D K Shivakumar: ತಾಯಿ ಚಾಮುಂಡೇಶ್ವರಿ ನನ್ನ ಶತ್ರುಗಳನ್ನು ನಾಶ ಮಾಡು

ದೇವಿ ಹತ್ತಿರ ಏನು ವರ ಕೇಳಿದ್ರಿ ಪ್ರಶ್ನೆಗೆ ಉತ್ತರ ನೀಡಿದ ಡಿಕೆ ಶಿವಕುಮಾರ್​,  ಎಲ್ಲಾ ನನ್ನ ವೈರಿಗಳು, ತೊಂದರೆ ಮಾಡುತ್ತಿರುವ ಎಲ್ಲಾ ಸಮಸ್ಯೆಗಳನ್ನ ದೂರ ಮಾಡು, ಎಲ್ಲರ ಕಷ್ಟವನ್ನು  ದೂರ ಮಾಡು ಎಂದು ಕೇಳಿಕೊಂಡಿರೋದಾಗಿ ಹೇಳಿದ್ರು.

ಡಿ.ಕೆ ಶಿವಕುಮಾರ್

ಡಿ.ಕೆ ಶಿವಕುಮಾರ್

  • Share this:
ರಾಮನಗರ (ಜು.28): ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ (Chamundeshwari Devi) ದರ್ಶನ ಪಡೆದ ಡಿ.ಕೆ.ಶಿವಕುಮಾರ್ (D. K Shivakumar) ಅರ್ಧಗಂಟೆಗೂ ಹೆಚ್ಚು ಕಾಲ ಪೂಜೆ ಸಲ್ಲಿಸಿದರು. ಬಳಿಕ ಡಿಕೆಶಿ ಮಾತನಾಡಿ ಇಡಿ ವಿಚಾರಣೆ ಹಿನ್ನೆಲೆ ಬೆಳಿಗ್ಗೆ ದೆಹಲಿಗೆ ಹೋಗುತ್ತಿದ್ದೇನೆ, ಕೆಲವರು ಏನೇನೋ ಆಸೆ ಪಡುತ್ತಿದ್ದಾರೆ. ಕೆಲವರಿಗೆ ಪಾಪ ಬಹಳ ಆಸೆಗಳು ಇದ್ದಾವೆ. ಮತ್ತೆ ನಮ್ಮನ್ನ ಇಡಿಯಲ್ಲಿ ಸಿಕ್ಕಿ ಹಾಕಿಸೋದ್ದಕ್ಕೆ ತಯಾರಿಗಳು ನಡೀತಿದ್ದಾವೆ. ಇಲ್ಲ ಅಂತ ಹೇಳೊದಿಲ್ಲ. ಈ ದೇವಿ ಇದ್ದಾಳೆ ನನ್ನ ರಕ್ಷಣೆ ಮಾಡೋದಕ್ಕೆ. ಏನಾದ್ರು ತಪ್ಪು ಮಾಡಿದ್ರೆ ಶಿಕ್ಷೆ ಕೊಡುತ್ತಾಳೆ, ಏನೂ ತಪ್ಪು ಮಾಡಿಲ್ಲ ಅಂದ್ರೆ ಈ ದೇವಿಯೇ ಎಲ್ಲಾ ನೋಡಿಕೊಳ್ಳುತ್ತಾಳೆ ಎಂದು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. 

ಸೋನಿಯಾ, ರಾಹುಲ್ ನನ್ನೇ ಬಿಡ್ತಿಲ್ಲ ನಮ್ಮನ್ನ ಬಿಡ್ತಾರಾ..?

ಆಗಸ್ಟ್ ನಲ್ಲೇ ಖೆಡ್ಡಾ ತೋಡುತ್ತಾರೆ ಅಂತ ಮೊದಲೇ ಅವ್ರೇ ಹೇಳಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಏನೇನ್ ಮಾಡುತ್ತಾರೆ ಅನ್ನೋದನ್ನ ನಿಧಾನವಾಗಿ ಹೇಳ್ತೀನಿ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನೇ ಬಿಡ್ತಿಲ್ಲ ನಮ್ಮನ್ನ ಬಿಡ್ತಾರಾ..? ಎಂದರು.‌

ನನ್ನನ್ನು ಸಮಸ್ಯೆಗಳಿಂದ ಮುಕ್ತಗೊಳಿಸು 

ದೇವಿ ಹತ್ತಿರ ಏನು ವರ ಕೇಳಿದ್ರಿ ಪ್ರಶ್ನೆಗೆ ಉತ್ತರ ನೀಡಿದ ಡಿಕೆ ಶಿವಕುಮಾರ್​,  ಎಲ್ಲಾ ನನ್ನ ವೈರಿಗಳು, ತೊಂದರೆ ಮಾಡುತ್ತಿರುವ ಎಲ್ಲಾ ಸಮಸ್ಯೆಗಳನ್ನ ದೂರ ಮಾಡು, ಎಲ್ಲರ ಕಷ್ಟವನ್ನು  ದೂರ ಮಾಡು, ದುರ್ಗಾ ದೇವಿಯಾ ಸ್ವರೂಪವಾದಂತಹ ಚಾಮುಂಡೇಶ್ವರಿ ಇಲ್ಲಿ ನೆಲೆಸಿದ್ದೀಯಾ. ಈ ಭಾಗದ ಜನರಿಗೆ ನೆಮ್ಮದಿ ಭಾಗ್ಯವನ್ನ ಕರುಣಿಸು ಅಂತ ಕೇಳಿಕೊಂಡಿದ್ದೇನೆ. ಒಳ್ಳೆ ಮಳೆ, ಬೆಳೆಯಾಗಲಿ.. ಯಾರಿಗೂ ಅನ್ಯಾಯವಾಗಬಾರದು ನ್ಯಾಯವನ್ನ ಒದಗಿಸಿಕೊಡು ತಾಯಿ ಅಂತ ಕೇಳಿಕೊಂಡಿದ್ದೇನೆ ಎಂದರು.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ

ಜನೋತ್ಸವ ರದ್ದು ವಿಚಾರವಾಗಿ ಮಾತನಾಡಿ ಒಳ್ಳೆಯ ನಿರ್ಧಾರವನ್ನ ಸಿಎಂ ಮಾಡಿದ್ದಾರೆ. ಸಿಎಂ ಅವರಿಗೆ ಅಭಿನಂದಿಸುತ್ತೇನೆ. ಅವರು ಜನೋತ್ಸವ ಮಾಡುವ ಅವಶ್ಯಕತೆ ಇಲ್ಲ ಅಂತ ಮೊದಲೇ ಹೇಳಿದ್ದೆ ಎಂದರು. ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರವಾಗಿ ಮಾತನಾಡಿ ಅವ್ರು ಇನ್ನೂ ಯುವಕ, ಪಕ್ಷದ ಕಾರ್ಯಕರ್ತರ ನೋವು ನಮಗೆ ಅರಿವಿದೆ. ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ ಜೊತೆಗೆ ಸಿಎಂಗೆ ಒತ್ತಾಯ ಮಾಡುತ್ತೇನೆ.‌ ಏನೆಲ್ಲಾ ಕಾನೂನುಗಳಿವೆ ಅದನ್ನ ಬಳಸಿಕೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು.

ತೇಜಸ್ವಿ ಸೂರ್ಯಗೆ ನಲಪಾಡ್ ಟಾಂಗ್

ಆ ಎಲ್ಲಾ ಕಾರ್ಯಕರ್ತರಿಗೆ ಧೈರ್ಯ ತುಂಬುವಂತಹ ಕೆಲಸವನ್ನ ಮಾಡಬೇಕು. ಯಾವುದೇ ಪಕ್ಷವಾಗಲಿ, ಧರ್ಮವಾಗಲಿ ನಾವು ನೀವು ರಾಜಕಾರಣ ಮಾಡೋದು ಬೇಡ ಎಂದರು. ಇನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ನಲಪಾಡ್ ಟಾಂಗ್ ನೀಡಿದರು. ತೇಜಸ್ವಿ ಸೂರ್ಯರ ಮನಸ್ಥಿತಿ ಈಗ ಗೊತ್ತಾಗಿದೆ. ಕಾಂಗ್ರೆಸ್ ನವರು ಏನ್ ಮಾಡ್ತಿದ್ದರು, ಅವರಿಗೆ ಜನಪರ ಕಾಳಜಿ ಇಲ್ಲ. ನಾಡಿನ ಜನತೆ ಬಗ್ಗೆ ಬಿಜೆಪಿ ಬಗ್ಗೆ ಕಾಳಜಿಯಿಲ್ಲ.  ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿಚಾರವಾಗಿ ಮಾತನಾಡಿ ಇದು ಸರ್ಕಾರದ ಇಂಟೆಲಿಜೆನ್ಸ್ ಫೇಲೂರ್ ಅಗಿದೆ. ಇವರದ್ದೇ ಸರ್ಕಾರ ಇದೇ ಡಬಲ್ ಇಂಜಿನ್ ಸರ್ಕಾರ. ತಾಕತ್ತಿದ್ದರೆ PFI, SDPI ಬ್ಯಾನ್ ಮಾಡಲಿ, ಕೋಮುವಾದಿ ಇದ್ದರೆ ಎಲ್ಲವನ್ನೂ ಬ್ಯಾನ್ ಮಾಡಲಿ. RSS ಸಹ ಒಂದೇ ಜಾತಿ ಎಂದು ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.

300 ರೂ ಪೇಮೆಂಟ್ ನೀಡಿ ಬೈಕ್ ರ್ಯಾಲಿ 

ಕಾಂಗ್ರೆಸ್ ರ್ಯಾಲಿಯಲ್ಲಿ ಕುರುಡು ಕಾಂಚಾಣ ತಾಂಡವವಾಡಿತು.‌ ತಲೆಗೆ 300 ರೂ ಕೊಟ್ಟು ಬೈಕ್ ರ್ಯಾಲಿ ಮಾಡಿಸಿಕೊಂಡ ಕೈ ನಾಯಕರು ಮಾಧ್ಯಮದವರನ್ನ ಕಂಡು ಚೆಲ್ಲಾಪಿಲ್ಲಿಯಾಗಿ ಓಡಿದ್ರು.  ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ ನಡೆಸಿತು. 2023 ರ ಚುನಾವಣೆ ಹಿನ್ನೆಲೆ ಡಿಕೆಶಿ ಎಂಟ್ರಿಯಾಗಿದ್ದು ನಗರದಲ್ಲಿ ಬೈಕ್ ರ್ಯಾಲಿ ಮೂಲಕ ಕಾಂಗ್ರೆಸ್ ಸಂಘಟನೆ ಪ್ರಾರಂಭಿಸಿತು. ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರ್ಯಾಲಿ ನಡೆಸಿ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಡಿಕೆಶಿ ಗೆ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಬಂದಿದ್ದ ಜನರಿಗೆ ರಾಜರೋಷವಾಗಿ ಹಣ ಕೊಟ್ಟು ಜೈಕಾರ ಹಾಕಿಸಿಕೊಡ ಘಟನೆ ನಡೆದಿದೆ.
Published by:Pavana HS
First published: