2nd PUC Exam: ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ; ವಿವಿಧ ವಿಷಯಗಳ ಎಕ್ಸಾಂ ಡೇಟ್​ ಚೇಂಜ್​

ವಿವಿಧ ವಿಷಯಗಳ ಪರೀಕ್ಷೆ ದಿನಾಂಕ ಮಾತ್ರ ಅದಲು ಬದಲು. ಕೆಲ‌ ತಾಂತ್ರಿಕ ಕಾರಣಗಳಿಂದ ಪರೀಕ್ಷೆ ದಿನಾಂಕ ಮಾತ್ರ  ಬದಲಾವಣೆಯಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಏ.7):  ದ್ವಿತೀಯ ಪಿಯುಸಿ (2nd PUC) ಅಂತಿಮ ಪರೀಕ್ಷಾ ವೇಳಾಪಟ್ಟಿಯಲ್ಲಿ (schedule)  ಬದಲಾವಣೆಯಾಗಿದೆ. (Changes)  ವಿವಿಧ ವಿಷಯಗಳ ಪರೀಕ್ಷೆ ದಿನಾಂಕ ಮಾತ್ರ ಅದಲು ಬದಲು. ಕೆಲ‌ ತಾಂತ್ರಿಕ ಕಾರಣಗಳಿಂದ ಪರೀಕ್ಷೆ ದಿನಾಂಕ ಮಾತ್ರ  ಬದಲಾವಣೆಯಾಗಿದೆ.  ಈ ಮೊದಲು ತಿಳಿಸಿದಂತೆ ಏ. 22ರಿಂದ‌ ಮೇ 18ರವರೆಗೆ  ಪರೀಕ್ಷೆ ನಡೆಯಲಿದೆ ವಿಷಯಗಳ ದಿನಾಂಕವಷ್ಟೆ ಬದಲಾಗಿದೆ ಎಂದು  ಪಿಯು ಬೋರ್ಡ್ (PUC Board) ಮಾಹಿತಿ ನೀಡಿದೆ. ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಈ ಬದಲಾವಣೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ.

ತಮ್ಮೆಲ್ಲರ ಗಮನಕ್ಕೆ ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾ ಪಟ್ಟಿಯನ್ನು ಅನುಸರಿಸದೆ ದಿನಾಂಕ 06-04-2022ರಂದು ಪ್ರಕಟಿಸಿರೋ ಅಂತಿಮ ವೇಳಾಪಟ್ಟಿಯನ್ನು ಮಾತ್ರ ಎಚ್ಚರದಿಂದ ಅನುಸರಿಸಬೇಕಾಗಿ ತಿಳಿಸಿರೋದಾಗಿ ದ್ವಿತೀಯ ಪಿಯುಸಿ ಬೋರ್ಡ್​ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿ

ಯಾವ ವಿಷಯಗಳ ದಿನಾಂಕ ಬದಲಾಗಿದೆ

ಏ. 22 - ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಏ. 23 - ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
ಏ. 25 - ಅರ್ಥಶಾಸ್ತ್ರ
ಏ. 26 - ಮನಶ್ಶಾಸ್ತ್ರ, ರಸಾಯನ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ
ಏ. 28 - ಕನ್ನಡ
ಮೇ 4 - ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 5 - ಮಾಹಿತಿ ತಂತ್ರಜ್ಞಾನ, ರಿಟೈಲ್ ಆಟೋಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ ನೆಸ್
ಮೇ. 6 - ಇಂಗ್ಲಿಷ್
ಮೇ 10 - ಇತಿಹಾಸ, ಭೌತಶಾಸ್ತ್ರ
ಮೇ 12 - ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 - ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ
ಮೇ 17 - ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹವಿಜ್ಞಾನ
ಮೇ 18 - ಹಿಂದಿ

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ

2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು  ದಿನಾಂಕ 22-04-2022 ರಿಂದ 18-042022ರವರೆಗೆ ಬದಲಾವಣೆ ತರಲಾಗಿತ್ತು ಕಾರಣಾಂತರಗಳಿಂದ ಅಲ್ಪ ಬದಲಾವಣೆಯೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪತ್ರದೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಲಗತ್ತಿಸಲಾಗಿದೆ. ಎಲ್ಲಾ ಪೋಷಕರು ಮತ್ತು ವಿದ್ಯಾರ್ಥಿಗಳು ಇಲಾಖಾ ಅಂತರ್ಜಾಲದಲ್ಲಿಅಳವಡಿಸಿರೋ ವೇಳಾಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: Mysore: ನನಸಾಗ್ತಿದೆ ಪುನೀತ್ ಕನಸು; ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ಎಲ್ಲಾ ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ

ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಈ ಬದಲಾವಣೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ತಮ್ಮೆಲ್ಲರ ಗಮನಕ್ಕೆ ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾ ಪಟ್ಟಿಯನ್ನು ಅನುಸರಿಸದೆ ದಿನಾಂಕ 06-04-2022ರಂದು ಪ್ರಕಟಿಸಿರೋ ಅಂತಿಮ ವೇಳಾಪಟ್ಟಿಯನ್ನು ಮಾತ್ರ ಎಚ್ಚರದಿಂದ ಅನುಸರಿಸಬೇಕಾಗಿ ತಿಳಿಸಿರೋದಾಗಿ ದ್ವಿತೀಯ ಪಿಯುಸಿ ಬೋರ್ಡ್​ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿ

‘ಹಿಜಾಬ್​ ಧರಿಸಿ ಬಂದ್ರೆ ಪರೀಕ್ಷೆಗೆ ಅವಕಾಶ ಕೊಡೊದಿಲ್ಲ’

ಬೆಂಗಳೂರು: ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆ (PU ಬರೆಯಲು ಅವಕಾಶ ನೀಡಲ್ಲ ಅಂತ ಶಿಕ್ಷಣ ಸಚಿವ ಬಿಸಿ ನಾಗೇಶ್​ ಮಾಹಿತಿ ನೀಡಿದ್ದಾರೆ. ಶಿಕ್ಷಣ ಇಲಾಖೆ ಹೊರಡಿಸುವ ಆದೇಶಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೆಲವೇ ದಿನಗಳಲ್ಲಿ ಶಿಕ್ಷಣ ಇಲಾಖೆ ಆದೇಶ ಹೊರಡಿಸುತ್ತದೆ. ರಾಜ್ಯದ ಜಿಲ್ಲಾ ಕಾಲೇಜುಗಳಲ್ಲಿ ಶೇ.90ರಷ್ಟು ಸಮವಸ್ತ್ರ ಇದೆ. ಶೇ.10ರಷ್ಟು ಕಾಲೇಜುಗಳಲ್ಲಿ ಮಾತ್ರ ಸಮವಸ್ತ್ರ ಇಲ್ಲ. ಯಾವುದೇ ಧರ್ಮಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ. ಆಯಾ ಕಾಲೇಜುಗಳ ಎಸ್​ಡಿಎಮ್​ಸಿ ಸೂಚನೆಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Bengaluru Karaga: ನಾಳೆಯಿಂದ ಬೆಂಗಳೂರು ಕರಗ ಮಹೋತ್ಸವದ ಸಂಭ್ರಮ, ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ

ಕೋರ್ಟ್ ತೀರ್ಪಿನಂತೆ ಸಮವಸ್ತ್ರ ಪಾಲನೆ ಮಾಡುತ್ತಿದ್ದೇವೆ. ಮುಖ್ಯ ಪರೀಕ್ಷೆಗೆ ಗೈರಾದವರಿಗೆ ಮರುಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಏ.22ರಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತದೆ. SSಐಅ ಬೆನ್ನಲ್ಲೇ ಪಿಯುಸಿ ಪರೀಕ್ಷೆಗೂ ಹಿಜಾಬ್ ಬ್ಯಾನ್ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
Published by:Pavana HS
First published: