ಎಲ್ಲರಿಗೂ ಚರ್ಚೆ ಮಾಡುವ ಅವಕಾಶ ಕೊಡಬೇಕಿದೆ ಹಾಗಾಗಿ ಸೋಮವಾರ ಕೂಡ ಚರ್ಚೆ ನಡೆಯಲಿದೆ : ಹೆಚ್​ ಕೆ ಪಾಟೀಲ್

ಸದನದಲ್ಲಿ ವಿಶ್ವಾಸ ಮತದ ಮೇಲೆ ಚರ್ಚೆಗಳು ನಡೆದಿವೆ. ಬಹಳಷ್ಟು ಸದಸ್ಯರು ಚರ್ಚೆ ಮುಂದುವರಿಸಬೇಕೆಂದು ಒತ್ತಾಯ ಮಾಡಿದ್ದಾರೆ ಹಾಗಾಗಿ ಸೋಮವಾರಕ್ಕೆ ಸದನ ಮುಂದೂಡಬಹುದು ಚರ್ಚೆ ಮುಗಿದು, ಮತಕ್ಕೆ ಅವಕಾಶ ಸಿಗುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು​ ಹೇಳಿದರು.

G Hareeshkumar | news18
Updated:July 19, 2019, 9:02 PM IST
ಎಲ್ಲರಿಗೂ ಚರ್ಚೆ ಮಾಡುವ ಅವಕಾಶ ಕೊಡಬೇಕಿದೆ ಹಾಗಾಗಿ ಸೋಮವಾರ ಕೂಡ ಚರ್ಚೆ ನಡೆಯಲಿದೆ : ಹೆಚ್​ ಕೆ ಪಾಟೀಲ್
ಹೆಚ್​.ಕೆ.ಪಾಟೀಲ್
  • News18
  • Last Updated: July 19, 2019, 9:02 PM IST
  • Share this:
ಬೆಂಗಳೂರು (ಜುಲೈ 19) : ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಎರಡನೇ ಪತ್ರ ಕಳುಹಿಸಿದ್ದಾರೆ. ಆದರೆ ಸಂವಿಧಾನದಲ್ಲಿ ಯಾರ ಹಕ್ಕನ್ನು ಕಿತ್ತುಕೊಳ್ಳಬಾರದು ಎಂದು ಮಾಜಿ ಸಚಿವ ಹೆಚ್​ ಕೆ ಪಾಟೀಲ್​​ ಹೇಳಿದರು.

ಸದನದಲ್ಲಿ ಎಲ್ಲರಿಗೂ ಚರ್ಚೆ ಮಾಡುವ ಅವಕಾಶ ಕೊಡಬೇಕಿದೆ ಹಾಗಾಗಿ ಸೋಮವಾರ ಕೂಡ ಚರ್ಚೆ ನಡೆಯಲಿದೆ. ಧ್ವನಿ ಮತದ ಮೂಲಕ ಮೊದಲು ಮತದಾನ ನಡೆಯಲಿದೆ. ನಂತರ ಒತ್ತಾಯ ಬಂದಲ್ಲಿ ಡಿವಿಜನ್ ಗೆ ಅವಕಾಶ ಸಿಗಲಿದೆ ಎಂದರು.

ಸದನದಲ್ಲಿ ವಿಶ್ವಾಸ ಮತದ ಮೇಲೆ ಚರ್ಚೆಗಳು ನಡೆದಿವೆ. ಬಹಳಷ್ಟು ಸದಸ್ಯರು ಚರ್ಚೆ ಮುಂದುವರಿಸಬೇಕೆಂದು ಒತ್ತಾಯ ಮಾಡಿದ್ದಾರೆ ಹಾಗಾಗಿ ಸೋಮವಾರಕ್ಕೆ ಸದನ ಮುಂದೂಡಬಹುದು ಚರ್ಚೆ ಮುಗಿದು, ಮತಕ್ಕೆ ಅವಕಾಶ ಸಿಗುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು​ ಹೇಳಿದರು.

ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಲು ಅವಕಾಶ  

ಅತೃಪ್ತ ಶಾಸಕರು ಬೇರೆ ರಾಜ್ಯದ ಮುಂಬೈನಲ್ಲಿ ಹೋಗಿ ಕೂರುವ ಬದಲು ರಾಜ್ಯಕ್ಕೆ ವಾಪಸ್‌ ಬರಲಿ. ಇಲ್ಲಿ ರಕ್ಷಣೆ ಇಲ್ಲವೆಂಬ ಆತಂಕದಿಂದ ಹೋಗಿದ್ದರೂ ಕೂಡ ವಾಪಸ್‌ ಬಂದರೆ ನಾವೇ ಸದನಕ್ಕೆ ಹಾಜರಾಗಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು.

ವಿಶ್ವಾಸಮತ ಯಾಚನೆ ಮೇಲೆ ನಡೆದ ಭಾಷಣದಲ್ಲಿ, ಎಲ್ಲರ ಅಭಿಪ್ರಾಯ ತೆಗೆದುಕೊಂಡಿದ್ದೀರಿ. ಚರ್ಚೆ ಮುಂದುವರಿಸಲೇಬೇಕು ಎಂದು ಮನವರಿಕೆಯಾಗಿದೆ. ನಮ್ಮ ಶಾಸನಸಭೆಯ ಸದಸ್ಯರಿಗೆ ನಾವು ರಕ್ಷಣೆ ಕೊಡಲು ನಮ್ಮ ಸರ್ಕಾರದಿಂದ ಸಾಧ್ಯವಿಲ್ಲವಾ?  ಸದನದಲ್ಲಿ ಹಾಜರಾಗಲು ನಿಮಗೆಲ್ಲ ಅವಕಾಶ ಮಾಡಿಕೊಡುತ್ತೇವೆ ಎಂದು ಅವರಿಗೆ ಮನವರಿಗೆ ಮಾಡಿಕೊಡಬೇಕಿದೆ ಎಂದರು.

 ಇದನ್ನೂ ಓದಿರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಾಧ್ಯವೇ ಇಲ್ಲ; ನ್ಯೂಸ್​ 18ಗೆ ಉನ್ನತ ಮೂಲಗಳಿಂದ ಮಾಹಿತಿಇಲ್ಲದಿದ್ದರೆ ಇಷ್ಟು ಬಹಿರಂಗವಾಗಿ ಮುಂಬೈನಲ್ಲೇ ಇರಲು ನಿರ್ಧರಿಸಿದರೆ ಇದು ನಮ್ಮ ರಾಜ್ಯದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಸದನದ ಗೌರವ, ಮಹತ್ವವನ್ನು ಎತ್ತಿ ಹಿಡಿಯಲು ಅವರು ನಮ್ಮ ರಾಜ್ಯದಿಂದ ಹೊರಗಿರುವ ಬದಲು ಇಲ್ಲಿಗೆ ಬರುವಂತೆ ಪಕ್ಷದಿಂದ ಅವಕಾಶ ಮಾಡಿಕೊಡುತ್ತೇವೆ. ಕಾನೂನಾತ್ಮಕವಾಗಿ ಹೋರಾಟ ಮಾಡುವುದು ಪಕ್ಷದಿಂದಾಗುತ್ತದೆ. ಆದರೆ ನಾಗರಿಕತೆಯಿಂದ ಅವರು ಇಲ್ಲಿಗೆ ಬರುವಂತೆ ಮಾಡಲು ಇಂತಹದ್ದೊಂದು ಪ್ರಕ್ರಿಯೆಯನ್ನು ನೀವು ಶುರು ಮಾಡಬೇಕು ಎಂದು ಸ್ಪೀಕರ್‌ಗೆ ಮನವಿ ಮಾಡಿದರು. 
First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading