• Home
 • »
 • News
 • »
 • state
 • »
 • Chandrashekar Death: ಇದೊಂದು ವ್ಯವಸ್ಥಿತ ಕೊಲೆ; ನನ್ನ ಮೇಲಿನ ದ್ವೇಷಕ್ಕೆ ಮಗನ ಬಲಿ ಪಡೆದ್ರು- ರೇಣುಕಾಚಾರ್ಯ

Chandrashekar Death: ಇದೊಂದು ವ್ಯವಸ್ಥಿತ ಕೊಲೆ; ನನ್ನ ಮೇಲಿನ ದ್ವೇಷಕ್ಕೆ ಮಗನ ಬಲಿ ಪಡೆದ್ರು- ರೇಣುಕಾಚಾರ್ಯ

ಶಾಸಕ ರೇಣುಕಾಚಾರ್ಯ ಕಣ್ಣೀರು

ಶಾಸಕ ರೇಣುಕಾಚಾರ್ಯ ಕಣ್ಣೀರು

ನನ್ನ ಮೇಲಿನ ದ್ವೇಷದಿಂದ ಮಗನ ಬಲಿ ಪಡೆದಿದ್ದಾರೆ. ಅವರಿಗೆ ದ್ವೇಷ ಇದ್ದಿದ್ದರೆ ನನ್ನ ಬಲಿ ಪಡೆಯಬೇಕಿತ್ತು. ಈಗ ನನ್ನ ಮಗನ ಕೊಲೆ ಮಾಡಿದ್ದಾರೆ. ನನಗೆ ತುಂಬಾ ನೋವಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ದಾವಣಗೆರೆ (ನ. 03): ಸಹೋದರನ ಮಗನ (Brother Son) ಸಾವು ಬರೀ ಅಪಘಾತವಲ್ಲ ಎನ್ನುವ ಅನುಮಾನವನ್ನು ಶಾಸಕ ರೇಣುಕಾಚಾರ್ಯ  ವ್ಯಕ್ತಪಡಿಸಿದ್ದಾರೆ. ನನ್ನ ಮೇಲಿನ ದ್ವೇಷದಿಂದ ನನ್ನ ಸಹೋದರನ ಪುತ್ರ ಚಂದ್ರಶೇಖರ್‌ನನ್ನು ಬಲಿ ಪಡೆದಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ಗಂಭೀರ ಆರೋಪ ಮಾಡಿದ್ದಾರೆ. ಚಂದ್ರಶೇಖರ್ (Chandrashekar) ಕಾರಿನ ಬಿಡಿಭಾಗ ಕಾಲುವೆ ಬಳಿ ಪತ್ತೆಯಾಗ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ರೇಣುಕಾಚಾರ್ಯ, ಪುತ್ರನ ಶವ ಕಂಡು ಬಿಕ್ಕಿಬಿಕ್ಕಿ ಅತ್ತರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. 


  ನನ್ನ ಮೇಲಿನ ದ್ವೇಷಕ್ಕೆ ಮಗನನ್ನು ಬಲಿ ಪಡೆದ್ರು


  ತಮ್ಮ ಮನೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ನನ್ನ ಮೇಲಿನ ದ್ವೇಷದಿಂದ ಮಗನ ಬಲಿ ಪಡೆದಿದ್ದಾರೆ. ಅವರಿಗೆ ದ್ವೇಷ ಇದ್ದಿದ್ದರೆ ನನ್ನ ಬಲಿ ಪಡೆಯಬೇಕಿತ್ತು. ಈಗ ನನ್ನ ಮಗನ ಕೊಲೆ ಮಾಡಿದ್ದಾರೆ. ನನಗೆ ತುಂಬಾ ನೋವಿದೆ. ಚಂದ್ರಶೇಖರ್ ಹೋಗುವಾಗ ಕೇಸರಿ ಶಾಲ್ ಹಾಕಿಕೊಂಡು ಹೋಗಿದ್ದ. ನಾನು ಆರಂಭದಿಂದಲೂ ಹೇಳುತ್ತಿದ್ದೆ ಇದೊಂದು ಕಿಡ್ನಾಪ್​ ಪ್ರಕರಣ ಅಂತ. ಇದೊಂದು ವ್ಯವಸ್ಥಿತ ಕೊಲೆಯಾಗಿದೆ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.


  some doubts on bjp mla renukacharya brother son chandrashekhar dead body found in tunga canal pvn
  ಚಂದ್ರಶೇಖರ್​ ಸಾವಿನ ಸುತ್ತ ಅನುಮಾನ!?


  ಸಚಿವರು, ಸಿಎಂ ಸೂಕ್ತ ತನಿಖೆಗೆ ಆಗ್ರಹಿಸಲಿ


  ಚಂದ್ರಶೇಖರ್​ನನ್ನು ಪೋನ್​ ಮಾಡಿ ಕರೆಸಿಕೊಂಡಿದ್ದಾರೆ. ಗೌರಿಗದ್ದೆ ಹೋಗುತ್ತೇನೆಂದು ಅವರ ಕುಟುಂಬಸ್ಥರಿಗೆ ಹೇಳಿ ಹೋಗಿದ್ದ. ಆತ ತುಂಬಾ ಸಭ್ಯನಿದ್ದ. ಆತನಿಗೆ ಯಾವುದೇ ಶತ್ರುಗಳಿರಲಿಲ್ಲ ಯಾರಿಗೂ ಕೂಡ ದೊಡ್ಡ ದನಿಯಿಂದ ಕೂಡ  ಮಾತನಾಡದ ಮೃದು ಸ್ವಭಾವಿ. ನಮ್ಮ ಮನೆಯ ದೀಪ ಆರಿದೆ. ಮುಖ್ಯಮಂತ್ರಿ, ಗೃಹ ಸಚಿವರು ಈ ಘಟನೆಯ ಬಗ್ಗೆ ತನಿಖೆ ನಡೆಸಲಿ ಎಂದು ರೇಣುಕಾಚಾರ್ಯ ಹೇಳಿದರು.


  ಇದನ್ನೂ ಓದಿ: Renukacharya: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್​ ಶವ ಪತ್ತೆ, ಕಾಲುವೆಯಲ್ಲಿ ಬಿದ್ದಿದ್ದ ಕಾರು


  ಚಂದ್ರಶೇಖರ್ ಕಾರು ಕಾಲುವೆಗೆ ಹೇಗೆ ಬಿತ್ತು?


  ಇನ್ನು ಘಟನಾ ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ.ರಿಷ್ಯಂತ್‌ ಭೇಟಿ ನೀಡಿದ್ದು, ಚಂದ್ರಶೇಖರ್‌ ಮೃತದೇಹವನ್ನು ಪೊಲೀಸರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾರೆ. ಆದ್ರೆ, ಚಂದ್ರಶೇಖರ್ ಕಾರು ಕಾಲುವೆಗೆ ಹೇಗೆ ಬಿತ್ತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  ಚಂದ್ರಶೇಖರ್​ ಸಾವಿನ ಹಿಂದಿರುವ ಪ್ರಶ್ನೆ!


  ಅಪಘಾತ ಆದ ಕಾರಿನಲ್ಲಿ ಶವ ಹಿಂದಕ್ಕೆ ಹೋಗಿದ್ಯಾಕೆ..?
  ಮುಂಭಾಗದಲ್ಲಿ ಕಾರ್​ನ ಏರ್​ಬ್ಯಾಗ್​ ಓಪನ್​ ಆಗಿದ್ಹೇಗೆ..?
  ಬಾನೆಟ್​​ ಚೆನ್ನಾಗಿದೆ, ಆದರೂ ಗ್ಲಾಸ್​ ಒಡೆದಿದ್ದು ಹೇಗೆ..?
  ಮುಂಭಾಗದ ಗ್ಲಾಸ್​ ಒಡೆದು ಯಾರಾದ್ರೂ ಹೊರಬಂದ್ರಾ..?
  ಒಬ್ಬರೇ ಇದ್ದಾಗ ಎರಡು ಏರ್​ಬ್ಯಾಗ್​ ಓಪನ್​ ಆಗಿದ್ಹೇಗೆ..?
  ಏರ್​​ಬ್ಯಾಗ್ ಓಪನ್ ಆಗಿದೆ ಅಂದ್ರೆ ಗುದ್ದಿದೆ ಅಲ್ವಾ?
  ಗುದ್ದಿ ಡ್ಯಾಮೇಜ್ ಆಗಿರೋ ಜಾಗ ಕೂಡ ಪತ್ತೆಯಾಗಬೇಕಲ್ವಾ?
  ಇದುವರೆಗೂ ಡ್ಯಾಮೇಜ್ ಆಗಿರುವ ಜಾಗ ಯಾಕೆ ಕಾಣಿಸ್ತಿಲ್ಲ?


  ಎಲ್ಲಾ ಆಯಾಮಗಳಲ್ಲೂ ತನಿಖೆ


  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಕಾಲುವೆಯಲ್ಲಿ ಪಲ್ಟಿಯಾಗಿದ್ದ ಕಾರಿನಲ್ಲಿ ಮೃತದೇಹ ಪತ್ತೆ ಆಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತದೆ ಎಂದು ಹೇಳಿದ್ರು.


  ಇದನ್ನೂ ಓದಿ: Chandrashekar Death: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಕೊಲೆಯೋ? ಅಪಘಾತವೋ?


  ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ


  ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್‌ ಶವ ಪತ್ತೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರತಿಕ್ರಿಯಿಸಿದ್ದಾರೆ.  ಕುಟುಂಬಸ್ಥರು ನೀಡುವ ದೂರಿನಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಶಾಸಕ ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಈ ವೇಳೆ ಚಂದ್ರಶೇಖರ್‌ ತಂದೆಯ ಅಭಿಪ್ರಾಯ ಪಡೆಯುತ್ತೇವೆ ಎಂದರು.
  Published by:ಪಾವನ ಎಚ್ ಎಸ್
  First published: