2022-23ನೇ ಸಾಲಿನ ಎಸ್ಎಸ್ಎಲ್ಸಿ (SSLC Exam) ಪರೀಕ್ಷೆಗೆ ಅಂತಿಮ ವೇಳಾಪಟ್ಟಿ (Time Table) ಬಿಡುಗಡೆ ಮಾಡಲಾಗಿದೆ. ಎಸ್ಎಸ್ಎಲ್ಸಿ ಬೋರ್ಡ್ ವೇಳಾಪಟ್ಟಿ ಪ್ರಕಟ ಮಾಡಿದೆ. ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಏ.4ರಂದು ಮಹಾವೀರ ಜಯಂತಿ ರಜೆ ಹಿನ್ನೆಲೆ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ವೇಳಾಪಟ್ಟಿ ಪ್ರಕಾರ ಯಾವ ದಿನ ಯಾವ ಪರೀಕ್ಷೆ (Exam) ನಡೆಯುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಮಾರ್ಚ 31- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್
ಏಪ್ರಿಲ್ 03- ಗಣಿತ , ಸಮಾಜ ವಿಜ್ಞಾನ
ಏಪ್ರಿಲ್ 06 - ದ್ವಿತೀಯ ಭಾಷೆ
ಇಂಗ್ಲಿಷ್, ಕನ್ನಡ
ಏಪ್ರಿಲ್ 08- ಅರ್ಥಶಾಸ್ತ್ರ
ಏಪ್ರಿಲ್ 10- ವಿಜ್ಞಾನ, ರಾಜ್ಯಶಾಸ್ತ್ರ
ಏಪ್ರಿಲ್ 12- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು ಸಂಸ್ಕೃತ
ಕೆಲ ದಿನಗಳ ಹಿಂದಷ್ಟೇ ಪಿಯುಸಿ ಪರೀಕ್ಷೆ ವೇಳಾಪಟ್ಟಿ
ವಿದ್ಯಾರ್ಥಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ದ್ವಿತೀಯ ಪಿಯು (2nd PUC Exam) ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. 2023 ಮಾರ್ಚ್ 9 ರಿಂದ 29 ರವರೆಗೆ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಶಿಕ್ಷಣ (Education) ಇಲಾಖೆ ಇದೀಗ ಪ್ರಕಟಿಸಿದೆ. ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು (Final Time Table) ನೀವು ಅಧಿಕೃತ ವೆಬ್ಸೈಟ್ನಲ್ಲಿ ಪಡೆಯಬಹುದು. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು ನೀವು ಇಲ್ಲಿ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ವೇಳಾಪಟ್ಟಿ ವಿವರ ಹೀಗಿದೆ
2023 ಮಾರ್ಚ್ 09 ಕನ್ನಡ
ಮಾರ್ಚ್ 11 ಗಣಿತ, ಶಿಕ್ಷಣ
ಮಾರ್ಚ್ 13 ಅರ್ಥಶಾಸ್ತ್ರ
ಮಾರ್ಚ್ 14 ರಸಯಾನಶಾಸ್ತ್ರ, ಮನಶಾಸ್ತ್ರ, ಕರ್ನಾಟಕ ಸಂಗೀತ , ಹಿಂದುಸ್ತಾನಿ ಸಂಗೀತ ಮತ್ತು ಮೂಲಗಣಿತ
ಮಾರ್ಚ್ 15 , ಪ್ರಥಮ ಭಾಷೆ ಪರೀಕ್ಷೆ
ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅಧಿಕಾರಿ ಬಿ ಸಿ ನಾಗೇಶ್ ಈ ಕುರಿತು ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪಿಯುಸಿ ವಿದ್ಯಾರ್ಥಿಗಳಿಗೆ MCQ ಮಾದರಿ ಪ್ರಶ್ನೆ ಪತ್ರಿಕೆ!
ಪಿಯುಸಿ (PUC) ವಿದ್ಯಾರ್ಥಿಗಳಿಗೆ ಈಗಾಗಲೇ ವೇಳಾಪಟ್ಟಿ ಬಿಡುಗಡೆಯಾಗಿದ್ದು ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಈ ವರ್ಷ ಪ್ರಶ್ನೆ ಪತ್ರಿಕೆ (Question Paper) ಯಾವ ಮಾದರಿಯಲ್ಲಿ ಬರಲಿದೆ ಎಂದು ತಿಳಿದುಕೊಂಡು ನಂತರ ಅಭ್ಯಾಸ ಮಾಡಿದರೆ ಅವರಿಗೆ ಇನ್ನೂ ಹೆಚ್ಚಿನ ಅಂಕ (Score) ಗಳಿಸಲು ಸಹಕಾರಿಯಾಗುತ್ತದೆ. ಆ ಕಾರಣ ಇಲ್ಲಿ ಪ್ರಶ್ನೆ ಪತ್ರಿಕೆ ಯಾವ ಮಾದರಿಯಲ್ಲಿರಲಿದೆ ಎಂದು ತಿಳಿಸಲಾಗಿತ್ತಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ. ಪ್ರತಿ ವರ್ಷವೂ ಲಿಖಿತ ರೂಪದಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವ ಮೂಲಕ ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ಬಾರಿ ದೀರ್ಘ ಉತ್ತರಗಳೊಟ್ಟಿಗೆ ಬಹು ಆಯ್ಕೆಯ (Multiple Choice Questions) ಪ್ರಶ್ನೆಗಳನ್ನೂ ಸಹ ಇಡುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ, ಪಿಯುಸಿ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ
ರಾಜ್ಯ ಸರ್ಕಾರವು 15-20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು (MCQ) ಪರಿಚಯಿಸುವುದರೊಂದಿಗೆ ಪೂರ್ವ-ವಿಶ್ವವಿದ್ಯಾಲಯ (PU) ಪರೀಕ್ಷಾ ವ್ಯವಸ್ಥೆಯಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ