ಚನ್ನಪಟ್ಟಣ ಬೊಂಬೆಗಳಿಗೆ ಚೀನಾ ಕಾಟ; ಪ್ರಧಾನಿ ಮೋದಿ ಎದುರು ಹೊಸ ಬೇಡಿಕೆ ಇಟ್ಟ ಕುಶಲಕರ್ಮಿಗಳು
ಮೊದಲಿಗೆ ಚನ್ನಪಟ್ಟಣದಲ್ಲಿ 700 ರಿಂದ 800ಕ್ಕೂ ಹೆಚ್ಚು ಬೊಂಬೆತಯಾರಿಕ ಘಟಕಗಳಿದ್ದವು, ಈಗ 500 ರಿಂದ 600 ಇದ್ದಾವೆ. ಈಗಲೂ ಸಹ 1 ಸಾವಿರಕ್ಕೂ ಹೆಚ್ಚು ಜನರು ಇದೇ ಉದ್ಯಮವನ್ನ ನಂಬಿದ್ದರೆ, ಇನ್ನು ನೂರಾರು ಜನ ಉದ್ಯಮವನ್ನೇ ಬಿಟ್ಟು ಬೇರೆ ಉದ್ಯಮದಲ್ಲಿ ಜೀವನ ಕಂಡುಕೊಂಡಿದ್ದಾರೆ.
news18-kannada Updated:August 18, 2020, 10:04 AM IST

ಗೊಂಬೆ
- News18 Kannada
- Last Updated: August 18, 2020, 10:04 AM IST
ಚನ್ನಪಟ್ಟಣ (ಆಗಸ್ಟ್ 18): ಚನ್ನಪಟ್ಟಣ ಅಂದರೆ ಬೊಂಬೆನಾಡು ಅಂತಾನೇ ಖ್ಯಾತಿ ಪಡೆದಿದೆ. ಇಲ್ಲಿ ತಯಾರಾಗುವ ಬೊಂಬೆಗಳು ವಿಶ್ವದಾದ್ಯಂತ ರಾರಾಜಿಸುತ್ತವೆ. ಆದರೆ ಈಗ ಇದೇ ಬೊಂಬೆನಾಡಿನ ಕರಕುಶಲಕರ್ಮಿಗಳು ಕೊರೋನಾ ಏಟಿನ ಜೊತೆಗೆ ಚೀನಾ ಬೊಂಬೆಗಳ ಹಾವಳಿಗೆ ಸಿಕ್ಕಿ ಸೊರಗುತ್ತಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಕೊರೋನಾ ಅಬ್ಬರಕ್ಕೆ ನಲುಗಿರುವ ಬೊಂಬೆ ತಯಾರಕರು ಕೈಯಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಕೂತಿದ್ದಿದ್ದಾರೆ. ಇದರ ಬೆನ್ನಲ್ಲೇ ಚೀನಾ ಆಟಿಕೆಗಳಿಂದ ದೇಶಿ ಆಟಿಕೆಗಳಿಗೆ ಸೂಕ್ತ ಬೆಂಬಲವಿಲ್ಲದಂತಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆತ್ಮನಿರ್ಭಾರ್ ಯೋಜನೆಗೆ ಬೊಂಬೆ ಉದ್ಯಮವನ್ನು ಸೇರಿಸಿದರೆ ಈ ಉದ್ಯಮದ ಜೊತೆಗೆ ನಮ್ಮ ಭಾರತದ ಸಂಸ್ಕೃತಿ ಉಳಿಯಲಿದೆ ಎಂದು ಬೊಂಬೆ ತಯಾರಕರು ನ್ಯೂಸ್ 18 ಮೂಲಕ ಒತ್ತಾಯಿಸಿದ್ದಾರೆ.
ಹೌದು, ಕಳೆದ ಐದಾರು ತಿಂಗಳಿಂದ ವಿಶ್ವದಲ್ಲೇ ಕೊರೋನಾ ಅಬ್ಬರಕ್ಕೆ ಎಲ್ಲಾ ಉದ್ಯಮಗಳು ನಲುಗಿದೆ. ಅದೇ ರೀತಿ ರಾಮನಗರ ಜಿಲ್ಲೆ ಚನ್ನಪಟ್ಟಣದ ಗೊಂಬೆಗಳು ಅಂದ್ರೆ ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿವೆ. ಆದರೆ ಈಗ ಚನ್ನಪಟ್ಟಣದ ಗೊಂಬೆಗಳ ಉದ್ಯಮವೂ ಕೂಡ ಪಾತಾಳಕ್ಕೆ ಬಿದ್ದಿದೆ. ವಿಶ್ವದ ಮೂಲೆಮೂಲೆಗೂ ರಫ್ತಾಗುತ್ತಿದ್ದ ಇಲ್ಲಿನ ಗೊಂಬೆಗಳು ಈಗ ಟಾಯ್ಸ್ ಶೋ ರೂಮ್ಸ್ಗಳಲ್ಲೇ ಧೂಳಿಡಿದಿವೆ. ಚನ್ನಪಟ್ಟಣದ ಮುನಿಯಪ್ಪನದೊಡ್ಡಿ ಸೇರಿದಂತೆ ಚನ್ನಪಟ್ಟಣದಲ್ಲಿ ಒಟ್ಟು 500 ರಿಂದ 600 ಬೊಂಬೆ ತಯಾರಿಕ ಘಟಕಗಳಿವೆ. 1 ಸಾವಿರಕ್ಕೂ ಹೆಚ್ಚು ಜನ ಗೊಂಬೆ ತಯಾರಿಕೆಯಲ್ಲಿಯೇ ತಮ್ಮ ಜೀವನವನ್ನ ಕಂಡುಕೊಂಡಿದ್ದಾರೆ. ಆದರೆ ಈಗ ಕೊರೋನಾ ಏಟಿಗೆ ಅವರೆಲ್ಲರ ಬದುಕು ಬೀದಿಗೆ ಬಿದ್ದಿದೆ. ಇನ್ನು ಇದರ ಜೊತೆಗೆ ಸುಮಾರು ವರ್ಷಗಳಿಂದಲೂ ಕೂಡ ಚೀನಾ ದೇಶದ ಗೊಂಬೆಗಳು ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ಹಿನ್ನೆಲೆ ದೇಸಿ ಗೊಂಬೆಗಳನ್ನ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಚನ್ನಪಟ್ಟಣದಲ್ಲಿ ತಯಾರಾಗುತ್ತಿದ್ದ ಗೊಂಬೆಗಳು ಇಡೀ ವಿಶ್ವದಲ್ಲೇ ಮಾರಾಟವಾಗುತ್ತಿದ್ದವು. ಆದರೆ ಇಲ್ಲಿನ ಗೊಂಬೆಗಳ ತಯಾರಿಕೆಗೆ ಆಲೆಮರವನ್ನ ಬಳಸಿ ಗುಣಮಟ್ಟದ ಬಣ್ಣದ ಜೊತೆಗೆ ವಿವಿಧ ರೀತಿಯ ಆಕಾರವಿರುವ ಕಾರಣ ಚನ್ನಪಟ್ಟಣ ಬೊಂಬೆಗಳ ಬೆಲೆ ಸ್ವಲ್ಪ ದುಬಾರಿಯಾಗಿರುತ್ತದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಚೀನಾ ಅತೀ ಕಡಿಮೆ ಬೆಲೆಗೆ ಬೊಂಬೆಗಳನ್ನ ತಯಾರು ಮಾಡುವುದರ ಜೊತೆಗೆ ಅಷ್ಟೇ ಕಡಿಮೆ ಬೆಲೆಗೆ ಮಾರಾಟ ಕೂಡ ಮಾಡ್ತಾರೆ. ಹಾಗಾಗಿ ಭಾರತದಲ್ಲೂ ಸಹ ಚನ್ನಪಟ್ಟಣ ಬೊಂಬೆಗಳಿಗಿಂತಲೂ ಹೆಚ್ಚಾಗಿ ಚೀನಾ ಬೊಂಬೆಗಳು, ಆಟಿಕೆಗಳು ಮಾರಾಟವಾಗ್ತಿದ್ದಾವೆ ಅನ್ನೋದು ವಾಸ್ತವ ಸತ್ಯ.
ಇನ್ನು ಚನ್ನಪಟ್ಟಣ ಬೊಂಬೆಗಳಿಗೆ ಅರಗು ಬಣ್ಣವನ್ನ (ಮರದ ಚಕ್ಕೆ, ಹರಿಯಾಣ ಮೂಲದಿಂದ ಸಿಗುತ್ತದೆ) ಹಾಕಿದರೆ, ಚೀನಾ ಬೊಂಬೆಗಳಿಗೆ ಸಂಪೂರ್ಣ ಕೆಮಿಕಲ್ ಬಣ್ಣವನ್ನ ಹಾಕಲಾಗುತ್ತೆ. ಆದರೆ ಎರಡೂ ಬೊಂಬೆಗಳನ್ನ ನೋಡಿದರೆ ಚೀನಾಗಿಂತಲೂ ಚನ್ನಪಟ್ಟಣದ ಬೊಂಬೆಗಳು ಸುಂದರವಾಗಿ ಕಾಣುತ್ತವೆ. ಆದರೂ ಸಹ ಕಡಿಮೆ ಬೆಲೆಗೆ ಸಿಗುವ ಕಡೆಗೆ ವ್ಯಾಪಾರಿಗಳು, ಗ್ರಾಹಕರು ಮುಖ ಮಾಡ್ತಿದ್ದಾರೆ. ಹಾಗಾಗಿ ಚೀನಾದ 57 ಆಪ್ಗಳನ್ನ ಬ್ಯಾನ್ ಮಾಡುವ ಮೂಲಕ ಪ್ರಧಾನಿ ಮೋದಿ ಆತ್ಮನಿರ್ಭಾರ್ ಯೋಜನೆಗೆ ಹೊಸ ಆಯಾಮ ತಂದಿದ್ದಾರೆ. ಇದರ ಜೊತೆಗೆ ಚೀನಾದ ಬೊಂಬೆಗಳನ್ನ ಬ್ಯಾನ್ ಮಾಡಿ, ನಮ್ಮ ಚನ್ನಪಟ್ಟಣದ ಬೊಂಬೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡಲಿ, ಇದರಿಂದ ನಮ್ಮ ತನ ಉಳಿಯಲಿದೆ ಎಂದು ಚನ್ನಪಟ್ಟಣದ ಹಿರಿಯ ಪತ್ರಕರ್ತ ರಮೇಶ್ ಗೌಡ ನ್ಯೂಸ್ 18 ಜೊತೆಗೆ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ಬಗ್ಗೆ ಚನ್ನಪಟ್ಟಣದ ಗೊಂಬೆ ತಯಾರಕರು ಮಾತನಾಡಿ ಕೇಂದ್ರ ಸರ್ಕಾರ ಆತ್ಮನಿರ್ಭಾರ್ ಯೋಜನೆಯನ್ನ ಜಾರಿಗೆ ತಂದಿರುವುದು ನಿಜಕ್ಕೂ ಒಳ್ಳೆಯದ್ದು. ನಾವು ಚನ್ನಪಟ್ಟಣದಲ್ಲಿ ತಯಾರು ಮಾಡುವ ಗೊಂಬೆಗಳು ಇಡೀ ವಿಶ್ವದಲ್ಲೇ ಖ್ಯಾತಿ ಪಡೆದಿವೆ. ಜೊತೆಗೆ ವಿಶ್ವಮಟ್ಟದಲ್ಲಿ ಇಲ್ಲಿನ ಬೊಂಬೆಗಳು ಹೆಸರುವಾಸಿ. ಆದರೆ ನಮಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ಸೂಕ್ತ ಬೆಂಬಲವಿಲ್ಲ.
ಮೊದಲಿಗೆ ಚನ್ನಪಟ್ಟಣದಲ್ಲಿ 700 ರಿಂದ 800ಕ್ಕೂ ಹೆಚ್ಚು ಬೊಂಬೆತಯಾರಿಕ ಘಟಕಗಳಿದ್ದವು, ಈಗ 500 ರಿಂದ 600 ಇದ್ದಾವೆ. ಈಗಲೂ ಸಹ 1 ಸಾವಿರಕ್ಕೂ ಹೆಚ್ಚು ಜನರು ಇದೇ ಉದ್ಯಮವನ್ನ ನಂಬಿದ್ದರೆ, ಇನ್ನು ನೂರಾರು ಜನ ಉದ್ಯಮವನ್ನೇ ಬಿಟ್ಟು ಬೇರೆ ಉದ್ಯಮದಲ್ಲಿ ಜೀವನ ಕಂಡುಕೊಂಡಿದ್ದಾರೆ. ಜೊತೆಗೆ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಾರು ಟಾಯ್ಸ್ ಶೋ ರೂಮ್ಸ್ಗಳಿದ್ದಾವೆ. ಆದರೆ ಅಲ್ಲಿನ ಮಾಲೀಕರು ಮಾತ್ರ ನಮ್ಮಿಂದ ಕಡಿಮೆ ಬೆಲೆಗೆ ಆಟಿಕೆಗಳನ್ನ ಖರೀದಿ ಮಾಡಿ ದುಬಾರಿ ಬೆಲೆಗೆ ಪ್ರವಾಸಿಗರಿಗೆ ಮಾರಾಟ ಮಾಡ್ತಾರೆ. ಜೊತೆಗೆ ಚೀನಾ ಆಟಿಕೆಗಳು ಹೆಚ್ಚಾಗಿ ಮಾರಾಟ ಮಾಡ್ತಾರೆ. ಹಾಗಾಗಿ ಕೇಂದ್ರ ಸರ್ಕಾರದ ಆತ್ಮನಿರ್ಭಾರ್ ಯೋಜನೆಯಲ್ಲಿ ಬೊಂಬೆ ಉದ್ಯಮವನ್ನ ಸೇರಿಸಿ ಸ್ಥಳೀಯವಾಗಿ ಸರ್ಕಾರದಿಂದಲೇ ಮಾರುಕಟ್ಟೆ ಸೃಷ್ಟಿಸಿದರೆ ನಮಗೆ ಅನುಕೂಲವಾಗಲಿದೆ ಎಂದು ನ್ಯೂಸ್ 18 ಜೊತೆಗೆ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಚನ್ನಪಟ್ಟಣದ ಗೊಂಬೆಗಳು ಅಂದ್ರೆ ವಿಶ್ವದಲ್ಲೇ ಹೆಸರುವಾಸಿಯಾಗಿವೆ. ಆದರೆ ಈಗ ಗೊಂಬೆಗಳನ್ನ ತಯಾರು ಮಾಡುವ ಕರಕುಶಲಕರ್ಮಿಗಳ ಬದುಕು ಮಾತ್ರ ಮೂರಾಬಟ್ಟೆಯಾಗಿದೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಚೀನಾ ಆಟಿಕೆಗಳನ್ನ ಸಂಪೂರ್ಣ ಬ್ಯಾನ್ ಮಾಡಿ, ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆ ಸೃಷ್ಟಿಸಿದರೆ ಆತ್ಮನಿರ್ಭಾರ್ ಯೋಜನೆಗೆ ಹೊಸ ಬೆಳಕು ಚೆಲ್ಲಿದಂತಾಗುತ್ತದೆ. ಪ್ರಧಾನಿ ನರೇಂದ್ರಮೋದಿಯವರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಿ ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.
ಹೌದು, ಕಳೆದ ಐದಾರು ತಿಂಗಳಿಂದ ವಿಶ್ವದಲ್ಲೇ ಕೊರೋನಾ ಅಬ್ಬರಕ್ಕೆ ಎಲ್ಲಾ ಉದ್ಯಮಗಳು ನಲುಗಿದೆ. ಅದೇ ರೀತಿ ರಾಮನಗರ ಜಿಲ್ಲೆ ಚನ್ನಪಟ್ಟಣದ ಗೊಂಬೆಗಳು ಅಂದ್ರೆ ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿವೆ. ಆದರೆ ಈಗ ಚನ್ನಪಟ್ಟಣದ ಗೊಂಬೆಗಳ ಉದ್ಯಮವೂ ಕೂಡ ಪಾತಾಳಕ್ಕೆ ಬಿದ್ದಿದೆ. ವಿಶ್ವದ ಮೂಲೆಮೂಲೆಗೂ ರಫ್ತಾಗುತ್ತಿದ್ದ ಇಲ್ಲಿನ ಗೊಂಬೆಗಳು ಈಗ ಟಾಯ್ಸ್ ಶೋ ರೂಮ್ಸ್ಗಳಲ್ಲೇ ಧೂಳಿಡಿದಿವೆ. ಚನ್ನಪಟ್ಟಣದ ಮುನಿಯಪ್ಪನದೊಡ್ಡಿ ಸೇರಿದಂತೆ ಚನ್ನಪಟ್ಟಣದಲ್ಲಿ ಒಟ್ಟು 500 ರಿಂದ 600 ಬೊಂಬೆ ತಯಾರಿಕ ಘಟಕಗಳಿವೆ. 1 ಸಾವಿರಕ್ಕೂ ಹೆಚ್ಚು ಜನ ಗೊಂಬೆ ತಯಾರಿಕೆಯಲ್ಲಿಯೇ ತಮ್ಮ ಜೀವನವನ್ನ ಕಂಡುಕೊಂಡಿದ್ದಾರೆ. ಆದರೆ ಈಗ ಕೊರೋನಾ ಏಟಿಗೆ ಅವರೆಲ್ಲರ ಬದುಕು ಬೀದಿಗೆ ಬಿದ್ದಿದೆ.