UPSC ಪರೀಕ್ಷೆ ಹಿನ್ನೆಲೆ ನಾಳೆ ನಮ್ಮ ಮೆಟ್ರೋ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ಮೆಟ್ರೋ ರೈಲು ಸೇವೆ ಸಮಯದಲ್ಲಿ ಬದಲಾವಣೆ  ಮಾಡಲಾಗಿದೆ. ಪರೀಕ್ಷಾರ್ಥಿಗಳಿಗೆ ಅನುಕೂಲವಾಗಲಿ ಎಂದು ಬೆಳಗ್ಗೆ 7 ಗಂಟೆ ಬದಲಿಗೆ 6 ಗಂಟೆಗೆ ಮೆಟ್ರೋ  ಸೇವೆ ಆರಂಭವಾಗಲಿದೆ.

ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

  • Share this:
ನಾಳೆ ಭಾನುವಾರದಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ 2022 ? (UPSC Preliminary Exam 2022) ನಡೆಯಲಿದ್ದು, ಈ ಹಿನ್ನೆಲೆ ಮೆಟ್ರೋ ರೈಲು ಸೇವೆ (Metro Rail Service) ಸಮಯದಲ್ಲಿ ಬದಲಾವಣೆ  ಮಾಡಲಾಗಿದೆ. ಪರೀಕ್ಷಾರ್ಥಿಗಳಿಗೆ ಅನುಕೂಲವಾಗಲಿ ಎಂದು ಬೆಳಗ್ಗೆ 7 ಗಂಟೆ ಬದಲಿಗೆ 6 ಗಂಟೆಗೆ ಮೆಟ್ರೋ  ಸೇವೆ ಆರಂಭವಾಗಲಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮೆಟ್ರೋ ನಿಗಮದಿಂದ ನಿರ್ಧಾರ ತೆಗೆದುಕೊಂಡಿದ್ದು, ಹಸಿರು ಹಾಗೂ ನೇರಳ (Green And Purple) ಎರಡೂ ಮಾರ್ಗಗಳಲ್ಲಿ 1 ಗಂಟೆ ಮುಂಚಿತವಾಗಿ ರೈಲು ಸೇವೆ ಆರಂಭವಾಗಲಿದೆ ಎಂದು BMRCL ಪ್ರಕಟಣೆ ಮೂಲಕ ತಿಳಿಸಿದೆ.

ಪರೀಕ್ಷಾರ್ಥಿಗಳಿಗೆ ಅನುಕೂಲವಾಗಲೆಂದು ಬದಲಾವಣೆ

ಯುಪಿಎಸ್​ಸಿ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗಲಿ ಎಂದು ಮೆಟ್ರೋ ಸೇವೆಯನ್ನು 1 ಗಂಟೆ ಮುಂಚಿತವಾಗಿ ಶುರು ಮಾಡಲಿದೆ. ಪರೀಕ್ಷಾರ್ಥಿಗಳು ಎಕ್ಸಾಂ ಸೆಂಟರ್​ಗಳಿಗೆ ಸುಲಭವಾಗಿ ತಲುಪಬೇಕು ಅನ್ನೋ ಚಿಂತನೆಯಿಂದ BMRCL ಈ ನಿರ್ಧಾರ ಮಾಡಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ  ವ್ಯಕ್ತವಾಗಿದೆ.
5 ದಿನದ ಮೆಟ್ರೋ ಪಾಸ್​ ವಿತರಣೆ 


ಟ್ರಾಫಿಕ್ (Traffic)​ ಕಿರಿಕಿರಿಯಿಂದ ತಪ್ಪಿಸಿ ಸುಖಕರ ಪ್ರಯಾಣದಿಂದ  ಜನರ ಮನಗೆದ್ದಿರೋ ನಮ್ಮ ಮೆಟ್ರೋ (Namma Metro), ಇದೀಗ ಪ್ರಯಾಣಿಕರಿಗಾಗಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಇತ್ತೀಚೆಗಷ್ಟೆ 1 ಹಾಗೂ 3 ದಿನಗಳ ಪಾಸ್​ ಜಾರಿಗೆ ತಂದಿದ್ದ BMRCL, ಇದೀಗ 5 ದಿನಗಳ ಪಾಸ್​ನನ್ನು ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲೆಂದು ಈ ಪಾಸ್ (Pass)​ ಬಿಡುಗಡೆ ಮಾಡಿರೋದಾಗಿ BMRCL ತಿಳಿಸಿದೆ.


5 ದಿನದ ಮೆಟ್ರೋ ಪಾಸ್​

1 ದಿನ ಹಾಗೂ 3 ದಿನದ ಮೆಟ್ರೋ ಪಾಸ್​ಗಳನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಇದರ ಜೊತೆ ನಿಗಮವು ದಿನಾಂಕ 23-05-2022 ರಿಂದ ಜಾರಿಗೆ ಬರುವಂತೆ ಮತ್ತೊಂದು ರೀತಿಯ ಪಾಸ್​ ಎಂದರೆ 5 ದಿನದ ಪಾಸ್​ ಅನ್ನು ಪರಿಚಯಿಸುತ್ತಿದೆ. 5 ದಿನದ ಪಾಸ್ ಬೆಲೆ 550 ರೂ ಇರಲಿದೆ. ಮರುಪಾವತಿಸಬಹುದಾದ ಸ್ಮಾರ್ಟ್​ ಕಾರ್ಡ್​ ಭದ್ರತಾ ಠೇವಣಿ ರೂ 50 ರೂ ಇರಲಿದೆ.

ಇದನ್ನೂ ಓದಿ: Namma Metro: ಮೊದಲ ಬಾರಿಗೆ ಇನ್ಫೋಸಿಸ್ ಮೆಟ್ರೋ ನಿಲ್ದಾಣಕ್ಕೆ ಸಿಗಲಿದೆ ಗ್ರೀನ್ ಟ್ಯಾಗ್

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯ

ಈ ಸ್ಮಾರ್ಟ್​ ಕಾರ್ಡ್​ನನ್ನು ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಸಬಹುದಾಗಿದೆ. ಪ್ರಯಾಣಿಕರು ಖರೀದಿಸಿದ ದಿನಾಂಕದಿಂದ 5 ದಿನಗಳವರೆಗೆ ಯಾವುದೇ  ಮೆಟ್ರೋ  ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಅನಿಯಮಿತವಾಗಿ ಪ್ರಯಾಣಿಸಬಹುದಾಗಿದೆ.

ಬೈಯಪ್ಪನ ಹಳ್ಳಿಯಿಂದ ವೈಟ್​ಫೀಲ್ಡ್​ಗೆ ಶೀಘ್ರವೇ ಮೆಟ್ರೋ ಸಂಚಾರ

ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರಿಗೆ ಟ್ರಾಫಿಕ್‌  ಕಿರಿಕಿರಿಯಿಂದ ಮುಕ್ತಿ ನೀಡಿರುವ ನಮ್ಮ ಮೆಟ್ರೋ  ವಿಸ್ತರಣೆ   ಕಾರ್ಯ ಮತ್ತಷ್ಟು ಚುರುಕುಗೊಂಡಿದೆ.  ಹಲವು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ವೈಟ್​ಫೀಲ್ಡ್​​ ಗೂ ಶೀಘ್ರವೇ ಮೆಟ್ರೋ ವಿಸ್ತರಣೆ ಆಗಲಿದೆ. ಮೆಟ್ರೋ ಪ್ರಯಾಣಿಕರಿಗೆ ಸಂಚಾರ ಮತ್ತಷ್ಟು ಸರಳವಾಗಲಿದೆ.  2  ವರ್ಷಗಳಿಂದ ವಿಳಂಬಗೊಂಡಿದ್ದ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್  ನಡುವಿನ ಕಾಮಗಾರಿಯನ್ನು BMRCL ಇದೀಗ ಚುರುಕುಗೊಳಿಸಿದೆ. ಮುಂದಿನ ವರ್ಷ ಮಾರ್ಚ್​ನಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ ವರೆಗೂ ಮೆಟ್ರೋ ಸಂಚಾರ ಪಾರಂಭವಾಗಲಿದೆ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಬಗ್ಗೆ ದೂರು ಸಲ್ಲಿಸಬೇಕೇ? ಆರಂಭವಾಗಿದೆ ಹೊಸ ವೆಬ್ ಸೈಟ್

ಮತ್ತಷ್ಟು ಚುರುಕುಗೊಂಡ BMRCL ಕಾಮಗಾರಿ
 2020ರಲ್ಲೇ ಮುಗಿಯಬೇಕಿದ್ದ ಕಾಮಗಾರಿ, ಹಲವು ಅಡಚಣೆಯಿಂದ ವಿಳಂಬ ಆಗಿತ್ತು. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ವರೆಗಿನ ನೇರಳೆ ಮಾರ್ಗದ ವಿಸ್ತರಣೆಯಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾಮಗಾರಿಗೆ ಇದ್ದ ಎಲ್ಲ ಅಡಚಣೆ ಕ್ಲಿಯರ್ ಆಗಿದ್ದು, ವೈಟ್‌ಫೀಲ್ಡ್ ವರೆಗೂ  ಶೇಕಡಾ 99 ರಷ್ಟು ಕಾಮಗಾರಿ ಕಂಪ್ಲೀಟ್ ಆಗಿದೆ. ಮೆಟ್ರೋ ಕಾಮಗಾರಿ ನಡೆಸಲು ಭೂಸ್ವಾಧೀನ ಮತ್ತು ಮರ ಕಟಾವು ಪ್ರಕ್ರಿಯೆಗೆ  ಕೊರೊನಾ ಅಡ್ಡಿ ಪಡಿಸಿತ್ತು.
Published by:Pavana HS
First published: