ರಾಯಚೂರಿನ ಚಂದ್ರಬಂಡಾ ಗ್ರಾ.ಪಂ.​ನಲ್ಲಿ ತನಿಖಾ ವರದಿಯ ಕಡತಗಳೇ ಮಾಯ !

13 ಮತ್ತು 14 ನೇ ಹಣಕಾಸು ಯೋಜನೆಯ ಹಣದ ಅವ್ಯವಹಾರವಾಗಿದ್ದು, 28 ಲಕ್ಷ ರೂಪಾಯಿ ಹಣ ದುರ್ಬಳಕೆ ಆಗಿರುವ ವಿಚಾರ ತನಿಖೆ ವೇಳೆ ಬಯಲಾಗಿತ್ತು. ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯದೆಯೇ ಹಣ ಖರ್ಚು ಮಾಡಿ ಅಕ್ರಮ ಎಸಗಲಾಗಿತ್ತು.

news18-kannada
Updated:January 25, 2020, 4:34 PM IST
ರಾಯಚೂರಿನ ಚಂದ್ರಬಂಡಾ ಗ್ರಾ.ಪಂ.​ನಲ್ಲಿ ತನಿಖಾ ವರದಿಯ ಕಡತಗಳೇ ಮಾಯ !
ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿ
  • Share this:
ರಾಯಚೂರು(ಜ. 25): ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತ್​ ನಲ್ಲಿ ನಡೆದ ಅಕ್ರಮ ಕುರಿತ ತನಿಖಾ ವರದಿಯ ಕಡತಗಳು ಜಿಲ್ಲಾ ಪಂಚಾಯತ್ ಕಚೇರಿಯಲ್ಲೇ ಮಾಯವಾಗಿರುವ ಘಟನೆ ನಡೆದಿದೆ. 

ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಶರಫನ್ನೂಶಾ ಬೇಗಂ ವಿರುದ್ದ ಚಂದ್ರಬಂಡಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಹುಲಿಗೆಮ್ಮ ದೂರು ನೀಡಿದ್ದರು. ದೂರಿನ ಹಿನ್ನೆಲೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ತನಿಖೆ ನಡೆಸಿದ್ದರು. 13 ಮತ್ತು 14 ನೇ ಹಣಕಾಸು ಯೋಜನೆಯ ಹಣದ ಅವ್ಯವಹಾರವಾಗಿದ್ದು, 28 ಲಕ್ಷ ರೂಪಾಯಿ ಹಣ ದುರ್ಬಳಕೆ ಆಗಿರುವ ವಿಚಾರ ತನಿಖೆ ವೇಳೆ ಬಯಲಾಗಿತ್ತು. ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯದೆಯೇ ಹಣ ಖರ್ಚು ಮಾಡಿ ಅಕ್ರಮ ಎಸಗಲಾಗಿತ್ತು.

ಈ‌ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮಾಡದವರಿಗೂ ಹಣ ಪಾವತಿಸಿ ಅಕ್ರಮ ಎಸಗಲಾಗಿತ್ತು. ಅಲ್ಲದೇ, ಕೂಲಿ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡದೆ ವಂಚಿಸಿರುವುದೂ ಕೂಡ ತನಿಖೆಯಿಂದ ಬಯಲಾಗಿತ್ತು.

2011 ರಿಂದ ನಡೆದ ಅಕ್ರಮದ ಬಗ್ಗೆ 2015 ರಲ್ಲಿ ತನಿಖಾಧಿಕಾರಿಗಳು ಜಿಲ್ಲಾ ಪಂಚಾಯತಿಗೆ ತನಿಖಾ ವರದಿ ಸಲ್ಲಿಸಿದ್ರು. ಆದ್ರೆ ಆ ತನಿಖಾ ವರದಿ ಕಾಣೆಯಾದ ಹಿನ್ನೆಲೆಯಲ್ಲಿ ಇದುವರೆಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿರುದ್ದ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಪ್ರಕರಣವನ್ನ ಜಿಲ್ಲಾ ಪಂಚಾಯತ್​ ಸಿಇಓ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಸಚಿವ ಸಂಪುಟ ವಿಸ್ತರಣೆ ವಿಳಂಬ - ಗಂಡುಮೆಟ್ಟಿನ ನಾಡಿನ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ ; ಸಿಎಂ ಕಾಲೆಳೆದ ಪುಟ್ಟರಾಜು

ತನಿಖಾ‌ ವರದಿ ಮಾಯವಾಗಿರುವುದರಿಂದ ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗಳ ಮೇಲೆ ಅನುಮಾನದ ಹುತ್ತ ಬೆಳೆದಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಂಬಂಧಿಸಿದ ಕಡತವನ್ನು ಹುಡುಕಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
First published: January 25, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading