ಅಹ್ಲಾದಕರವಾದ ಮುದ ನೀಡುತ್ತೆ. ಆದ್ರೆ ಪ್ರವಾಸಿಗರು ಮಾತ್ರ ಚಾರ್ಮಾಡಿಯ ಸ್ವಚ್ಛಂಧ ಪರಿಸರವನ್ನು ಮದ್ಯಬಾಟಲಿ ,ಪ್ಲಾಸ್ಟಿಕ್ ಕವರ್ ಗಳನ್ನು ಹಾಕಿ ಕುರೂಪಗೊಳಿಸುತ್ತಿದ್ದಾರೆ. ‌ಹೀಗಾಗಿ ಘಾಟ್ ಮಲಿನವಾಗುತ್ತಿದೆ.

ಮಳೆಗಾಲದಲ್ಲಿ ಸುಂದರ ಲೋಕವನ್ನೇ ಸೃಷ್ಟಿಸುವ ಚಾರ್ಮಾಡಿ ಘಾಟ್ ಸದ್ಯ ಮತ್ತೆ ತೆರೆದುಕೊಂಡಿದೆ. ಪೃಕೃತಿ ಸೌಂದರ್ಯವನ್ನು ಆಸ್ವಾದಿಸಿ. ಹಾಳುಮಾಡದೆ, ಅಪಾಯಕಾರಿ ರಸ್ತೆಯ ಸುಂದರ ಪ್ರಯಾಣ ನಿಮ್ಮದಾಗಲಿ ಎಂಬುವುದೇ ಆಶಯ.
Published by: Latha CG
First published: August 12, 2020, 1:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading