HOME » NEWS » State » CHANNAPATNA ROBBERY CASE GOT NEW TWIST POLICE ARRESTED ACCUSED LG

ಚನ್ನಪಟ್ಟಣ ದರೋಡೆ ಪ್ರಕರಣಕ್ಕೆ ಟ್ವಿಸ್ಟ್​; ರೌಡಿ ಶೀಟರ್​ ಮೇಲೆ ಸೇಡು ತೀರಿಸಿಕೊಳ್ಳಲು ಹಲ್ಲೆ

ಇವರು ದರೋಡೆ ಬದಲಿಗೆ ಸುಪಾರಿ ಪಡೆದು ರೌಡಿ ಶೀಟರ್ ಲಕ್ಷ್ಮಣ್ ಹತ್ಯೆಗೆ ಸಪೋರ್ಟ್ ಮಾಡಿದ್ದ ಚನ್ನಪಟ್ಟಣದ ಮತ್ತೊಬ್ಬ ರೌಡಿಶೀಟರ್ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದ್ದರು ಎನ್ನಲಾಗಿದೆ .

news18-kannada
Updated:March 20, 2020, 9:58 AM IST
ಚನ್ನಪಟ್ಟಣ ದರೋಡೆ ಪ್ರಕರಣಕ್ಕೆ ಟ್ವಿಸ್ಟ್​; ರೌಡಿ ಶೀಟರ್​ ಮೇಲೆ ಸೇಡು ತೀರಿಸಿಕೊಳ್ಳಲು ಹಲ್ಲೆ
ಇವರು ದರೋಡೆ ಬದಲಿಗೆ ಸುಪಾರಿ ಪಡೆದು ರೌಡಿ ಶೀಟರ್ ಲಕ್ಷ್ಮಣ್ ಹತ್ಯೆಗೆ ಸಪೋರ್ಟ್ ಮಾಡಿದ್ದ ಚನ್ನಪಟ್ಟಣದ ಮತ್ತೊಬ್ಬ ರೌಡಿಶೀಟರ್ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದ್ದರು ಎನ್ನಲಾಗಿದೆ .
  • Share this:
ರಾಮನಗರ(ಮಾ.03): ಹಾಡಹಗಲೇ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಕೆ.ಹೆಚ್.ಬಿ ಬಡಾವಣೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ರಾಮನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಇವರು ದರೋಡೆ ಬದಲಿಗೆ ಸುಪಾರಿ ಪಡೆದು ರೌಡಿ ಶೀಟರ್ ಲಕ್ಷ್ಮಣ್ ಹತ್ಯೆಗೆ ಸಪೋರ್ಟ್ ಮಾಡಿದ್ದ ಚನ್ನಪಟ್ಟಣದ ಮತ್ತೊಬ್ಬ ರೌಡಿಶೀಟರ್ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದ್ದರು ಎನ್ನಲಾಗಿದೆ .

ಇದೇ ಮೇ 8 ರಂದು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಚ್.ಬಿ. ಕಾಲೋನಿಯ ಹುತ್ತೇಶ್ ಎನ್ನುವರ ಮನೆಗೆ ನುಗ್ಗಿದ್ದ ದರೋಡೆಕೋರರು ಹುತ್ತೇಶ್ ಪತ್ನಿ ಮತ್ತು ಹಾಗೂ ಮಗಳಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಇದನ್ನೂ ಓದಿ: ಮಾ.22ರ ಭಾನುವಾರ ಜನರು ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು; ಈ ವೇಳೆ ಯಾರೊಬ್ಬರು ಮನೆಯಿಂದ ಹೊರಗೆ ಬರಬಾರದು; ಪ್ರಧಾನಿ ಮೋದಿ ಕರೆ

ಈ ಪ್ರಕರಣ ಸಂಬಂಧ ರಮೇಶ್ ಅಲಿಯಾಸ್ ಜಾಕಿ, ಪ್ರಜ್ವಲ್, ಮಧು ಮತ್ತು ನೆಲ್ಸನ್ ಎಂಬುವರರನ್ನು ಬಂಧಿಸಲಾಗಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಅನೂಪ್ ಎ.ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಮಾರುತಿ ಸ್ವಿಫ್ಟ್ ಡಿಸೈನರ್ ಕಾರು, ಮಾರಕಾಸ್ತ್ರಗಳು, 4.10 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಚನ್ನಪಟ್ಟಣದ ಎರಡು, ಬೆಂಗಳೂರಿನ ಪರಪ್ಪನ ಅಗ್ರಹಾರದ ಒಂದು ಪ್ರಕರಣ ಬೆಳಕಿಗೆ ಬಂದಿದೆ .

(ವರದಿ: ಎ.ಟಿ.ವೆಂಕಟೇಶ್​)
First published: March 19, 2020, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading