HOME » NEWS » State » CHARMADI GHAT CHIKMAGALUR PEOPLE CALLED KOTTIGEHARA BANDH AND URGES TO REPAIR CHARMADI GHAT SCT

Charmadi Ghat: ಚಿಕ್ಕಮಗಳೂರಿನ ಚಾರ್ಮಾಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕೊಟ್ಟಿಗೆಹಾರ ಬಂದ್

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ವರ್ತಕರ ಸಂಘ ಹಾಗೂ ಗೆಳೆಯರ ಬಳಗ ಕೊಟ್ಟಿಗೆಹಾರವನ್ನ ಬಂದ್ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಪಾದಯಾತ್ರೆ ನಡೆಸಿ ಚಾರ್ಮಾಡಿ ಉಳಿವಿಗೆ ಆಗ್ರಹಿಸಿದ್ದಾರೆ. 

news18-kannada
Updated:October 5, 2020, 7:36 AM IST
Charmadi Ghat: ಚಿಕ್ಕಮಗಳೂರಿನ ಚಾರ್ಮಾಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕೊಟ್ಟಿಗೆಹಾರ ಬಂದ್
ಚಾರ್ಮಾಡಿ ಘಾಟ್
  • Share this:
ಚಿಕ್ಕಮಗಳೂರು (ಅ 5): ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದ ಮೂಲಕ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕೊಟ್ಟಿಗೆಹಾರವನ್ನು ಬಂದ್ ಮಾಡಲಾಗಿದೆ. ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ಚಾರ್ಮಾಡಿ ಘಾಟ್ ಎಷ್ಟು ಸುಂದರವಾಗಿದೆಯೋ ಅಲ್ಲಿನ ರಸ್ತೆ ಅಷ್ಟೇ ಅಪಾಯಕಾರಿಯಾಗಿದೆ. ಪ್ರತಿ ಮಳೆಗಾಲದಲ್ಲಿ ಇಲ್ಲಿನ ರಸ್ತೆ ಕುಸಿದು, ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ವರ್ತಕರ ಸಂಘ ಹಾಗೂ ಗೆಳೆಯರ ಬಳಗ ಕೊಟ್ಟಿಗೆಹಾರವನ್ನ ಬಂದ್ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಪಾದಯಾತ್ರೆ ನಡೆಸಿ ಚಾರ್ಮಾಡಿ ಉಳಿವಿಗೆ ಆಗ್ರಹಿಸಿದ್ದಾರೆ. 

ಮಲೆನಾಡಿನ ಜನ ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯಕ್ಕಾಗಿ ಚಾರ್ಮಾಡಿ ಘಾಟ್ ಅನ್ನು ಆಶ್ರಯಿಸಿಕೊಂಡಿದ್ದಾರೆ. ಆದರೆ,  ಪ್ರತಿ ವರ್ಷದ ಮಳೆಯಿಂದ ಚಾರ್ಮಾಡಿ ಘಾಟ್ ತನ್ನ ಸಾಮರ್ಥ್ಯವನ್ನ ಕಳೆದುಕೊಳ್ಳುತ್ತಿದೆ. ಇದಕ್ಕೆ ಮೂಲ ಕಾರಣ ಸರ್ಕಾರ ಚಾರ್ಮಾಡಿ ಘಾಟಿಯನ್ನು ಸಮರ್ಪಕ ರೀತಿಯಲ್ಲಿ ದುರಸ್ತಿ ಮಾಡದಿರೋದು ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪ್ರತಿ ಮಳೆಗಾಲದಲ್ಲೂ ಈ ಮಾರ್ಗವನ್ನ ಬಂದ್ ಮಾಡುತ್ತಾರೆ. ಇದರಿಂದ ಹಲವರಿಗೆ ನಾನಾ ರೀತಿಯ ತೊಂದರೆಯಾಗಲಿದೆ. ಸರ್ಕಾರ ಚಾರ್ಮಾಡಿಗೆ ಪರ್ಯಾಯ ರಸ್ತೆಯಾಗಿ ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು.

ಇದನ್ನೂ ಓದಿ: ದಸರಾ ಆನೆಗಳ ನಡಿಗೆ ಮತ್ತು ಫಿರಂಗಿ ಗಾಡಿಗಳ ಮೊದಲ ದಿನದ ತಾಲೀಮು
Youtube Video

ಆದರೆ, ನ್ಯಾಯಾಲಯ ಈ ರಸ್ತೆ ಕಾಮಾಗಾರಿಗೆ ತಡೆಯೊಡ್ಡಿರುವುದರಿಂದ ಕೂಡಲೇ ಚಾರ್ಮಾಡಿ ರಸ್ತೆಯನ್ನ ದುರಸ್ತಿಗೊಳಿಸಿ, ಉಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಿಲ್ಲುಪುರಂಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ಮಾರ್ಗ ನೂರಾರು ರೀತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.  ಆದ್ದರಿಂದ ಕೂಡಲೇ ಈ ಮಾರ್ಗವನ್ನ ಅಭಿವೃದ್ಧಿಪಡಿಸಿ, ಉಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Published by: Sushma Chakre
First published: October 5, 2020, 7:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories