ಪ್ರಧಾನಿ ಮೋದಿಗೆ ಕೋದಂಡರಾಮನ ವಿಗ್ರಹ ಉಡುಗೊರೆ; ಬೊಂಬೆನಗರಿ ಚನ್ನಪಟ್ಟಣದಲ್ಲಿದ್ದಾರೆ ವಿಗ್ರಹ ಕೆತ್ತಿದ ಶಿಲ್ಪಿ

ಈ ಬಗ್ಗೆ ಮಾತನಾಡಿರುವ ಅವರುನಾನು ಕೆತ್ತಿದ ವಿಗ್ರಹ ಪ್ರಧಾನಿಯವರಿಗೆ ಕೊಟ್ಟಿದ್ದು ಬಹಳ ಸಂತೋಷವಾಗಿದೆ. ದೆಹಲಿಯಲ್ಲಿ 2016-17 ರ ವೇಳೆ ನಡೆದ ನ್ಯಾಷನಲ್ ಅವಾರ್ಡ್ ಕಾಂಪಿಟೇಷನ್ ನಲ್ಲಿ ಇದೇ ಮಾದರಿಯ 7.5 ಅಡಿ ವಿಗ್ರಹ ಕೆತ್ತಿದೆ. ಅಲ್ಲಿ ಅಯೋಧ್ಯೆ ರಿಸರ್ಚ್ ಇನ್ಸ್ಟಿಟ್ಯೂಟ್ ನವರು ಗಮನಿಸಿದ್ದರು, ನಂತರ ಆ ವಿಗ್ರಹವನ್ನ ಅವರು ಅಯೋಧ್ಯೆಗೆ ತೆಗೆದುಕೊಂಡು ಹೋಗಿದ್ದರು. ಹಾಗಾಗಿ ಇವತ್ತು ಈ ಅವಕಾಶ ನನಗೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

news18-kannada
Updated:August 6, 2020, 7:15 AM IST
ಪ್ರಧಾನಿ ಮೋದಿಗೆ ಕೋದಂಡರಾಮನ ವಿಗ್ರಹ ಉಡುಗೊರೆ; ಬೊಂಬೆನಗರಿ ಚನ್ನಪಟ್ಟಣದಲ್ಲಿದ್ದಾರೆ ವಿಗ್ರಹ ಕೆತ್ತಿದ ಶಿಲ್ಪಿ
ಶಿಲ್ಪಿ ಎಂ.ರಾಮಮೂರ್ತಿ
  • Share this:
ರಾಮನಗರ(ಆ.6): ಕೋಟ್ಯಾಂತರ ಭಾರತೀಯರ ಕನಸು ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರಿಗೆ ಕೋದಂಡರಾಮನ ವಿಗ್ರಹವನ್ನ ಉಡುಗೊರೆಯಾಗಿ ಕೊಡಲಾಗಿದ್ದು ಅದು ಕರ್ನಾಟಕದಿಂದ ಅದರಲ್ಲೂ ವಿಶೇಷವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣದಿಂದ ತಲುಪಿದೆ ಅನ್ನೋದು ಅತ್ಯಂತ ಸಂತೋಷದ ವಿಚಾರ.

ಹೌದು,  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವನ್ನಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿಗೆ ಕೋದಂಡರಾಮನ ವಿಗ್ರಹವನ್ನ  ಉಡುಗೊರೆಯಾಗಿ ಕೊಡಲಾಗಿದೆ. ಆದರೆ ವಿಶೇಷ ಅಂದ್ರೆಈ ವಿಗ್ರಹ ಕೆತ್ತಿದವರು ಮೂಲತ ಆಂಧ್ರಪ್ರದೇಶದವರು. ಸುಮಾರು ವರ್ಷಗಳಿಂದ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ದರು. ಆದರೆ ಈಗ ತಮ್ಮದೇ ಒಂದು ಸ್ವಂತ ಟಾಯ್ಸ್ ಫ್ಯಾಕ್ಟರಿ(ಶೋ ರೂಮ್) ನಿರ್ಮಾಣ ಮಾಡಿಕೊಂಡು ರಾಮನಗರ ಜಿಲ್ಲೆ ಚನ್ನಪಟ್ಟಣದ ಕ್ರಾಫ್ಟ್ ಪಾರ್ಕ್ ನಲ್ಲಿ ವಾಸವಾಗಿದ್ದಾರೆ.

ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ ಅಬ್ಬರ; ಅಲ್ಲಲ್ಲಿ ಗುಡ್ಡ ಕುಸಿತ, ಮಲೆನಾಡಿಗರಲ್ಲಿ ಹೆಚ್ಚಿದ ಆತಂಕ

ಇನ್ನು ಕೋದಂಡರಾಮನ ಸುಂದರವಾದ ವಿಗ್ರಹ ಕೆತ್ತನೆ ಮಾಡಿ ಗಮನಸೆಳೆದಿರುವ ಶಿಲ್ಪಿ ಎಂ.ರಾಮಮೂರ್ತಿರವರು ನ್ಯೂಸ್ 18 ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರುನಾನು ಕೆತ್ತಿದ ವಿಗ್ರಹ ಪ್ರಧಾನಿಯವರಿಗೆ ಕೊಟ್ಟಿದ್ದು ಬಹಳ ಸಂತೋಷವಾಗಿದೆ. ದೆಹಲಿಯಲ್ಲಿ 2016-17 ರ ವೇಳೆ ನಡೆದ ನ್ಯಾಷನಲ್ ಅವಾರ್ಡ್ ಕಾಂಪಿಟೇಷನ್ ನಲ್ಲಿ ಇದೇ ಮಾದರಿಯ 7.5 ಅಡಿ ವಿಗ್ರಹ ಕೆತ್ತಿದೆ. ಅಲ್ಲಿ ಅಯೋಧ್ಯೆ ರಿಸರ್ಚ್ ಇನ್ಸ್ಟಿಟ್ಯೂಟ್ ನವರು ಗಮನಿಸಿದ್ದರು, ನಂತರ ಆ ವಿಗ್ರಹವನ್ನ ಅವರು ಅಯೋಧ್ಯೆಗೆ ತೆಗೆದುಕೊಂಡು ಹೋಗಿದ್ದರು. ಹಾಗಾಗಿ ಇವತ್ತು ಈ ಅವಕಾಶ ನನಗೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ ಅಬ್ಬರ; ಅಲ್ಲಲ್ಲಿ ಗುಡ್ಡ ಕುಸಿತ, ಮಲೆನಾಡಿಗರಲ್ಲಿ ಹೆಚ್ಚಿದ ಆತಂಕ

ಇನ್ನು ಒಂದು ವಿಗ್ರಹ ಕೆತ್ತಲು 2.5 ತಿಂಗಳು ಸಮಯ ಬೇಕಾಗುತ್ತೆ. ಸದ್ಯ ನಾನು 3 ಅಡಿಯ 3 ಕೋದಂಡರಾಮನ ವಿಗ್ರಹವನ್ನ ಕೆತ್ತಿ ಅಯೋಧ್ಯೆಗೆ ಕಳುಹಿಸಿದ್ದೇನೆ. ಅದರಲ್ಲಿ ಕೊನೆಯ ವಿಗ್ರಹವನ್ನ ಇವತ್ತು ಪ್ರಧಾನಿಗೆ ಕೊಡಲಾಗಿದೆ. ಆ ವಿಗ್ರಹ ಆಗಸ್ಟ್ 1 ರಂದು ಇಲ್ಲಿಂದ ಅಯೋಧ್ಯೆಗೆ ತಲುಪಿದೆ. ಇದರ ಜೊತೆಗೆ 1.5 ಅಡಿಯ ರಾಮ ಹಾಗೂ ಲವಕುಶರ ವಿಗ್ರಹಗಳು ಸಹ ತಲುಪಿವೆ. ಇದಕ್ಕಾಗಿತ್ಯಾಗದ ಮರ ಬಳಸಿ ಈ ವಿಗ್ರಹಗಳನ್ನ ತಯಾರು ಮಾಡಲಾಗಿದೆ. ನನಗೂ ಸಹ ಕಾರ್ಯಕ್ರಮಕ್ಕೆ ಆಹ್ವಾನವಿತ್ತು, ಆದರೆ ಕೊರೋನಾಯಿಂದ ಹೋಗಿಲ್ಲ. ಆದರೆ ಇದುನಮ್ಮ ಪರಂಪರೆಯ ಕೆಲಸ, ನಮ್ಮದು 5 ನೇ ತಲೆಮಾರಿನದ್ದು. ಹಾಗಾಗಿಇವತ್ತು ಪೂರ್ವಜರಿಂದ ಕಲಿತ ವಿದ್ಯೆಗೆ ಬೆಲೆಸಿಕ್ಕಿದೆ ಎಂದು ಶಿಲ್ಪಿ ಎಂ.ರಾಮಮೂರ್ತಿ ನ್ಯೂಸ್ 18 ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಚನ್ನಪಟ್ಟಣಕ್ಕೆ ಬೊಂಬೆಗಳ ನಾಡು ಎಂದೇ ಕರೆಯಲಾಗುತ್ತಿತ್ತು. ಆದರೆ ಈಗ ಇದೇ ನಾಡಿನಿಂದ ಕಲಾವಿದರೊಬ್ಬರು ತಯಾರಿಸಿದ ಮರದ ವಿಗ್ರಹ ದೇಶದ ಪ್ರಧಾನಿಗಳಿಗೆ ಉಡುಗೊರೆಯಾಗಿ, ಅದರಲ್ಲೂ ಅಯೋಧ್ಯೆ ಅಂತಹ ಪುಣ್ಯ ಭೂಮಿಯಲ್ಲಿ ಸಿಕ್ಕಿರುವುದು ನಿಜಕ್ಕೂ ಚನ್ನಪಟ್ಟಣದ ಜನರ ಪುಣ್ಯ ಎನ್ನಲೇ ಬೇಕು.
Published by: Latha CG
First published: August 6, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading