ಹುಬ್ಬಳ್ಳಿ (ಜು.07) : ವಾಸ್ತು ತಜ್ಞ ಚಂದ್ರಶೇಖರ ಗುರೂಜಿ (Chandrashekar Guruji) ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ (State Government) ಗಂಭೀರವಾಗಿ ತೆಗೆದುಕೊಂಡಿದೆ. ಪೊಲೀಸರಂತೂ ಘಟನೆ ನಡೆದ ನಾಲ್ಕೇ ತಾಸಿನಲ್ಲಿ ಆರೋಪಿಗಳ (Accused) ಹೆಡೆಮುರಿ ಕಟ್ಟಿದ್ದರು. ಇದೀಗ ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ತೀವ್ರಗೊಳಿಸಿದ್ದಾರೆ. ಇದು ಹೀಗಿರುವಾಗಲೇ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಹುಬ್ಬಳ್ಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದರು.
ಭದ್ರತಾ ಲೋಪದ ಬಗ್ಗೆ ಅಲೋಕ್ ಕುಮಾರ್ ಗರಂ
ಹುಬ್ಬಳ್ಳಿಯ ಉಣಕಲ್ ಬಳಿಯ ಪ್ರೆಸಿಡೆಂಟ್ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಹತ್ಯೆಯ ಬಗ್ಗೆ ಮಾಹಿತಿ ಪಡೆದ ಅಲೋಕ್ ಕುಮಾರ್, ಹೋಟೆಲ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಹೋಟೆಲ್ ನ ಭದ್ರತಾ ಲೋಪದ ಬಗ್ಗೆ ಅಲೋಕ್ ಕುಮಾರ್ ಗರಂ ಆಗಿದ್ದಾರೆ. ಹತ್ಯೆ ನಡೆದ ಸ್ಥಳದ ಬಗ್ಗೆ ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳುವ ಜೊತೆಗೆ ಪೊಲೀಸ್ ಅಧಿಕಾರಿಗಳಿಂದಲೂ ಹೆಚ್ಚಿನ ವಿವರ ಪಡೆಯುತ್ತಿದ್ದಾರೆ.
ಹುಬ್ಬಳ್ಳಿಯ ಕೆಲ ಸ್ಟಾರ್ ಹೋಟೆಲ್ ಗಳಿಗೂ ಭೇಟಿ
ಪ್ರೆಸಿಡೆಂಟ್ ಹೋಟೆಲ್ ನಂತರ ಹುಬ್ಬಳ್ಳಿಯ ಕೆಲ ಸ್ಟಾರ್ ಹೋಟೆಲ್ ಗಳಿಗೂ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಸ್ಟಾರ್ ಹೋಟೆಲ್ ಗಳಲ್ಲಿ ವಿವಿಐಪಿಗಳೇ ಹೆಚ್ಚಾಗಿ ವಾಸ್ತವ್ಯ ಮಾಡುವ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆಯ ಕುರಿತು ಪರಿಶೀಲನೆ ಮಾಡಿ, ಹೋಟೆಲ್ ಗಳಿಂದ ಮಾಹಿತಿ ಪಡೆದರು. ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಆದಂತೆ ಬೇರೆ ಕಡೆ ಅಹಿತಕರ ಘಟನೆ ನಡೆಯದಿರುವಂತೆ ಅಗತ್ಯ ಭದ್ರತೆ ಕಲ್ಪಿಸುವಂತೆ ಹೋಟೆಲ್ ಆಡಳಿತ ಮಂಡಳಿಗೆ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Guruji Murder Case: ಚಂದ್ರಶೇಖರ್ ಗುರೂಜಿ ಹಂತಕರಿಗೆ ಫುಲ್ ಡ್ರಿಲ್; ಆರೋಪಿಗಳು ಬಾಯ್ಬಿಟ್ರು ಭಯಾನಕ ಸತ್ಯ
ಈ ವೇಳೆ ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತ ಲಾಭೂ ರಾಮ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಮತ್ತೊಂದೆಡೆ ಹಂತಕರಾದ ಮಹಾಂತೇಶ್ ಹಾಗೂ ಮಂಜುನಾಥನ ವಿಚಾರಣೆಯನ್ನು ವಿದ್ಯಾನಗರ ಠಾಣೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಎಸಿಪಿ ವಿನೋದ್ ಮುಕ್ತೆದಾರ್ ನೇತೃತ್ವದಲ್ಲಿ ವಿಚಾರಣೆ ಮುಂದುವರೆಸಲಾಗಿದೆ.
ಸೈಕಲ್ ಡಾಕಿಂಗ್ ಗೆ ಹಾನಿ
ಉದ್ಘಾಟನೆಗೊಳ್ಳುವ ಮೊದಲೇ ಹುಬ್ಬಳ್ಳಿಯಲ್ಲಿ ಸೈಕಲ್ ಡಾಕಿಂಗ್ ಸ್ಟೇಷನ್ ಹಾನಿಗೊಳಗಾಗಲಾರಂಭಿಸಿವೆ. ಕಿಡಿಗೇಡಿಗಳು ಸೈಕಲ್ ಡಾಕಿಂಗ್ ಕೇಂದ್ರಗಳನ್ನು ಹಾಳು ಮಾಡುತ್ತಿದ್ದು, ಅಧಿಕಾರಿಗಳು ಮೌನ ವಹಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಗರದ ಹಲವೆಡೆ ಸೈಕಲ್ ಡಾಕಿಂಗ್ ಸ್ಟೇಷನ್ ನಿರ್ಮಿಸಲಾಗಿದೆ. ಸ್ಮಾರ್ಟ್ ಯೋಜನೆ ಅಡಿ ಡಾಕಿಂಗ್ ಸ್ಟೇಷನ್ ನಿರ್ಮಿಸಲಾಗಿದೆ. ಬೈಸಿಕಲ್ ಸಿಸ್ಟಮ್ ನ ಸೈಕಲ್ ನಿಲ್ಲಿಸುವ ನಿಲ್ದಾಣಗಳನ್ನು ಹಾಳು ಮಾಡಲಾಗಿದೆ.
ಇದನ್ನೂ ಓದಿ: ACB ಬಲೆಗೆ ಬಿದ್ದ ಬಿಬಿಎಂಪಿ BMTF ಅಧಿಕಾರಿ; 1 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬೇಬಿ ವಾಲೇಕರ್
ಉದ್ಘಾಟನೆಗೆ ಮುನ್ನವೇ ಕಿಡಗೇಡಿಗಳಿಂದ ಹಾಳು ಮಾಡುವ ಕೃತ್ಯ ನಡೆದಿದೆ. ತೋಳನ ಕೆರೆ ಬಳಿ ನಿರ್ಮಿಸಲಾದ ಸೈಕಲ್ ಡಾಕಿಂಗ್ ಸ್ಟೇಷನ್ ನ ಯಂತ್ರವನ್ನು ಕಿಡಿಗೇಡಿಗಳು ಕಲ್ಲಿನಿಂದ ಜಜ್ಜಿದ್ದಾರೆ. ಕಲ್ಲಿನಿಂದ ಜಜ್ಜಿ, ಜಖಂಗೊಳಿಸಿ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ