ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು ಚಾಮುಂಡಿ ದೇವಿ ಬಳಿ ನಾರಾಯಣಗೌಡ ಕಟ್ಟಿಕೊಂಡ ಹರಕೆಯೇ ಕಾರಣ! ಅದೇನು ಗೊತ್ತಾ?

ಅಂದುಕೊಂಡಂತೆ ಆಗಿದ್ದಕ್ಕೆ ಇಂದು ನಾರಾಯಣಗೌಡ ಅವರು ಕಟ್ಟಿಕೊಂಡಿದ್ದ ಹರಕೆ ತೀರಿಸಿದ್ದಾರೆ. ಕುಟುಂಬ ಸಮೇತರಾಗಿ ಚಾಮುಂಡಿ ಸನ್ನಿಧಿಗೆ ಬಂದ ನೂತನ ಶಾಸಕ ಕೆ.ಸಿ.ನಾರಾಯಣಗೌಡ ಗೆಲುವಿಗೆ ಕಾರಣರಾದ ದೇವರಿಗೆ ನಮಸಿದ್ದಾರೆ. ಮೆಟ್ಟಿಲು ಹತ್ತಿಕೊಂಡೇ ಚಾಮುಂಡಿಬೆಟ್ಟಕ್ಕೆ ಬಂದು ಹರಕೆ ತೀರಿಸಿದ್ದಾರೆ. 

news18-kannada
Updated:December 20, 2019, 7:49 PM IST
ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು ಚಾಮುಂಡಿ ದೇವಿ ಬಳಿ ನಾರಾಯಣಗೌಡ ಕಟ್ಟಿಕೊಂಡ ಹರಕೆಯೇ ಕಾರಣ! ಅದೇನು ಗೊತ್ತಾ?
ಚಾಮುಂಡಿ ಬೆಟ್ಟದ ಮೆಟ್ಟಿಲ ಬಳಿ ನಾರಾಯಣಗೌಡ ತೆಂಗಿನ ಕಾಯಿ ಒಡೆದರು.
  • Share this:
 ಮೈಸೂರು: ಸಿಎಂ ಬಿ.ಎಸ್. ಯಡಿಯೂರಪ್ಪನವರ ಹುಟ್ಟೂರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಗೆಲುವಿನೊಂದಿಗೆ ಇದೇ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದೆ. ಈ ಗೆಲುವಿನ ಹಿಂದೆ ನಾಡದೇವಿ ಚಾಮುಂಡಿ ತಾಯಿಗೆ ಕಟ್ಟಿಕೊಂಡಿದ್ದ ಹರಕೆ ಹಾಗೂ ಗೆಲುವಿನ ಹಿಂದೆ ಶಕ್ತಿದೇವತೆಯ ವರವೇ ಕಾರಣ ಅನ್ನೋ ಮಾಹಿತಿ ಇದೀಗ ಬಹಿರಂಗವಾಗಿದೆ.

ರಾಜಕಾರಣಿಗಳು ದೇವರ ಮೋರೆ ಹೋಗೋದು ಹಾಗೂ ಚುನಾವಣಾ ಸಂದರ್ಭದಲ್ಲಿ ಟೆಂಪಲ್ ರನ್ ಮಾಡೋದು ಸಹಜ. ಅದೆ ರೀತಿ ಕೆ.ಆರ್.ಪೇಟೆ ಜೆಡಿಎಸ್‌ ಶಾಸಕನಾಗಿದ್ದ ಕೆ.ಸಿ.ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹತೆಯ ಶಿಕ್ಷೆಗೆ ಒಳಗಾದಾಗ ಅವರಿಗೆ ನೆನಪಾಗಿದ್ದು ನಾಡದೇವತೆ ಚಾಮುಂಡೇಶ್ವರಿ. ಅಂದು ತನ್ನ ಅನರ್ಹತೆ ಶಿಕ್ಷೆಯಿಂದ ಪಾರಾಗಲು ಹಾಗೂ ಕೆ.ಆರ್.ಪೇಟೆಯಲ್ಲಿ ಬಿಜೆಪಿಯಿಂದ ಮತ್ತೆ ಸ್ಪರ್ಧಿಸುವ ವಿಚಾರವಾಗಿ ಭಯದಲ್ಲಿದ್ದ ಕೆ.ಸಿ.ನಾರಾಯಣಗೌಡ, ತನ್ನ ಕಷ್ಟದಿಂದ ಪಾರಾಗಲು ಚಾಮುಂಡಿ ಬಳಿ ಹರಕೆ ಕಟ್ಟಿಕೊಂಡಿದ್ದರಂತೆ. ಆ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ನಾರಾಯಣಗೌಡ, ತನಗೆ ಬಂದಿರುವ ಕಷ್ಟ ನಿವಾರಣೆಯಾಗಿ ಕೆ.ಆರ್.ಪೇಟೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದರೆ ನಿನ್ನ ಸೇವೆ ಮಾಡುವುದಾಗಿ ಹರಕೆ ಕಟ್ಟಿಕೊಂಡಿದ್ದರಂತೆ. ನಂಬಿದ ದೇವರು ಕೈಬಿಡೋದಿಲ್ಲ ಎಂದು ಮಾತಿನಂತೆ ಕೆ.ಸಿ.ನಾರಾಯಣಗೌಡ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆದ್ದು ಬಂದರು. ಇದರೊಂದಿಗೆ ಬಿಜೆಪಿಯ ಬಾವುಟ ಕಟ್ಟಲು ಜನರಿಲ್ಲದ ಊರಿನಲ್ಲಿ ಕಮಲವೇ ಅರಳುವಂತೆ ಮಾಡಿದರು. ಇವೆಲ್ಲವು ತಾಯಿ ಚಾಮುಂಡಿ ಕೃಪೆಯಿಂದ ಆಗಿದ್ದು, ಅಂದುಕೊಂಡಂತೆ ಆಗಿದ್ದಕ್ಕೆ ಇಂದು ನಾರಾಯಣಗೌಡ ಅವರು ಕಟ್ಟಿಕೊಂಡಿದ್ದ ಹರಕೆ ತೀರಿಸಿದ್ದಾರೆ. ಕುಟುಂಬ ಸಮೇತರಾಗಿ ಚಾಮುಂಡಿ ಸನ್ನಿಧಿಗೆ ಬಂದ ನೂತನ ಶಾಸಕ ಕೆ.ಸಿ.ನಾರಾಯಣಗೌಡ ಗೆಲುವಿಗೆ ಕಾರಣರಾದ ದೇವರಿಗೆ ನಮಸಿದ್ದಾರೆ. ಮೆಟ್ಟಿಲು ಹತ್ತಿಕೊಂಡೇ ಚಾಮುಂಡಿಬೆಟ್ಟಕ್ಕೆ ಬಂದು ಹರಕೆ ತೀರಿಸಿದ್ದಾರೆ.

ಇದನ್ನು ಓದಿ: ಪೌರತ್ವ ವಿರೋಧಿ ಹೋರಾಟ ರಾಜಕೀಯ ಷಡ್ಯಂತ್ರ ; ಬಿ ವೈ ವಿಜಯೇಂದ್ರ

ಮನಸ್ಸಿನಲ್ಲಿ ಕಟ್ಟಿಕೊಳ್ಳುವ ಹರಕೆ ಈಡೇರಿದರೆ ಹರಕೆ ಕಟ್ಟಿಕೊಂಡಿದ್ದ ದೇವರಿಗೆ ಹರಕೆ ಈಡೇರಿಸೋದು ಪುರಾಣದಿಂದ ಬಂದ ಪ್ರತಿತಿ. ಅಂದುಕೊಂಡಂತೆ ಆಗಿದ್ದಕ್ಕೆ ಕೆ.ಆರ್.ಪೇಟೆ ನೂತನ ಬಿಜೆಪಿ ಶಾಸಕ ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ್ದಾರೆ. ಅಂದು ಮನಸ್ಸಿನಲ್ಲೇ ಕಟ್ಟಿಕೊಂಡಿದ್ದ ಹರಕೆಯನ್ನು ಇಂದು ಪತ್ನಿ ದೇವಕಿ ಜೊತೆ ಆಗಮಿಸಿ ಈಡೇರಿಸಿದ್ದಾರೆ. ಬೆಳಗ್ಗೆಯೇ ಚಾಮುಂಡಿಬೆಟ್ಟದ ತಪ್ಪಲಿಗೆ ಆಗಮಿಸಿ ಬೆಟ್ಟದ ಮೆಟ್ಟಿಲುಗಳ ಬಳಿ ಪೂಜೆ ಸಲ್ಲಿಸಿದ ನಾರಾಯಣಗೌಡ, ನಂತರ ಮೆಟ್ಟಿಲುಗಳ ಬಳಿಯೇ 101 ತೆಂಗಿನ ಕಾಯಿಯನ್ನು ಹೊಡೆದು ನಮಸ್ಕರಿಸಿದರು. ನಂತರ ಬರಿಗಾಲಿನಲ್ಲಿ ಪತ್ನಿ ಹಾಗೂ ಆಪ್ತರ ಜೊತೆ 1001 ಮೆಟ್ಟಿಲುಗಳನ್ನು ಏರಿದರು. ಮೆಟ್ಟಿಲುಗಳ ಸಮೀಪ ಇರುವ ಬೃಹತ್‌ ನಂದಿ ವಿಗ್ರಹಕ್ಕೂ ಪೂಜೆ ಸಲ್ಲಿಸಿದರು. ಬೆಟ್ಟದ ಮೇಲೆ ತೆರಳುತ್ತಿದ್ದಂತೆ ಮಹಿಳೆಯೊಬ್ಬರು ಕಮಲ ನೀಡಿ ನಾರಾಯಣಗೌಡರನ್ನು ಬರಮಾಡಿಕೊಂಡರು. ನಂತರ ಚಾಮುಂಡೇಶ್ವರಿ ಉತ್ಸವಮೂರ್ತಿಯುಳ್ಳ ಬೆಳ್ಳಿ ರಥೋತ್ಸದಲ್ಲಿ ಭಾಗಿಯಾಗಿ, ಪತ್ನಿ ಸಮೇತ ಬೆಳ್ಳಿ ರಥ ಎಳೆದು ಚಾಮುಂಡಿಗೆ ನಮಿಸಿದರು. ನಂತರ ದೇವಾಲಯದ ಮೂಲ ವಿಗ್ರಹದ ದರ್ಶನ ಮಾಡಿ, ವಿಶೇಷ ಪೂಜೆಯೊಂದಿಗೆ ಸಿಎಂ ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆಯನ್ನು ಮಾಡಿಸಿದರು. ಎಲ್ಲವು ಅಂದುಕೊಂಡಂತೆ ನೆರವೇರಿದ್ದಕ್ಕೆ ನಾಡದೇವತೆಗೆ ಭಕ್ತಿಪೂರ್ವಕ ನಮಸ್ಕಾರ ಹಾಕಿದ ನಾರಾಯಣಗೌಡ ಮನಸ್ಸಿನಿಂದಲೇ ಚಾಮುಂಡಿಗೆ ಧನ್ಯವಾದ ಹೇಳಿದರು.
First published:December 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ