ಚಪಾಕ್ ಸಿನಿಮಾ ಪಾಲಿಟಿಕ್ಸ್​; ಚಿತ್ರವನ್ನು ಬಹಿಷ್ಕರಿಸಿದ ಬಿಜೆಪಿಗರು, ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿ ಶುಭಕೋರಿದ ಯುವ ಕಾಂಗ್ರೆಸ್​

ನೋಡನೋಡುತ್ತಿದ್ದಂತೆ ಚಪಾಕ್ ಚಿತ್ರಕ್ಕೆ ರಾಜಕೀಯ ಬಣ್ಣ ಮೆತ್ತಿಕೊಂಡಿದೆ. ಆದರೆ, ಕಲಬುರ್ಗಿಯಲ್ಲಿ ಈ ಚಿತ್ರಕ್ಕೆ ಬೆಂಬಲ ಸೂಚಿಸಿರುವ ಯುವ ಕಾಂಗ್ರೆಸ್​ ಇಡೀ ಚಿತ್ರಮಂದಿರವನ್ನು ಸಂಪೂರ್ಣವಾಗಿ ಬುಕ್​ ಮಾಡುವ ಮೂಲಕ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಈ ಮೂಲಕ ಬಿಜೆಪಿಗರಿಗೆ ತಿರುಗೇಟು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

news18-kannada
Updated:January 11, 2020, 7:00 PM IST
ಚಪಾಕ್ ಸಿನಿಮಾ ಪಾಲಿಟಿಕ್ಸ್​; ಚಿತ್ರವನ್ನು ಬಹಿಷ್ಕರಿಸಿದ ಬಿಜೆಪಿಗರು, ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿ ಶುಭಕೋರಿದ ಯುವ ಕಾಂಗ್ರೆಸ್​
ಚಪಾಕ್ ಚಿತ್ರಕ್ಕೆ ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿರುವ ಕಾಂಗ್ರೆಸ್ ಮುಖಂಡರು.
  • Share this:
ಕಲಬುರ್ಗಿ (ಜನವರಿ 11); ನಟಿ ದೀಪಿಕಾ ಪಡುಕೋಣೆ ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪರಿಣಾಮ ಬಿಜೆಪಿ ನಾಯಕರು ದೀಪಿಕಾ ಅಭಿನಯದ ಚಪಾಕ್ ಸಿನಿಮಾವನ್ನು ಬಹಿಷ್ಕರಿಸಿದ್ದರು. ಆದರೆ, ಕಲಬುರ್ಗಿಯ ಯುವ ಕಾಂಗ್ರೆಸ್​ ಚಪಾಕ್ ಚಿತ್ರ ಪ್ರದರ್ಶನವಿದ್ದ ಮಿರಾಜ್ ಚಿತ್ರಮಂದಿರದ ಎಲ್ಲಾ ಟಿಕೆಟ್​ಗಳನ್ನೂ ಬುಕ್ ಮಾಡುವ ಮೂಲಕ ಬಿಜೆಪಿ ಪಕ್ಷಕ್ಕೆ ತಿರುಗೇಟು ನೀಡಿದೆ. 

ಕಳೆದ ಜನವರಿ.05 ರಂದು ಕೆಲವು ಕಿಡಿಗೇಡಿಗಳು ದೆಹಲಿಯ ಜವಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದ ಹಾಸ್ಟೆಲ್​ಗೆ ನುಗ್ಗಿದ್ದರು. ಅಲ್ಲದೆ, ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿ ಜೆಎನ್​ಯು ವಿದ್ಯಾರ್ಥಿ ಮುಖಂಡೆ ಐಶೆ ಘೋಷ್​ ಬಲವಾದ ಪೆಟ್ಟು ತಿಂದು ತರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದರು. ಈ ಘಟನೆಗೆ ಇಡೀ ರಾಷ್ಟ್ರದಾದ್ಯಂತ ಖಂಡನೆ ವ್ಯಕ್ತವಾಗಿತ್ತು.

ಘಟನೆ ಖಂಡಿಸಿ ಜೆಎನ್​ಯು ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಕಳೆದ ಒಂದು ವಾರದಿಂದ ಸತತ ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರ ಮೇಲಿನ ಈ ಹಲ್ಲೆಯನ್ನು ಖಂಡಿಸಿದ್ದ ನಟಿ ದೀಪಿಕಾ ಪ್ರತಿಭಟನಾ ಸ್ಥಳಕ್ಕೆ ತೆರಳುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ಘೋಷಿಸಿದ್ದರು. ಆದರೆ, ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತ್ತು. ನಟಿಯ ಕೆಲಸವನ್ನು ಬಿಜೆಪಿ ನಾಯಕರು ಕಟುವಾಗಿ ವಿರೋಧಿಸಿದ್ದರು.

"ದೀಪಿಕಾ ಪಡುಕೋಣೆ ತುಕಡೆ ತುಕಡೆ ಗ್ಯಾಂಗ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. ದೇಶದ್ರೋಹಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆ. ಅಲ್ಲದೆ, ತಮ್ಮ ಚಿತ್ರದ ಪ್ರಮೋಷನ್​ಗಾಗಿ ಅವರು ಹೀಗೆ ನಾಟಕ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದರು. ಇದರ ಬೆನ್ನಿಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ದೀಪಿಕಾ ಪಡುಕೋಣೆ ನಟನೆಯ "ಚಪಾಕ್"  ಚಿತ್ರಕ್ಕೆ ಬಹಿಷ್ಕಾರ ಹಾಕಿದ್ದರು. ಅಲ್ಲದೆ, ದೇಶಪ್ರೇಮಿಗಳು ಈ ಚಿತ್ರವನ್ನು ವೀಕ್ಷಿಸಬಾರದು ಎಂದು ತಾಕೀತು ಮಾಡಿದ್ದರು.

ನೋಡನೋಡುತ್ತಿದ್ದಂತೆ ಚಪಾಕ್ ಚಿತ್ರಕ್ಕೆ ರಾಜಕೀಯ ಬಣ್ಣ ಮೆತ್ತಿಕೊಂಡಿದೆ. ಆದರೆ, ಕಲಬುರ್ಗಿಯಲ್ಲಿ ಈ ಚಿತ್ರಕ್ಕೆ ಬೆಂಬಲ ಸೂಚಿಸಿರುವ ಯುವ ಕಾಂಗ್ರೆಸ್​ ಕಲಬುರ್ಗಿಯ ಮಿರಾಜ್ ಚಿತ್ರಮಂದಿರದ ಎಲ್ಲಾ ಟಿಕೆಟ್​ಗಳನ್ನೂ ಸಂಪೂರ್ಣವಾಗಿ ಬುಕ್​ ಮಾಡುವ ಮೂಲಕ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಈ ಮೂಲಕ ಬಿಜೆಪಿಗರಿಗೆ ತಿರುಗೇಟು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : ಮೈಸೂರು ವಿವಿಯಲ್ಲಿ free kashmir ಪೋಸ್ಟರ್ ವಿಚಾರ; ಸತತ 7 ಗಂಟೆ ವಿಚಾರಣೆಗೊಳಗಾಗಿ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ ನಳಿನಿ
 
Published by: MAshok Kumar
First published: January 11, 2020, 6:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading