• Home
  • »
  • News
  • »
  • state
  • »
  • Chandrashekhar Death: ಚಂದ್ರಶೇಖರ್ ನಿಗೂಢ ಸಾವು; ಪ್ರಕರಣದ ತನಿಖೆ ಸಿಐಡಿ ಹೆಗಲೇರುವ ಸಾಧ್ಯತೆ

Chandrashekhar Death: ಚಂದ್ರಶೇಖರ್ ನಿಗೂಢ ಸಾವು; ಪ್ರಕರಣದ ತನಿಖೆ ಸಿಐಡಿ ಹೆಗಲೇರುವ ಸಾಧ್ಯತೆ

ಚಂದ್ರಶೇಖರ್

ಚಂದ್ರಶೇಖರ್

ಬುಧವಾರ ಬೆಳಗ್ಗೆ 9 ಗಂಟೆಗೆ ಹೊನ್ನಾಳಿಯ ರೇಣುಕಾಚಾರ್ಯ ಅವರ ನಿವಾಸಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಕರಣವನ್ನು ಸಿಐಡಿಗೆ ನೀಡುವ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.

  • Share this:

ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ (BJP MLA MP Renukacharya) ಸೋದರ ರಮೇಶ್ ಪುತ್ರ ಚಂದ್ರಶೇಖರ್ (Chandrashekhar Death) ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಶಾಸಕ ರೇಣುಕಾಚಾರ್ಯ ಸೇರಿದಂತೆ ಕುಟುಂಸ್ಥರು ಇದೊಂದು ವ್ಯವಸ್ಥಿತವಾದ ಕೊಲೆ (Murder Allegation) ಎಂದು ಆರೋಪಿಸುತ್ತಿದ್ದಾರೆ. ಆದ್ರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ (Primary Investigation) ಇದೊಂದು ಅಪಘಾತ (Accident Death) ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ರೇಣುಕಾಚಾರ್ಯ ಅವರು ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ಚಂದ್ರಶೇಖರ್ ಅಲಿಯಾಸ್ ಚಂದ್ರು ಸಾವಿನ ಪ್ರಕರಣವನ್ನು ಸಿಐಡಿಗೆ (CID) ನೀಡಲು ಸರ್ಕಾರ ಮುಂದಾಗಿರುವ ಮಾಹಿತಿ ನ್ಯೂಸ್​ 18 ಕನ್ನಡಕ್ಕೆ ಲಭ್ಯವಾಗಿದೆ.


ಬುಧವಾರ ಬೆಳಗ್ಗೆ 9 ಗಂಟೆಗೆ ಹೊನ್ನಾಳಿಯ ರೇಣುಕಾಚಾರ್ಯ ಅವರ ನಿವಾಸಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಕರಣವನ್ನು ಸಿಐಡಿಗೆ ನೀಡುವ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.


ರೇಣುಕಾಚಾರ್ಯ ಜೊತೆ ಚರ್ಚೆ


ಪೊಲೀಸ್ ತನಿಖೆ ಬಗ್ಗೆ ಕುಟುಂಬದವರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲು ಸರ್ಕಾರದ ಮೇಲೆ ಒತ್ತಡ ತರಲು ಚಂದ್ರಶೇಖರ್ ಕುಟುಂಬಸ್ಥರು ಶಾಸಕ ರೇಣುಕಾಚಾರ್ಯ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.


ಪೊಲೀಸರ ಕೈ ಸೇರಿದ ಡಯಾಟಮ್ ವರದಿ


ಈ ನಡುವೆ ಚಂದ್ರಶೇಖರ್ ಸಾವು ಸಹಜವೋ, ಅಸಹಜವೋ ಅಂತ ತಿಳಿಯಲು ಡಯಾಟಮ್ ವರದಿ ನಡೆಸಲಾಗಿತ್ತು. ಇದೀಗ ಡಯಾಟಮ್ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದೆ.


ಚಂದ್ರಶೇಖರ್ ಶ್ವಾಸಕೋಶದ ಒಳಗೆ ನೀರು ಇರೋದು ಡಯಾಟಮ್ ವರದಿ ಖಚಿತಪಡಿಸಿದೆ ಎಂದು ನ್ಯೂಸ್ 18ಗೆ ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.


ಎಫ್‌ಎಸ್ಎಲ್‌ ವರದಿಗಾಗಿ ಕಾಯುತ್ತಿರುವ ಪೊಲೀಸರು


ಇನ್ನು FSL ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ಎಲ್ಲಾ ವರದಿ ಬಂದ ಮೇಲೆ ಸಾವು ಸಹಜವೋ, ಅಸಹಜವೋ ಎಂದು ತಿಳಿಯಲಿದೆ. ಸದ್ಯ ಚಂದ್ರು ನಿಗೂಢ ಸಾವಿನ ಇಂಚಿಂಚು ಮಾಹಿತಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಪಡೆಯುತ್ತಿದ್ದಾರೆ.


ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಚಂದ್ರಶೇಖರ್?


ಈ ಎಲ್ಲಾ ಬೆಳವಣಿಗೆಗಳ ನಡುವೆ ಚಂದ್ರು ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ನಾ ಅನ್ನೋದು ಆತನ ತಂದೆಯ ಹೇಳಿಕೆ ಅನುಮಾನ ಮೂಡಿಸಿದೆ. ಚಂದ್ರು ಅಲಿಯಾಸ್ ಚಂದ್ರಶೇಖರ್ ಶವ ಪತ್ತೆಯಾದಾಗ ಆತನ ಒಳಉಡುಪು ಇರಲಿಲ್ಲ. ಆತನ ಕಿವಿ ಕಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್ ಅವರ ತಂದೆಯ ಈ ಹೇಳಿಕೆ ಒಂದಿಷ್ಟು ಅನುಮಾನಗಳಿಗೆ ಕಾರಣವಾಗಬಹುದು.


ಇದನ್ನೂ ಓದಿ:  Chandrashekar Death: ಆಶ್ರಮಕ್ಕೆ ಬಂದ ಚಂದ್ರಶೇಖರ್​ಗೆ ವಿನಯ್​ ಗುರೂಜಿ ಹೇಳಿದ್ದೇನು? ಸಾವಿನ ಬಗ್ಗೆ ಸುಳಿವು ಕೊಟ್ಟಿದ್ರಾ ಅವಧೂತರು?


ಸೋದರನ ಹೇಳಿಕೆಗೆ ಪ್ರತಿಕ್ರಿಯೆ ನೀಡದ ರೇಣುಕಾಚಾರ್ಯ


ಇನ್ನು ಸೋದರನ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಶಾಸಕರಾದ ರೇಣುಕಾಚಾರ್ಯ ಹಿಂದೇಟು ಹಾಕಿದ್ದಾರೆ. ಪೊಲೀಸರು ಕಿರಣ್ ಮತ್ತು ಆತನ ಸ್ನೇಹಿತರನ್ನು ಚೆನ್ನಾಗಿ ವಿಚಾರಣೆ ನಡೆಸಿಲ್ಲ. ಇದರ ಜೊತೆಗೆ ಪಂಚನಾಮೆ ವೇಳೆಯೂ ನಮಗೆ ಮಾಹಿತಿ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ.


ಗೆಳೆಯರ ಭೇಟಿಗೆ ಯತ್ನಿಸಿದ್ದ ಚಂದ್ರಶೇಖರ್?


ಅಕ್ಟೋಬರ್ 30ರಂದ ಚಂದ್ರಶೇಖರ್ ತನ್ನ ಆಪ್ತ ಗೆಳೆಯರನ್ನು ಭೇಟಿಯಾಗಲು ಯತ್ನಿಸಿದ್ರು ಎನ್ನಲಾಗಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಶೇಖರ್ ಗೆಳೆಯ ಚರಣ್, ಅಂದು ರಾತ್ರಿ 11.30ವರೆಗೂ ನನ್ನ ಜೊತೆಯೇ ಚೆನ್ನಾಗಿ ಮಾತಾಡಿದ್ದನು. ಅಂದು ಸಹಜವಾಗಿ ಮತ್ತು ಶಾಂತವಾಗಿಯೇ ನನ್ನ ಜೊತೆಯಲ್ಲಿ ಮಾತನಾಡಿದ್ದನು ಎಂದು ಹೇಳಿದ್ದಾರೆ.


ಇದನ್ನೂ ಓದಿ:  Chandrashekhar Death-Pratham: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಡ್ಯಾನ್ಸ್ ವಿಡಿಯೋ ಹಂಚಿಕೊಂಡ ಪ್ರಥಮ್!


ಇನ್ನು ಉತ್ತಮ್ ಎಂಬವರು ಮಾತನಾಡಿ, ಅಕ್ಟೋಬರ್ 30ರಂದು ನಾನು ಸಹ ಗೌರಿಗದ್ದೆಗೆ ಹೋಗಬೇಕಿತ್ತು. ಆದ್ರೆ ಅನಾರೋಗ್ಯದ ಹಿನ್ನೆಲೆ ನಾನು ಅಲ್ಲಿಗೆ ಹೋಗಲಿಲ್ಲ. ಇದೇ ವೇಳೆ ಚಂದ್ರು ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದರು.

Published by:Mahmadrafik K
First published: