ಹುಬ್ಬಳ್ಳಿ (ಜು. O7) : ಹುಬ್ಬಳ್ಳಿಯಲ್ಲಿ ನಡೆದ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದೆ. ಈಗಾಗಲೇ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿರೋ ಇಬ್ಬರೂ ಆರೋಪಿಗಳು (Accused) ಪೊಲೀಸರ ಎದುರು ತಪ್ಪೊಪಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಂದ ಇಬ್ಬರು ಹಂತಕರಿಗೆ ಫುಲ್ ಡ್ರೀಲ್ ನಡೆದಿದೆ. ವಿಚಾರಣೆ ವೇಳೆ ಮಹಾಂತೇಶ ಶಿರೂರ, ಮಂಜುನಾಥ ಮರೆವಾಡ ಸತ್ಯ ಬಿಚ್ಚಿಟ್ಟಿದ್ದಾರೆ. ಬೇನಾಮಿ ಆಸ್ತಿ ಜೊತೆಗೆ, ಗುರೂಜಿ ತಮಗೆ ನಿರಂತವಾಗಿ ನೀಡ್ತಿದ್ದ ಕಿರುಕುಳದಿಂದ ಬೇಸತ್ತು ಈ ಕೃತ್ಯ ನಡೆಸಿರೋದಾಗಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಗುರೂಜಿಯಿಂದ ಮಾನಸಿಕ ಕಿರುಕುಳ
ಚಂದ್ರಶೇಖರ ಗುರೂಜಿ ಬಳಿಯೇ 10-12 ವರ್ಷ ಕೆಲಸ ಮಾಡಿದ್ದೇವೆ. 2016 ರಲ್ಲೇ ಕೆಲಸ ಬಿಟ್ಟಿದ್ದೇವೆ. ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು. ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ. ಆದ್ರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಸಹ ನಮ್ಮನ್ನ ಬಿಡಲಿಲ್ಲ. ಅಷ್ಟೊಂದು ಕಿರುಕುಳ ನಮಗೆ ಗುರೂಜಿ ನೀಡುತ್ತಿದ್ದರು.
ನಮಗೆ ಬೆದರಿಕೆ ಹಾಕುತ್ತಿದ್ದ ಗುರೂಜಿ
ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲೇ ಯಾವುದೇ ಬಿಜಿನೆಸ್ ಮಾಡಿದರೂ ನಮಗೆ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಕೈ ಹಾಕುತ್ತಿದ್ದರು. ಒಂದಿಲ್ಲೊಂದು ಸಮಸ್ಯೆಯನ್ನು ನಮಗೆ ತಂದೊಡ್ಡುತ್ತಿದ್ದರು ಎಂದು ಚಂದ್ರಶೇಖರ ಗುರೂಜಿ ಬಗ್ಗೆ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ: ACB ಬಲೆಗೆ ಬಿದ್ದ ಬಿಬಿಎಂಪಿ BMTF ಅಧಿಕಾರಿ; 1 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬೇಬಿ ವಾಲೇಕರ್
ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆ
ಗುರೂಜಿ ಕಾರಣಕ್ಕೆ ನಾವು ಹಲವು ಸಮಸ್ಯೆ ಎದುರಿಸಿದ್ದೇವೆ. ಬೇರೆ ಬೇರೆ ಊರುಗಳಲ್ಲಿ ಬಿಜಿನೆಸ್ ಮಾಡಿದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ. ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆ ಎಂದು ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ವಿಚಿತ್ರವೆಂದರೆ ಸಂದಾನಕ್ಕೆಂದು ಕರೆದ ಹಂತಕರು ಗುರೂಜಿಗೆ ಸಾವಿನ ದಾರಿ ತೋರಿಸಿದ್ದಾರೆ. ಕೈಯಲ್ಲಿ ಆಸ್ತಿಯ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಹೋಟೆಲ್ ಗೆ ಬಂದಿದ್ದ ಹಂತಕರು, ಕೊಲೆ ಮಾಡಿದ ನಂತ್ರ ದಾಖಲೆ ಪತ್ರ ಹೋಟೆಲ್‌ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ದಾಖಲೆ ಪತ್ರಗಳ ಒಳಗೆ ಚಾಕು ಅಡಗಿಸಿಟ್ಟುಕೊಂಡು ಬಂದಿದ್ದ ಹಂತಕರು, ಹತ್ಯೆ ನಂತರ ದಾಖಲೆ ಬಿಟ್ಟು ಎಸ್ಕೇಪ್ ಆಗಿದ್ದರು.
ಗುರೂಜಿಯ ಬರ್ಬರ ಹತ್ಯೆ
ಅಲ್ಲದೇ ಒಂದು ಚಾಕನ್ನು ಹಂತಕರು ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಎಸೆದಿದ್ದರು. ಕಸದ ರಾಶಿಯಲ್ಲಿ ಎಸೆದ ಚಾಕನ್ನು ಖಾಕಿ ಪಡೆ ವಶಪಡಿಸಿಕೊಂಡಿದೆ. ಇನ್ನೊಂದು ಚಾಕನ್ನು ಮಾರ್ಗ ಮಧ್ಯೆ ಎಸೆದಿದ್ದಾರೆ ಎಂದು ತಿಳಿದು ಬಂದಿದ್ದು, ಅದಕ್ಕಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಗುರೂಜಿಯ ಬರ್ಬರ ಹತ್ಯೆಯಾಗಿತ್ತು.
ಇದನ್ನೂ ಓದಿ: Mangaluru: ನಿಲ್ಲದ ಮಳೆಯ ಆರ್ಭಟ, ಕಾರ್ಮಿಕರು ವಾಸವಿದ್ದ ಶೆಡ್ ಮೇಲೆ ಗುಡ್ಡ ಕುಸಿತ: ಮೂವರ ಸಾವು
40 ಸೆಕೆಂಡ್ ಗಳಲ್ಲಿ 54 ಬಾರಿ ಇರಿದಿದ್ದ ಕಿರಾತಕರು
ಚಂದ್ರಶೇಖರ ಗುರೂಜಿ ಶವದ ಮರಣೋತ್ತರ ಪರೀಕ್ಷೆಯ ಎಕ್ಸ್‌ಕ್ಲ್ಯೂಸಿವ್ ಮಾಹಿತಿ ಲಭ್ಯವಾಗಿದೆ. ದೇಹದಲ್ಲಿ 54 ಬಾರಿ ಚಾಕು ಹೊಕ್ಕಿರುವ ಅಂಶ ದೃಢಪಟ್ಟಿದೆ. 40 ಸೆಕೆಂಡ್‌ನಲ್ಲಿ 54 ಬಾರಿ ಚಾಕುವಿನಿಂದ ಚುಚ್ಚಿದ್ದ ಹಂತಕರು, ಕತ್ತನ್ನೂ ಕೊಯ್ಯಲು ಯತ್ನಿಸಿದ್ದರು. ಎದೆ, ಕುತ್ತಿಗೆ, ಶ್ವಾಸಕೋಶ, ಕಾಲು, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ದೇಹದ ಹಿಂಭಾಗದಲ್ಲಿಯೂ ಹಂತಕರು ಚಾಕುವಿನಿಂದ ಇರಿದಿದ್ದರು.
ಚಾಕು 2-3 ಸೆಂಟಿಮೀಟರ್ ದೇಹದ ಒಳಗೆ ಪ್ರವೇಶ ಮಾಡಿದೆ. ಅದಲ್ಲದೇ ಕುತ್ತಿಗೆ ಭಾಗದಲ್ಲಿ ಹಂತಕರು ಚಾಕುವಿನಿಂದ 12 ಇಂಚು ಹರಿದಿದ್ದಾರೆ. 54 ಬಾರಿ ಚಾಕು ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ, ಚಾಕು ಇರಿದ ಮೂರು ನಿಮಿಷಗಳಲ್ಲಿಯೇ ಗುರೂಜಿ ಉಸಿರು ಚೆಲ್ಲಿದ್ದಾರೆ. ಸತತ 2 ಗಂಟೆ 40 ನಿಮಿಷಗಳ ಕಾಲ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ಬಿರಾದಾರ ರಿಂದ ಮರಣೋತ್ತರ ಪರೀಕ್ಷೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ